ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯೆಂದರೇನು?

ವ್ಯಾಲೆಂಟನ್ಸ್ ದಿವಸ ಹತ್ತಿರ ಬರುತ್ತಿದೆ. ಇವತ್ತಿನ ಬ್ಲಾಗುಗಳನ್ನು ನೋಡಿದಾಗ ನನ್ನ ಮನದಲ್ಲೆದ್ದ ಪ್ರಶ್ನೆಗಳಿವು. ಪ್ರೀತಿಯೆಂದರೆ ನಾವೊಂದು ಚೌಕಟ್ಟು ನೀಡ್ತೇವೆ. ಗಂಡ ಹೆಂಡಿರ ಮಧ್ಯೆ ಇಲ್ಲವೇ, ತಾಯಿ ಮಗುವಿನ ಪ್ರೀತಿ, ಅಣ್ಣ ತಂಗಿಯರ ಪ್ರೀತಿ ಹೀಗೆ. ಯಾವುದೇ ಪರ ಪುರುಷ ಮತ್ತು ಸ್ತ್ರೀ ಪ್ರೀತಿಸಲು ಸಾಧ್ಯವಿಲ್ಲವೇ?

ಗ್ನು/ಲಿನಕ್ಸ್ ಹಬ್ಬ (೩): ಮೊದಲ ಚಿತ್ರಗಳು

ಗ್ನು/ಲಿನಕ್ಸ್ ಹಬ್ಬ ಸ್ವತಂತ್ರ ತಂತ್ರಾಂಶದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ, ಗ್ನು/ಲಿನಕ್ಸ್ ಬಳಕೆಯನ್ನು ಅತಿ ಸಾಮಾನ್ಯ ಬಳಕೆದಾರರಿಗೂ ತಲುಪಿಸುವ ಉದ್ದೇಶದಿಂದ ಪ್ರಾರಂಭವಾದ ಯೋಜನೆ. ಮೊದಲ ಆವೃತ್ತಿ ಬೆಂಗಳೂರಿನಲ್ಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಸ್ - ಸೂಪರ್ ಕಂಪ್ಯೂಟಿಂಗ್ ಡಿಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಎರಡನೆಯ ಆವೃತ್ತಿ - ಮೈಸೂರು ವಿಶ್ವವಿದ್ಯಾಲಯದಲ್ಲಿ, ಫಿಸಿಕ್ಸ್ ಡಿಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಮೂರನೆಯ ಆವೃತ್ತಿ ಮೊನ್ನೆ ಶನಿವಾರ, ಫೆಬ್ರವರಿ ಏಳರಂದು ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯಿತು.

ಈ ಮೂರು ಕಾರ್ಯಕ್ರಮಗಳಲ್ಲೂ ನಮಗೆ ಭಾಗವಹಿಸುವವರಲ್ಲಿ ಕಂಡು ಬಂದ ಆಸಕ್ತಿ, ಗ್ನು/ಲಿನಕ್ಸ್ ಕುರಿತು ಜನರಲ್ಲಿ ಕಂಡುಬಂದ ಉತ್ಸಾಹ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಇದೇ ಪ್ರೋತ್ಸಾಹ ಮೂರನೆಯ ಸಂಚಿಕೆಯಲ್ಲಿ ಹೊಸತೊಂದು ಪ್ರಯತ್ನಕ್ಕೆ ಕೈಹಾಕುವಲ್ಲಿ ಹುರಿದುಂಬಿಸಿತು - ಅದೇ ಕನ್ನಡ 'out of box' ಲಭ್ಯವಿರುವ ನಮ್ಮದೇ ಒಂದು ಗ್ನು/ಲಿನಕ್ಸ್ ವಿತರಣೆ ಪ್ರಾರಂಭಿಸಿದ್ದು! ಈ ವಿತರಣೆ ಗ್ನು/ಲಿನಕ್ಸ್ ವಿತರಣೆಗಳಲ್ಲಿ ಅತಿ ಉತ್ತಮ ವಿತರಣೆ ಎನಿಸಿಕೊಂಡಿರುವ ಡೆಬಿಯನ್ ವಿತರಣೆಯನ್ನು ಮೂಲವಾಗಿರಿಸಿಕೊಂಡು ತಯಾರಾದದ್ದು. ಇಷ್ಟು ದಿನ ಈಗಾಗಲೇ ಲಭ್ಯವಿರುವ ವಿತರಣೆಗಳನ್ನು re-master ಮಾಡಿ ಸಿಡಿ ತಲುಪಿಸುತ್ತಿದ್ದೆವು. ಈಗ ಕನ್ನಡಕ್ಕಾಗಿಯೇ ಮೀಸಲಾದ ಹೊಸತೊಂದು ವಿತರಣೆ! ಈ ವಿತರಣೆ ಪ್ರತಿ ಹಬ್ಬಕ್ಕೂ ಉತ್ತಮಗೊಳ್ಳುತ್ತ ಹೋಗುವುದೆಂಬುದು ಆಶಯ. 

ಪ್ರೀತಿಯೆಂದರೇನು?

ತಾಯಿಯ ಮಮತೆ
ತಂದೆಯ ವಾತ್ಸಲ್ಯ
ಗುರುವಿನ ಕಕ್ಕುಲತೆ
ಹಿರಿಯರ ಹಾರೈಕೆ
ಕಿರಿಯರ ವಾಂಛಲ್ಯ
ಸಖನ ಪ್ರೇಮ
ಎಲ್ಲವೂ ಪ್ರೀತಿಯ ರೀತಿಗಳಾದರೆ
ಪ್ರೀತಿಯೆಂದರೇನು?

ಹೆತ್ತವರಿಗೆ ಗೌರವ
ಗುರುಗಳಿಗೆ ಭಕ್ತಿ
ಹಿರಿಯರಿಗೆ ಮರ್ಯಾದೆ
ಕಿರಿಯರಿಗೆ ಅಕ್ಕರೆ
ಗೆಳೆಯರಿಗೆ ಸ್ನೇಹ
ಪ್ರಿಯಕರನಿಗೊಲವು
ಎಲ್ಲವೂ ಪ್ರೀತಿಯ ಅಭಿವ್ಯಕ್ತಿಗಳಾದರೆ
ಪ್ರೀತಿಯೆಂದರೇನು?

ಕರುಳಿನ ಕರೆ

ಆಟಿಕೆ ಸಾಮಾನುಗಳು

ಮಗನೇ,
ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ
ಮುರಿದ ಆಟಿಕೆಯೊಂದಿಗೆ ಆಡುತ್ತಾ
ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ
ನೀನೆಷ್ಟೊಂದು ಸುಖಿ!?
ನಿನ್ನ ಆಟವೇನಿದ್ದರೂ
ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ!
ಆದರೂ ಎಷ್ಟೊಂದು ಖುಶಿ, ಸಂತೋಷ ನಿನಗೆ!
ನಾನೊಬ್ಬ ಮೂರ್ಖ
ನನಗೆ ತಿಳಿಯದು ಅವುಗಳ ಬೆಲೆ

ನೋಡದೆ ಸೆಳದವಳು

ನನ್ನ ಹುಡುಗಿ

ನೋಡದೆ ಸೆಳೆದಳು ಕಣ್ಣಂಚಿನಲ್ಲೇ
ಮಾತಾಡದೆ ಬಂದಳು ಮೌನದಲ್ಲೇ
ನಲಿಯುತಾ ನಗುತಾ ಬರುವ
ನಗುವಲ್ಲೇ ನನ್ನ ಸೆಳೆಯುವ
ಹುಡುಗಿ ನೀ ಬರೀ ಚೂಟಿಯಲ್ಲ
ಘಾಟಿ ಹುಡುಗಿ,

ವಿಪರ್ಯಾಸ

ಮನಸ ಸಳೆದ ನಲ್ಲೆ
ನಿನ್ನ ವರಿಸಲು ನಾ
ಬಂದಿರಬೇಕಿತ್ತು ನಾ ಮೊದಲು ಭೂಮಿಗೆ

ಕನಸ ಕದ್ದ ಕೋಮಲೆ
ನನಗಾಗಿ ನೀ ಇದ್ದೆಯೆಂದಾಗಲೇ
ಗೊತ್ತಿದ್ದರೆ ನೀ ಬರಬೇಕಿತ್ತು ಇಳೆಗೆ

ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

(ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ?

(ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ!

:)
--ಶ್ರೀ

ವನವಾಸಿ ಕಲ್ಯಾಣ - ವನವಾಸಿ ಜನರಿಗೊಂದು ಆಶಯ

ಏನಿದು ವನವಾಸಿ ಕಲ್ಯಾಣ?
ಒಂದು ಸಮಾಜ ಕಲ್ಯಾಣ ಕಾರ್ಯಕ್ರಮ. ಗಿರಿಜನರಿಗೆ, ವನವಾಸಿಗಳಿಗೆ, ಬಡಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರಿಗೆ ಜೀವನ ನಡೆಸಲು ಸಹಾಯ ಮಾಡುವ ಒಂದು ನೇರ, ದಿಟ್ಟ, ನಿರಂತರ ಪ್ರಯತ್ನ. ಇಲ್ಲಿ ಅನ್ನ ದಾಸೋಹ, ವಿದ್ಯಾ ದಾಸೋಹ ಮತ್ತು ಆರೋಗ್ಯ ದಾಸೋಹ ಕಾರ್ಯಗಳು ನಡೆಯುತ್ತಿವೆ.

ಕೇಸರೀಕರಣ-ಹಾಗೆಂದರೇನು?

ಮೊನ್ನೆಹಾಸನದಲ್ಲೊಂದು
ವಿಶಿಷ್ಟ ಕಾರ್ಯಕ್ರಮ.ಸಂಜೆ ಐದರ ವೇಳೆ.ಸೂರ್ಯನಿನ್ನೂ  ತಂಪಾಗಿಯೇ ಇಲ್ಲ. ಬಿಸಿಲಿನ
ಝಳ.  ಸುಮಾರು ಎರಡುಸಾವಿರ ಯುವಕರು ಕಣ್ಣು ಮಿಟುಕಿಸದೆ ಕುಳಿತು ಭಾಷಣ ಕೇಳುತ್ತಿದ್ದಾರೆ.ಕಂಚಿನಕಂಠದಿಂದ
ಹೊರಬರುತ್ತಿರುವ ಮಾತುಗಳನ್ನು ಆ ತರುಣರಷ್ಟೇ ಅಲ್ಲ ಹಾಸನದ ಜನತೆಕೂಡ  ಆ ಬಿಸಿಲಿನ ಝಳವನ್ನು   ಲೆಕ್ಕಿಸದೆ

ವಿದ್ಯಾಗಣಪತಿ ದೇವಾಲಯ, ಮಂಡ್ಯ

ಶ್ರೀ ವಿದ್ಯಾಗಣಪತಿ ದೇವಾಲಯ, ವಿದ್ಯಾನಗರ, ಮಂಡ್ಯ ಇಲ್ಲಿ ಹೊಸದಾಗಿ ಕಟ್ಟಿರುವ ವಸತಿಗ್ಘಹಗಳು, ಸಭಾಭವನ ಹಾಗೂ ಯಾಗಮಂಟಪಗಳ ಉಧ್ಘಾಟನೆಯು ದಿ;೧೪ ಹಾಗೂ ೧೫ ಫೆಬ್ರವರಿ ೨೦೦೯ ರಂದು ನಡೆಯಲಿದ್ದು, ಶಿವಗಂಗಾ ಮಠಾಧೀಶರು ಈ ಕಾರ್ಯ ನೆರವೇರಿಸಲಿದ್ದಾರೆ.