ವನವಾಸಿ ಕಲ್ಯಾಣ - ವನವಾಸಿ ಜನರಿಗೊಂದು ಆಶಯ

ವನವಾಸಿ ಕಲ್ಯಾಣ - ವನವಾಸಿ ಜನರಿಗೊಂದು ಆಶಯ

ಏನಿದು ವನವಾಸಿ ಕಲ್ಯಾಣ?
ಒಂದು ಸಮಾಜ ಕಲ್ಯಾಣ ಕಾರ್ಯಕ್ರಮ. ಗಿರಿಜನರಿಗೆ, ವನವಾಸಿಗಳಿಗೆ, ಬಡಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರಿಗೆ ಜೀವನ ನಡೆಸಲು ಸಹಾಯ ಮಾಡುವ ಒಂದು ನೇರ, ದಿಟ್ಟ, ನಿರಂತರ ಪ್ರಯತ್ನ. ಇಲ್ಲಿ ಅನ್ನ ದಾಸೋಹ, ವಿದ್ಯಾ ದಾಸೋಹ ಮತ್ತು ಆರೋಗ್ಯ ದಾಸೋಹ ಕಾರ್ಯಗಳು ನಡೆಯುತ್ತಿವೆ.

ಗಿರಿಜನರ, ವನವಾಸಿಗಳ ತೊಂದರೆಗಳೇನು?
ಒಂದಲ್ಲ, ಎರಡಲ್ಲ.
ಅ) ಮೂಲತ: ಬೆಟ್ಟ, ಕಾಡುಗಳಲ್ಲಿ ವಾಸಿಸುವ ಜನರಿವರು.ಕುಡಿಯುವ ನೀರು, ಪುಷ್ಟಿಕ ಆಹಾರ, ಶಾಲೆ, ಆಸ್ಪತ್ರೆ - ಇವುಗಳಿಗೆ ಕೊರತೆ
ಆ) ಪಟ್ಟಣ, ನಗರ ಜೀವನಕ್ಕೆ ಹೊಂದಿಕೊಳ್ಳಲು ಅಂಜುವ ಸಂಸ್ಕೃತಿ, ಜನರನ್ನು ಕಂಡರೆ ಭಯಪಡುವವರಿವರು.
ಇ) ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲೂ ಬಡತನದ ಅಡ್ಡ

ಗಿರಿಜನರ, ವನವಾಸಿಗಳ ಮೇಲೆ ಎಂಥಹ ಶೋಷಣೆಗಳಾಗುತ್ತಿವೆ?
ಅ) ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ ೧೫ ರೂ ಕೊಡುತ್ತಾರೆ
ಆ) ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ
ಇ) ಕೆಲವರು ಸರ್ಕಾರದ ಅರಣ್ಯ ನೀತಿಗೆ ಗುರಿಯಾಗಿ ಬೆಟ್ಟ,ಕಾಡುಗಳಿಂದ ಹೊರಹಾಕಲ್ಪಟ್ಟು, ಅತ್ತ ಇರುವುದೆಲ್ಲವನ್ನೂ ಕಳೆದುಕೊಂಡು, ಇತ್ತ ಸರ್ಕಾರದಿಂದಲೂ ಏನೂ ಸಿಗದೆ, ಮತ್ತೆ ಗ್ರಾಮ-ಪಟ್ಟಣಗಳ ಸಂಸ್ಕೃತಿಯೊಂದಿಗೆ ಹೊಂದಿಕೊಳ್ಳಲೂ ಆಗದೆ ಬಳಲುತ್ತಿದ್ದಾರೆ
ಈ) ಸಹಾಯದನ ನೀಡಿ ಮತಾಂತರ ಮಾಡಿ ಇವರುಗಳನ್ನು ದೇಶದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ
ಉ) ನಕ್ಸಲೀಯರ ಗುಂಪಿಗೆ ಸೇರಿಸಿಕೊಳ್ಳಲಾಗುತ್ತಿದೆ

ಕರ್ನಾಟಕದಲ್ಲಿ ವನವಾಸಿಗಳು ಎಲ್ಲೆಲ್ಲಿದ್ದಾರೆ?
ದಾಂಡೇಲಿ ಆಭಯಾರಣ್ಯದ ಸುತ್ತ-ಮುತ್ತ, ಕುಮ್ಮಟ, ಶಿರಸಿ, ಯಲ್ಲಾಪುರ ಕಾಡಿನ ಸುತ್ತ-ಮುತ್ತ, ಚಾಮರಾಜಪೇಟೆ, ಪಿರಿಯಪಟ್ಟಣ, ಗುಂಡ್ಲುಪೇಟೆ, ಕೊಡಗು ಇತ್ಯಾದಿ

ವನವಾಸಿ ಕಲ್ಯಾಣದ ಮುಖ್ಯ ಕಾರ್ಯಕ್ರಮಗಳೇನು?
೧) ವನವಾಸಿ ಕಲ್ಯಾಣದ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ಮತ್ತು ವಿದ್ಯಾ ದಾಸೋಹ
೨) ಓದುವ ಮಕ್ಕಳಿಗೆ ವಸತಿ ಸೌಲಭ್ಯ
೩) ಓದುವ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಕ್ರೀಡೆ, ಪಠ್ಯೇತರ ಚಟುವಟಿಕೆಗಳು ಮತ್ತು ಇತರೆ ಶೈಶವಾವಶ್ಯಕ ಸೌಲಭ್ಯಗಳು
೪) ವನವಾಸಿಗರ ತಂಗುದಾಣದಲ್ಲೆ ತಿಂಗಳಿಗೊಮ್ಮೆ ವೈದ್ಯಕೀಯ ಚಿಕಿತ್ಸೆಗಾಗಿ ಶಿಬಿರಗಳ ಏರ್ಪಾಟು

ಕರ್ನಾಟಕದಲ್ಲಿ ವನವಾಸಿ ಕಲ್ಯಾಣದ ವತಿಯಿಂದ ಓದುತ್ತಿರುವ ಒಟ್ಟು ವನವಾಸಿ ಮಕ್ಕಳ ಸಂಖ್ಯೆ ಎಷ್ಟು?
೧೦೫ ಮಕ್ಕಳು ಮತ್ತು ೪೦ ಕಾರ್ಯಕರ್ತರು

ಸುಧಾರಣೆಯ ಹಾದಿಯಲ್ಲಿ ಎದುರಿಸುತ್ತಿರುವ ತೊಂದರೆಗಳು
------------------------------------------------

೧. ಶೈಕ್ಷಣಿಕ ಕಾರ್ಯಕ್ರಮಗಳ ಹಾದಿಯಲ್ಲಿ ಎದುರಿಸುತ್ತಿರುವ ತೊಂದರೆಗಳು
ಅ) ಪಠ್ಯ ಪುಸ್ತಕಗಳು, ಬರೆಯುವ ಪುಸ್ತಕಗಳು, ಲೇಖನಿಗಳು - ಇವುಗಳಿಗೆ ಕೊರತೆ
ಆ) ಇಂಗ್ಲೀಷ್ ಕಲಿಕೆಯ ಅಭಾವ
ಇ) ಕಂಪ್ಯೂಟರ್ ಕಲಿಕೆಯ ಅಭಾವ
ಈ) ಪ್ರಸಕ್ತ ಜಾಗತಿಕ ವಿದ್ಯಮಾನಗಳ ಅರಿವಿನ ಕೊರತೆ

೨. ವಸತಿ ಕಾರ್ಯಕ್ರಮಗಳ ಹಾದಿಯಲ್ಲಿ ಎದುರಿಸುತ್ತಿರುವ ತೊಂದರೆಗಳು
ಅ) ವಸತಿಗೃಹಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ - ಬಿಸಿನೀರು, ಓದಿಕೊಳ್ಳಲು ಕುರ್ಚಿ-ಮೇಜು-ಕಪಾಟು ಇತ್ಯಾದಿ

   ಆ) ವಸತಿಗೃಹಗಳಲ್ಲಿ ಗ್ರಂಥಾಲಯದ ಕೊರತೆ - ಇದರಿಂದ ಪಠ್ಯೇತರ ಕಲಿಕೆ ಸಾಧ್ಯವಾಗುತ್ತಿಲ್ಲ

೩. ವೈದ್ಯಕೀಯ ಕಾರ್ಯಕ್ರಮಗಳ ಹಾದಿಯಲ್ಲಿ ಎದುರಿಸುತ್ತಿರುವ ತೊಂದರೆಗಳು
ಅ) ವೈದ್ಯಕೀಯ ಚಿಕಿತ್ಸೆ ನೀಡುವ ಶಿಬಿರಗಳಲ್ಲಿ ಔಷಧಿಗಳ ಕೊರತೆ

 

ವನವಾಸಿ ಕಲ್ಯಾಣದ ಕಾರ್ಯಕ್ರಮಗಳನ್ನು ನಾವು ಹೇಗೆ ಯಶಸ್ವಿಗೊಳಿಸಬಹುದು?

ವನವಾಸಿ ಕಲ್ಯಾಣದ ಕಾರ್ಯಕರ್ತರನ್ನು ಭೇಟಿಯಾಗಿ ಇನ್ನು ಕೆಲವೇ ದಿನಗಳಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸಲಿದ್ದೇವೆ. ದಯವಿಟ್ಟು ನಿರೀಕ್ಷಿಸಿ.

ನಿಮಗೆ ಆಸಕ್ತಿ ಇದ್ದಲ್ಲಿ ಈ ವಿಳಾಸಕ್ಕೆ ಬರೆಯಿರಿ: manju.mysooru@gmail.com, anupkumart@gmail.com

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ:

http://www.vanavasikalyan.org/giftcatalog.html

 

Rating
No votes yet