ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ,

http://sampada.net/blog/madhava_hs/29/10/2007/6064

ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ .
"ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು ದಿಟವಾಗ್ಲೂ ಇದ್ಯಾ? ಇಲ್ಲ ಬರೀ ಬುರುಡೆಯ? ಇವೆಲ್ಲ ಪ್ರೆಶ್ನೆಗಳಿಗೆ ಉತ್ರ ಸಿಕ್ಕಿದಾಗ...

ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು ಅದನ್ನು ನೋಡಿಕೊಂಡಿದ್ದಾನೆ.

ನೀ ಮೌನಿಯಾದರೇ...?

ನೀ ಮೌನಿಯಾದರೇ ಏನೆಂದು ಅರಿಯಲಿ ನಾ
ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ ||

ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 ||
ಏನಾಯ್ತು, ಮೊದಲಿದ್ದ ತುಂಬು ನಗೆಯು.
ಬಿಟ್ಟು ಬಿಡದೆ ಆಡುತ್ತಿದ್ದ ನಿನ್ನ ಒಲವ ಮಾತುಗಳಿಗೆ
ಯಾವ ಕಟ್ಟೆಯಾಯ್ತು ನಿಂತು ತಡೆಯು.

ಜೊತೆಯಾಗಿ ನಾವು ನಡೆದ ಬಾಳ ಹಾದಿಯಲ್ಲಿ || 2 ||

ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ .
೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ?

ರಾಜಕೀಯ ಚು(ಕು)ಟುಕುಗಳು ಬಾಗ-೨

ಬಕ್ರ
-----
ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು
ಅನಂತ್‍ನಾಗ್ ರ ಯಶಸ್ವಿ ಚಲನಚಿತ್ರ
ಮೈತ್ರಿ ಸರ್ಕಾರಕ್ಕೆ ಹನ್ನೆರಡು ಷರತ್ತುಗಳು
ಒಪ್ಕೊಂಡ್ರೆ ಬಿ.ಜೆ.ಪಿ ಗ್ಯಾರಂಟಿ ಆಗುತ್ತೆ ಬಕ್ರ !

ಹೀನಾಯ
------
ಬದಲಾಯಿಸಿದರೂ ತಮ್ಮ ನಾಮಧೇಯ
ಇನ್ನೂ ಈಡೇರಲೇ ಇಲ್ಲ ಮೂಲಧ್ಯೇಯ
ಮರುಮೈತ್ರಿ ಆಗದಿದ್ರೆ ಸ್ಥಿತಿ ಹೀನಾಯ !

ಮರು ಮಧುವೆ
------------
ಜೆ.ಡಿ.ಎಸ್ , ಬಿ.ಜೆ.ಪಿ ಗೆ ಮತ್ತೆ ಮಧುವೆ

ಅಗತ್ಯ

 

ಪದ್ಯಕ್ಕೆರಡು
ಕಾಲಿರೋದು ಒಳ್ಳೇದಂತೆ
ನಿಲ್ಲೋದಕ್ಕೆ
ಜತೇನಲ್ಲಿ ಕುಣಿಯೋದಕ್ಕೆ
ಸಿಟ್ಟಾದವರ ಕೈಗೆ ಸಿಕ್ಕದ ಹಾಗೆ
ಓಡಿ
ಬಚ್ಚಿಟ್ಟುಕೊಳ್ಳೋದಕ್ಕೆ.

 

ಪುಣ್ಯಕೋಟಿ ಎಂಬ ಹುಲಿಯು.....

   ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು.

ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು. ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು ತಂದೆಯೊಂದಿಗೆ ನೋಡಿ ಮಲಗುವ ಮಕ್ಕಳೂ ಇದ್ದಾರೆ.