ಗ್ನು/ಲಿನಕ್ಸ್ ಹಬ್ಬ (೩): ಮೊದಲ ಚಿತ್ರಗಳು

ಗ್ನು/ಲಿನಕ್ಸ್ ಹಬ್ಬ (೩): ಮೊದಲ ಚಿತ್ರಗಳು

ಬರಹ

ಗ್ನು/ಲಿನಕ್ಸ್ ಹಬ್ಬ ಸ್ವತಂತ್ರ ತಂತ್ರಾಂಶದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ, ಗ್ನು/ಲಿನಕ್ಸ್ ಬಳಕೆಯನ್ನು ಅತಿ ಸಾಮಾನ್ಯ ಬಳಕೆದಾರರಿಗೂ ತಲುಪಿಸುವ ಉದ್ದೇಶದಿಂದ ಪ್ರಾರಂಭವಾದ ಯೋಜನೆ. ಮೊದಲ ಆವೃತ್ತಿ ಬೆಂಗಳೂರಿನಲ್ಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಸ್ - ಸೂಪರ್ ಕಂಪ್ಯೂಟಿಂಗ್ ಡಿಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಎರಡನೆಯ ಆವೃತ್ತಿ - ಮೈಸೂರು ವಿಶ್ವವಿದ್ಯಾಲಯದಲ್ಲಿ, ಫಿಸಿಕ್ಸ್ ಡಿಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಮೂರನೆಯ ಆವೃತ್ತಿ ಮೊನ್ನೆ ಶನಿವಾರ, ಫೆಬ್ರವರಿ ಏಳರಂದು ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯಿತು.

ಈ ಮೂರು ಕಾರ್ಯಕ್ರಮಗಳಲ್ಲೂ ನಮಗೆ ಭಾಗವಹಿಸುವವರಲ್ಲಿ ಕಂಡು ಬಂದ ಆಸಕ್ತಿ, ಗ್ನು/ಲಿನಕ್ಸ್ ಕುರಿತು ಜನರಲ್ಲಿ ಕಂಡುಬಂದ ಉತ್ಸಾಹ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಇದೇ ಪ್ರೋತ್ಸಾಹ ಮೂರನೆಯ ಸಂಚಿಕೆಯಲ್ಲಿ ಹೊಸತೊಂದು ಪ್ರಯತ್ನಕ್ಕೆ ಕೈಹಾಕುವಲ್ಲಿ ಹುರಿದುಂಬಿಸಿತು - ಅದೇ ಕನ್ನಡ 'out of box' ಲಭ್ಯವಿರುವ ನಮ್ಮದೇ ಒಂದು ಗ್ನು/ಲಿನಕ್ಸ್ ವಿತರಣೆ ಪ್ರಾರಂಭಿಸಿದ್ದು! ಈ ವಿತರಣೆ ಗ್ನು/ಲಿನಕ್ಸ್ ವಿತರಣೆಗಳಲ್ಲಿ ಅತಿ ಉತ್ತಮ ವಿತರಣೆ ಎನಿಸಿಕೊಂಡಿರುವ ಡೆಬಿಯನ್ ವಿತರಣೆಯನ್ನು ಮೂಲವಾಗಿರಿಸಿಕೊಂಡು ತಯಾರಾದದ್ದು. ಇಷ್ಟು ದಿನ ಈಗಾಗಲೇ ಲಭ್ಯವಿರುವ ವಿತರಣೆಗಳನ್ನು re-master ಮಾಡಿ ಸಿಡಿ ತಲುಪಿಸುತ್ತಿದ್ದೆವು. ಈಗ ಕನ್ನಡಕ್ಕಾಗಿಯೇ ಮೀಸಲಾದ ಹೊಸತೊಂದು ವಿತರಣೆ! ಈ ವಿತರಣೆ ಪ್ರತಿ ಹಬ್ಬಕ್ಕೂ ಉತ್ತಮಗೊಳ್ಳುತ್ತ ಹೋಗುವುದೆಂಬುದು ಆಶಯ. 

ಚಿತ್ರಗಳು:

  • ಈ ಸಂಚಿಕೆಯ ಹಬ್ಬಕ್ಕೆ ರೆಡಿ ಮಾಡಿದ ಆವೃತ್ತಿ - ಡೆಬಿಯನ್ "ಚಿಗುರು" ಸಿ.ಡಿ. ಚಿತ್ರ.
(ಚಿತ್ರ: ಓಂಶಿವಪ್ರಕಾಶ್)
 
ಸಿ.ಡಿ. ವಿನ್ಯಾಸದ ಚಿತ್ರ:
(Inkscape ನಲ್ಲಿ ರೆಡಿ ಮಾಡಿದ್ದು)
  • ಹೊಸ ವಿತರಣೆ ರೆಡಿ ಮಾಡುವ ಕ್ಲಿಷ್ಟಕರ ಕೆಲಸವನ್ನು ತಮ್ಮ ಅನುಭವದಿಂದ ಸುಲಭ ಮಾಡುವುದಲ್ಲದೆ, ಅದನ್ನು ಅತ್ಯಂತ ಕಾಳಜಿವಹಿಸಿ ರೆಡಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಪದಿಗ, ಗ್ನು/ಲಿನಕ್ಸ್ ಹ್ಯಾಕರ್ - ರವಿ, ಅಚ್ಚು ಹಾಕಿಸಿದ ಮೊದಲ ಹಬ್ಬದ ಸಿ.ಡಿಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದು. 

"ಚಿಗುರು" ಹೆಸರನ್ನು ಸೂಚಿಸಿದ ಸಂಪದಿಗ ನಾಗರಾಜ್ ರವರಿಗೆ ವಂದನೆಗಳು. ಅವರಿಗೆ ಗೌರವ ಪ್ರತಿ ಎನ್ನುವಂತೆ "ಚಿಗುರು" ಸಿ.ಡಿ.ಯ ಒಂದು ಕಾಪಿ ಕಳುಹಿಸಲಾಗುವುದು. ಹೆಸರು ಸೂಚಿಸಿದ ಎಲ್ಲರಿಗೂ ಅಭಿನಂದನೆಗಳು, ವಂದನೆಗಳು. ಸೂಚಿಸಲ್ಪಟ್ಟ ಎಲ್ಲ ಹೆಸರುಗಳನ್ನೂ ನಮ್ಮ ಪಟ್ಟಿಯಲ್ಲಿ ಇಟ್ಟುಕೊಂಡಿರುತ್ತೇವೆ. ಮುಂದಿನ ಆವೃತ್ತಿಗೆ ನೀವು ಸೂಚಿಸಿದ ಹೆಸರೇ ಆಯ್ಕೆಯಾಗಬಹುದು. ಕಾದು ನೋಡಿ :-)