ಬೆಲ್ಲದ ಕಟ್ಟೆಯ ಕಟ್ಟಿ...

ಬೆಲ್ಲದ ಕಟ್ಟೆಯ ಕಟ್ಟಿ...

ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टितम्।
पयोवर्षसहस्रेण निम्बः किं मधुरं यते॥

ಕೊಸರು:
ಇದೇ ತಿಳಿವುಳ್ಳ ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಅನ್ನುವ ಬಸವಣ್ಣನವರ
ವಚನ, ಮತ್ತು ಬೇವು ಬೆಲ್ಲದೊಳಿಡಲೇನು ಫಲ? ಎಂಬ ಪುರಂದರ ದಾಸರ ರಚನೆಗಳು ಬಹಳ
ಹೆಸರುವಾಸಿಯಾಗಿವೆ.

-ಹಂಸಾನಂದಿ

Rating
No votes yet

Comments