ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು,,,,,,,,

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು,,,,,,,,

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ವ್ರುಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು, ಎಂದು ಅಡಿಗರ ಭಾವಗೀತೆ ರತ್ನಮಾಲ ಪ್ರಕಾಶ್ ರವರ ಮಧುರ ಕಂಠದಲ್ಲಿ ಕಾರಿನ ತುಂಬಾ ತುಂಬಿಕೊಂಡಿತ್ತು. ಸಂಯುಕ್ತ ಅರಬ್ ರಾಷ್ಟ್ರದ ದುಬೈ ನಗರಕ್ಕೆ ಬಂದಿದ್ದು ಹಣ ಸಂಪಾದನೆಗಾಗಿ, ಸುಂದರ ಕನಸುಗಳೊಂದಿಗೆ, ನಮ್ಮ ಸುಂದರ ಉದ್ಯಾನ ನಗರಿಯಲ್ಲಿ ಸಿಗದಿದ್ದ ಅವಕಾಶ, ಸವಲತ್ತುಗಳು ಇಲ್ಲಿ ಸಿಕ್ಕಿದವು. ೫೭ ಪರೀಕ್ಷೆಗಳನ್ನು ಬರೆದರೂ ಒಂದು ಸರ್ಕಾರಿ ಕೆಲಸ ಸಿಕ್ಕದಿದ್ದಾಗ, ಮನ ಕುಗ್ಗಿ ಹೋಗಿತ್ತು. ಆತ್ಮ ವಿಶ್ವಾಸ ಬತ್ತಿ ಹೋಗಿತ್ತು. ಇನ್ನೆಲ್ಲಿ ನಿನಗೆ ನೆಲೆ ಎಂದು ಹ್ರುದಯ ಅಳುತ್ತಿತ್ತು. ಆಗ ಬಂತು ಕರೆ, ದುಬೈನ ಕೆಲಸಕ್ಕೆ, ಅಲ್ಲಿ ಸಿಗದಿದ್ದುದು ಎಲ್ಲಾ ಇಲ್ಲಿ ಕೈಗೆ ಸಿಕ್ಕಿದೆ.

ಕಳೆದು ಹೋದವು ಎರಡು ವರ್ಷಗಳು, ದುಬೈಗೆ ಬಂದು, ಗಳಿಸಿದ್ದಾಯ್ತು ಸಾಕಷ್ಟು ಹಣ, ಆದರೆ ಅದಕ್ಕೆ ತೆತ್ತ ಬೆಲೆ, ನನ್ನವರಿಂದ ದೂರಾಗಿ ಅನ್ಯರ ನಾಡಿನಲ್ಲಿ ಅಪರಿಚಿತನಂತೆ ಬದುಕಿ ಮನದ ಯಾವುದೇ ಭಾವನೆಗಳನ್ನೂ ಯಾರೊಂದಿಗೂ ಹೇಳಿಕೊಳ್ಳಲಾಗದೆ ಒಂಟಿಯಾಗಿ ಬದುಕುವಾಗ ಮನಸ್ಸು ಹೇಳಿತು ನನಗೆ, "ಇದಲ್ಲ ಜೀವನ, ಹೋಗು ನಿನ್ನ ತಾಯ್ನಾಡಿಗೆ, ಬದುಕು ನಿನ್ನವರೊಂದಿಗೆ, ಅರೆ ಹೊಟ್ಟೆಯಾಗಲಿ, ಹರುಕು ಬಟ್ಟೆಯಾಗಲಿ, ಅಲ್ಲಿದೆ ಪ್ರೀತಿ, ಇಲ್ಲಿದೆ ಬರೀ ಮರಳು". ಆದರೆ ಒಂದೆಡೆ ಮೇಲೆದ್ದ ಅಹಂ ಹೇಳಿತು, 'ಇಲ್ಲ ನೀ ಇಲ್ಲೇ ಇರು, ಇನ್ನೂ ಹೆಚ್ಚು ಹಣ ಸಂಪಾದಿಸು'.

ಹ್ರುದಯದ ಮಾತು ಕೇಳುವುದೋ ಅಥವಾ ಮನಸ್ಸಿನ ಮಾತು ಕೇಳುವುದೋ ?

ಅರಿಯದಾಗಿದೆ ಇದು ಯಾವ ಮೋಹನ ಮುರಳಿ ಕರೆದು ಬೀಸಿದ ಪಾಶ !!

ಸಂಪದಿಗರಿಗಾಗಿ ಪ್ರೀತಿಯಿಂದ.............

Rating
No votes yet

Comments