"ಈ ಕನಸು"
ಬರಹ
" ಬದುಕಿನ ಈ ಪಯಣದಲ್ಲಿ
ಕವಲೊಡೆದ ದಾರಿಯಲ್ಲಿ
ಕ್ಯೆ ಚಲ್ಲಿ ನಿಂತಿದೆ ಈ ಕನಸು
ಭಾವನೆಗಳ ಸಂಘರ್ಷದಲ್ಲಿ
ಏದುಸಿರು ಬಿಡುತ್ತ ಬೆವರು ಸುರಿಸುತ್ತಾ
ಸಾಗಿದೆ ಈ ಕನಸು.
ನೆನಪುಗಳ ಸರಮಾಲೆಯಲ್ಲಿ
ಭವ್ಯ ಕನಸುಗಳ ಹಾವಳಿಯಲ್ಲಿ
ದಿವಾಳಿಯಾಗಿ,
ಅಲೆಮಾರಿಯಾಗಿ ನಿಂತಿದೆ, ಈ ಕನಸು
ಮಾತನಾಡದೆ, ಮೌನವಾಗಿರದೆ
ಚಂಚಲೆ ಕನ್ಯೆಯಾಗಿ
ಆಸೆಗಳ ಗೋಪುರವನ್ನು ಎದೆಗವುಚಿಕೊಂಡು
ಹೊಂಗನಸು ಅರಸುತ್ತ
ಸಾಗಿದೆ ಈ ಕನಸು.