ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾಹ್, ಮಿಚಿಗನ್ ಸರೋವರ ; ಬದಿಯ ಬೈಕಿಂಗ್ ಹಿಗ್ಗು, ತಲೆಯೆತ್ತಿ ನೋಡೆ, ಚಂದದ ಸೀಗಲ್ ಪಕ್ಷಿ- ಏನು ರಮ್ಯ, ಅದೇನು ಸಂತಸ !

ಇಂಥ ಸೊಗಸಾದ ನಿಸರ್ಗಸೌಂದರ್ಯವನ್ನು ನಾವು ಕಂಡಿದ್ದು ಮಿಚಿಗನ್ ಮಹಾಸರೋವರದ ದಂಡೆಯಮೇಲೆ ! ಚಿಕಾಗೋಮಹಾನಗರಕ್ಕೆ ಇದು ಅತ್ಯಂತ ಹತ್ತಿರ. ಪಕ್ಕದಲ್ಲೇ ಪ್ರಖ್ಯಾತ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಕ್ಯಾಂಪಸ್, ಕಣ್ಣುಹಾಯ್ದಷ್ಟೂ ದೂರದ ಜಲರಾಶಿ. ಮಿಚಿಗನ್ ಸರೋವರ ಕೆಲವೊಮ್ಮೆ ಕೋಡಿಹರಿದರೆ, ಅದರ ಪೂರ್ತಿ ಉಪಯೋಗ ನಾರ್ತ್ ವೆಸ್ಟರ್ನ್ ಕಾಲೇಜಿಗೆ.

ಏನೀ ಮಹಾನಂದವೇ? ಓ ಭಾಮಿನಿ!

ಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?

ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.

ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ.

ನಿಂದಕರೆಂದಿಗೂ ಸಂತರೇ ಅಲ್ಲ...

ನಿಂದಕರೆಂದಿಗೂ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...

--ಶ್ರೀ

*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ

----------------------------------------------------------------------
> ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು.
ಪದ ಎಣಿಸೋ ಲೆಕ್ಕ ತಪ್ಪು :)

ನಮ್ಮನ್ನೂ ಬದುಕಲು ಬಿಡಿ..!

ನಿಮಗೆ ನಾವು ಅದೆಷ್ಟು ಉಪಕಾರಿಯಾಗಿದ್ದೇವೆ. ಇಷ್ಟು ದಿನ ನಮ್ಮನ್ನು ನೋಡಿ ಸಂತಸ ಪಟ್ಟವರು ನೀವು. ನಮ್ಮನ್ನು ನೋಡಲು ಬಂದವರು ಹಲವರು. ಈ ಮಹಾನಗರಿಯಲ್ಲೇ ತಾಳ ವೂರಿದವರೂ ಅನೇಕರು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನಮ್ಮ ನಗು, ನಮ್ಮ ಚೆಲುವು, ವಿಶಾಲ ದೇಹ... ಆದರೆ ಯಾಕೆ ಇಂದು ನೀವು ನಮ್ಮನ್ನೇ ನಿರ್ಲಕ್ಷೀಸುತ್ತಿರೀ, ನಮ್ಮ ಬುಡಕ್ಕೆ ಯಾಕೇ ಕತ್ತರಿ ಹಾಕುವಿರಿ ?

art exhibition 'Weeping Greens'

Dear Friends

Happy to invite you to
An open art exhibition 'Weeping Greens'
on October 2, between 10.00 a.m. to 6.00 p.m.

Venue:
The Exhibition starts from New BEL Road
(Sadashivanagar Police Station) and ends at Ramaiah Hospital

Your presence will strengthen the exhibition and
and bring awareness to the people about Environment.

Regards
Animisha

ಅನಾಯಕತ್ವ ಮತ್ತು ಮೂರನೇ ವಿಶ್ವಯುದ್ಧದ ಹಾದಿಯಲ್ಲಿ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 3, 2008 ರ ಸಂಚಿಕೆಯಲ್ಲಿನ ಲೇಖನ.)

ಕಳೆದ ಮೂರು ದಶಕಗಳ ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ನೋಡಿ. 1980 ರ ದಶಕದಲ್ಲಿ ರೊನಾಲ್ಡ್ ರೇಗನ್, ಮಾರ್ಗರೇಟ್ ಥ್ಯಾಚರ್ ಮತ್ತು ಮಿಖಾಯಿಲ್ ಗೋರ್ಬಚೆವ್‌ರ ನಾಯಕತ್ವ ಪ್ರಜಾಪ್ರಭುತ್ವವಾದಿ ಮತ್ತು ಕಮ್ಯುನಿಸ್ಟ್ ದೇಶಗಳ ನಡುವಿನ ಶೀತಲ ಸಮರಕ್ಕೆ ಕೊನೆ ಹಾಡಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಮೂರು ದಶಕಗಳ ಕಾಲ ಇಡೀ ವಿಶ್ವವೆ ಮುಕ್ತ ಆರ್ಥಿಕತೆಗೆ, ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮವಾಗಿ ಕಳೆದ ಶತಮಾನದ ಹಲವಾರು ಪ್ರಮುಖ ರಾಷ್ಟ್ರಗಳು ವಿಶ್ವರಂಗದಲ್ಲಿ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳುತ್ತ ಬಂದಿವೆ. ಮುಂದುವರೆದ ರಾಷ್ಟ್ರಗಳ ಆರ್ಥಿಕ ಸಂಪತ್ತಿನ ವಿಸ್ತರಣೆ ಸ್ಥಗಿತವಾಗಿದ್ದರೆ ಚೀನಾ ಮತ್ತು ಭಾರತದಂತಹ ಪುರಾತನ ನಾಗರಿಕತೆಯ ರಾಷ್ಟ್ರಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತ ನಡೆದಿವೆ. ಜಾಗತೀಕರಣದಿಂದ ತೃತೀಯ ವಿಶ್ವದ ಬಡ ರಾಷ್ಟ್ರಗಳಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತ ಬಂದ ಆರ್ಥಿಕ ತಜ್ಞರ ಮಾತು ನಿಜವಾಗುವತ್ತ ಸಾಗುತಿದೆ.

ಈ ಜಾಗತೀಕರಣದ ಆರಂಭದಲ್ಲಿ ಅಮೆರಿಕ, ಜಪಾನ್, ಮತ್ತು ಯೂರೋಪಿನ ಹಲವಾರು ರಾಷ್ಟ್ರಗಳು ಅಪಾರ ಲಾಭ ಮಾಡಿಕೊಂಡವು. ಪ್ರತ್ಯಕ್ಷ ಮತ್ತು ಪರೋಕ್ಷ ಒತ್ತಡಗಳಿಂದ ತೃತೀಯ ಜಗತ್ತಿನ ದೇಶಗಳ ಕಾನೂನು ಕಾಯ್ದೆಗಳನ್ನು ಬದಲಾಗುವಂತೆ ಅವರು ನೋಡಿಕೊಂಡರು. ಆ ಮೂಲಕ ಬಡ ರಾಷ್ಟ್ರಗಳಿಗೆ

ಭೂಮಿ ಬೆಚ್ಚಗಾಗಿದೆ

ಭೂಮಿ ಬೆಚ್ಚಗಾಗಿದೆ
(ಸ್ಪೂರ್ತಿ : Global Warming ಬಗ್ಯೆಯ ಚಿತ್ರ An Inconvenient Truth )

ಭೂಮಿ ಬೆಚ್ಚಗಾಗಿದೆ
ಭೂಮಿ ಬೆಚ್ಚಗಾಗಿದೆ
ನಮ್ಮ ನಿಮ್ಮ ಅಚ್ಚುಮೆಚ್ಚು
ಭೂಮಿ ಬೆಚ್ಚಗಾಗಿದೆ

ಝಗಝಗಿಸುವ ಹೋಟೆಲಿನಲಿ
ಹಡಗಿನಂಥ ಕಾರುಗಳಲಿ
ಬಹುಮಹಡಿಯ ಮಾಲುಗಳಲಿ
ತಂಗಾಳಿಯು ಬೀಸಿದೆ
ಏಸಿಯಂತ್ರ ಉಸಿರುಗಟ್ಟಿ
ಬಿಸಿಯ ಹೊರಗೆ ನೂಕಿದೆ
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ

ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?

೮ನೇ ತರಗತಿ. ಸ್ಕೂಲ್‌ಡೇಗೆ ಡ್ರಾಮಾಕ್ಕೆ ನನ್ನನ್ನೂ ಸೇರಿಸಿದರು.
೨ನೇ ನಾಯಕನ ಪಾತ್ರ. ನಾಟಕದ ತಯಾರಿಗೆ ಜಾಸ್ತಿ ದಿನ ಸಿಕ್ಕಿರಲಿಲ್ಲ.

ಸ್ಕೂಲ್‌ಡೇ ದಿನ ಬೆಳಗ್ಗೆ ನಾಯಕ ನಾ... ಪ..ತ್ತೆ!!
ತರಾತುರಿಯಲ್ಲಿ ನಮ್ಮ ಜತೆ ಇದ್ದ ಒಬ್ಬನನ್ನೇ ನಾಯಕನಾಗಿ ಬದಲಾಯಿಸಲಾಯಿತು.