’ಮಿಚಿಗನ್ ಕೆರೆ ಏರಿ,’ ಯ ಬದಿಯಲ್ಲಿ ಯುವಜನರು, ವಿಶ್ರಮಿಸುತ್ತಾ, ನಿಸರ್ಗದ ಸೌಂದರ್ಯವನ್ನು ಮೆಲ್ಲುತ್ತಿರುವ ರೀತಿ !

’ಮಿಚಿಗನ್ ಕೆರೆ ಏರಿ,’ ಯ ಬದಿಯಲ್ಲಿ ಯುವಜನರು, ವಿಶ್ರಮಿಸುತ್ತಾ, ನಿಸರ್ಗದ ಸೌಂದರ್ಯವನ್ನು ಮೆಲ್ಲುತ್ತಿರುವ ರೀತಿ !

ಬರಹ

ಮೈಸೂರಿನ ಕುಕ್ಕರಹಳ್ಳಿ ಕೆರೆಯಬಗ್ಗೆ ಸಾಕಷ್ಟು ನಾವು ಓದಿದ್ದೇವೆ, ನೋಡಿದ್ದೇವೆ. ಆದರೆ, ಅಲ್ಲಿ ನೀರಿರುವುದೇ ಕಡಿಮೆಸಮಯದಲ್ಲಿ. ಕೆರೆಹೂಳು ತೆಗೆದು, ಈಗ ಸ್ವಲ್ಪ ಪ್ರವಾಸಿತಾಣವನ್ನಾಗಿ ಮಾಡಿದ್ದಾರೆ. ನಿಜ. ಆದರೆ, ಒಮ್ಮೆ ಅಮೆರಿಕದೇಶದ ಈ ಭವ್ಯ ನಿಸರ್ಗರಮಣೀಯ ನೋಟವನ್ನು ಆಸ್ವಾದಿಸಿದವರು, ತಮ್ಮ ಜೀವನದಲ್ಲೇ ಅಂತಹ ಅನುಭವಕ್ಕೆ ಪದೇ-ಪದೆ, ತವಕಪಡುವಂತಹ ದೈವದತ್ತ, ಹಾಗೂ ಮಾನವನಿರ್ಮಿತ ತಾಣ ! ಅದೆಷ್ಟು ಮುಂದಾಲೋಚನೆ, ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಇಂತಹ ಭವ್ಯ ಪ್ರದೇಶದ ಸೊಗಸನ್ನು ಕಾಪಾಡಿ, ಉಳಿಸಿ, ಬೆಳಸಲು ಶ್ರಮವಹಿಸಿದ್ದಾರೆ, ಈ ಜನ ! ಎಂಥ ಸೌಂದರ್ಯೋಪಾಸಕರು, ಇಲ್ಲಿನ ಜನ. ಎಂಥ ಜವಾಬ್ದಾರಿಯುಳ್ಳವರು !

ನಮ್ಮ ಕರ್ನಾಟಕದಲ್ಲಿ ನಾನು ನೋಡಿದ ನಮ್ಮ ಚಿತ್ರದುರ್ಗದ ಹತ್ತಿರದ ಸೂಳೆಕೆರೆ [ಶಾಂತಸಾಗರವನ್ನು] ಯ ನಿರ್ಮಲ ಪ್ರದೇಶವನ್ನು ಸರಿಯಾಗಿ ಜೋಪಾನವಾಗಿ ಕಾಯ್ದಿಟ್ಟುಕೊಳ್ಳವ ದಿಶೆಯಲ್ಲಿ ಸೋತಿದ್ದೇವೆ. ನಾವುಗಳು ಎಂದು ಎಚ್ಚರಗೊಳ್ಳುತ್ತೇವೆ ? ನಮ್ಮಲ್ಲು ಇಂತಹ ನಿಸರ್ಗ ರಮಣೀಯ ಸ್ಥಾನಗಳು ಇಲ್ಲದಿಲ್ಲ. ಶಿವಮೊಗ್ಗದ ಹತ್ತಿರ ಹೋದರೆ, ಮಲೆನಾಡಿನ ಅದ್ಭುತ ರಮ್ಯ ಸ್ಥಳಗಳಿಗೆ ಕೊರೆತೆಯಿಲ್ಲ. ಈಗ ’ಹೊರನಾಡು,’ ಮುಂತಾದ ಜಾಗಗಳನ್ನು ಕಂಡು, ಅವುಗಳ ಪೋಷಣೆಯ ಕಾರ್ಯದಲ್ಲಿ ನಮ್ಮವರು ಯಶಸ್ವಿಯಾಗಿರುವುದು, ಸಮಾಧಾನದ ಸಂಗತಿ. ನಾವು ಇನ್ನೂ ಬೇಗ ಎಚ್ಚೆತ್ತು, ನಮ್ಮದೇಶದ ಹಲವಾರು ಜಾಗಗಳನ್ನು ಪರ್ಯಟನೆಯ ಭೂಪಟದಲ್ಲಿ ತರಬೇಕು. ಅದರಿಂದಲೇ ನಮ್ಮ ವರಮಾನ ಹೆಚ್ಚಿ, ನಮಗೆ ಹೆಚ್ಚಿನ ಯಶಸ್ಸು ಸಂಪಾದಿಸಲು ಮಾರ್ಗಕಾಣುವುದು.

-ಚಿತ್ರನಾನೇ ತೆಗೆದದ್ದು.