ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ಹೂ?

ನಾನು ಯಾರಾಗಿದ್ದೀನಿ?
ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.

ವಿಮರ್ಶಕ

ಸಾಹಿತ್ಯವೇ ಮದುವಣಗಿತ್ತಿ
ಓದುಗನೇ ಮದು ಮಗ
ವಿಮರ್ಶಕರೇ ಆಹ್ವಾನಿತರು
ಸ್ವಘೋಷಿತ ಪಂಡಿತರು!!

ಓದುಗನ ಆಭಿರುಚಿ ಗೊತ್ತೆಂದು ಬೀಗುವರು
ಆವನ ಬೇಕು-ಬೇಡಗಳ ನಿರ್ಧರಿಸುವರು
ಓದುಗ-ಸಾಹಿತಿ ಮಧ್ಯದ ಸ್ವಕಲ್ಪಿತ ತಂತುಗಳು
ತಾವಿಲ್ಲದೆ ಸಾಹಿತ್ಯವೇ ಇಲ್ಲವೆಂದುಕೊಂಡವರು!!

ಕೇಳೀ ಕಿವಿಮಾತು, ಇವರಲ್ಲ ಸಾಹಿತ್ಯದಗತ್ಯ,
ಸಹೃದಯ ಓದುಗನಿರುವವರೆಗೆ ಇವರನಗತ್ಯ

ತೊಗರಿ ನುಚ್ಚಿನುಂಡೆ

ನಮ್ಮ ಅಮ್ಮ ಚಪಾತಿ ಮಾಡುತ್ತೇನೆ ಅಂದರೆ ಸಾಕು ನಾವೆಲ್ಲ ಹೋಟೆಲಿಗೆ ಹೋಗುವ ಪ್ಲಾನಿದ್ದರೆ ಅದಕ್ಕೆ ಚಕ್ಕರ್ ಕೊಟ್ಟು ಮನೆಯಲ್ಲಿ ಜಮಾಯಿಸಿಬಿಡುತ್ತೇವೆ. ಅಷ್ಟು ಚೆನ್ನಾಗಿ ಚಪಾತಿ ಮಾಡುತ್ತಾರೆ. ಸರಿಯಾದ ತ್ರಿಕೋನಾಕಾರದಲ್ಲಿ ಮೃದುವಾದ ಚಪಾತಿಯ ಜೊತೆ ಸಾಗು ಅಥವ ಪಲ್ಯ ಇದ್ದರಾಯ್ತು, ಚಪಾತಿ ಮಾಡಿದ್ದೂ ಗೊತ್ತಾಗದಂತೆ ಹಾಕಿಕೊಂಡು ಖಾಲಿ ಮಾಡಿಬಿಟ್ಟಿರುತ್ತೇವೆ.

ಮೊನ್ನೆ ಎಷ್ಟೋ ದಿನಗಳ ನಂತರ ಅಮ್ಮ ನುಚ್ಚಿನುಂಡೆ ಮಾಡಿದ್ದರು. ಇದು 'ತೊಗರಿ ನುಚ್ಚಿನುಂಡೆ'ಯಂತೆ. ಬಹಳ ಚೆನ್ನಾಗಿರತ್ತೆ ತಿನ್ನೋದಕ್ಕೆ.
ನುಚ್ಚಿನುಂಡೆ

ಸದ್ದು ಮಾಡುವ ಪಕ್ಷಿಗಳು?!

ಪ್ರಶ್ನೆ: ಪಕ್ಷಿಗಳು ಹಿಂದಕ್ಕೆ ಹಾರಬಲ್ಲವೆ?
ಉತ್ತರ: ಸದ್ದು ಮಾಡುವ ಪಕ್ಷಿಗಳು ಹಾರಬಲ್ಲವು. ಅತೀ ವೇಗದ ರೆಕ್ಕೆಗಳನ್ನು ಹೊಂದಿರುವ ಈ ಪುಟ್ಟ ಪಕ್ಷಿಗಳು ಯಾವುದೇ ದಿಕ್ಕಿನಲ್ಲಾದರೂ ಹಾರಬಲ್ಲವು. ಆಕಾಶದ ಮಧ್ಯೆ ತಟಸ್ಥ್ವಾಗಿ ನಿಲ್ಲಬಲ್ಲವು!!
Ref: ಇಂದಿನ 'ಯಕ್ಷಪ್ರಶ್ನೆ' ವಿ.ಕ.

ದೊಡ್ಡವರೆಲ್ಲಾ ಜಾಣರಲ್ಲಾ..

ಬ್ಲಾಗಿನ ಶೀರ್ಷಿಕೆ ಓದುತ್ತಿದ್ದಂತೆ, I am sure, ನೀವು ಮನಸ್ಸಿನಲ್ಲೇ ಗುನುಗೋದಿಕ್ಕೆ ಶುರು ಹಚ್ಚಿಕೋತೀರಾ..

ದೊಡ್ಡವರೆಲ್ಲಾ ಜಾಣರಲ್ಲಾ..

ಚಿಕ್ಕವರೆಲ್ಲಾ ಕೋಣರಲ್ಲಾ..

ಅಂತ. ಹಾಗೇ ಗುರು-ಶಿಷ್ಯರು movie ನೆನಸಿಕೊಂಡು, 'ಎನ್ ಕಾಮಿಡಿ ಮೂವಿ ಪ್ಪಾ' ಅಂತ ಖುಷಿ ಪಡ್ತೀರಾ, ನನಗೆ ಗೊತ್ತು!

M F Hussain ಅನ್ನುವ ಹುಚ್ಚನ ಚಿತ್ರ

http://www.hindujagruti.org/activities/campaigns/national/mfhussain-campaign/intro.php#1

ಇದಕ್ಕೆ ನಮ್ಮ ಬುದ್ದಿಜೀವಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬೋಗಳೆ ಬಿಡೊ ಇವರು ಯೆನನ್ನುತ್ತಾರೆ?

ಶಾಂತಿ

ಇದೋ ಬಂತು ನನ್ನ ಸರತಿ
ಆಶು-ಕವಿತೆಯ ವಿಷಯ 'ಶಾಂತಿ',
ವೇದಿಕೆಯೇರುತಿರೆ ಕಾಡಿತು ಭೀತಿ
ಸಭೆಯಲುಂಟಾಯ್ತು ಅಶಾಂತಿ.

ಮೆಲ್ಲನುಸುರಿದೆ, ಕಾಪಾಡಿ ಶಾಂತಿ,
ದಯಮಾಡಿ; ಇದೆನ್ನ ನಮ್ರ ವಿನಂತಿ,
ಕ್ರುದ್ಧರಾದರೆ ನೀವು, ಪಸರಿಸದು ಕವನ ಕಾಂತಿ,
ಹೊಮ್ಮವು ಪ್ರಾಸಬದ್ಧ ಪಂಕ್ತಿ.

ಶಾಂತಿ ದೂತ ಗಾಂಧಿ ತಾತ
ಶಾಂತಿಯೊಂದು ದಿವ್ಯ ಮಂತ್ರ
ಶಾಂತಿಯಿಂದಾಯ್ತು ನಾಡು ಸ್ವತಂತ್ರ

ಪಚ್ಚೆಕಲ್ಲು ಪಾಣಿ ಪೀಠ...

ನಾವಿಬ್ಬರೂ ಶಾಲೆ ಮುಗಿಸಿ ಬಂದು ಪಾಟಿ ಚೀಲ ಬಿಸಾಕಿ, ಕೈ ಕಾಲು ತೊಳ್ಕೊಂಡು, ಅಮ್ಮ ಕೊಟ್ಟ 'ಬಾಯಿಬಡಿಗೆ' ಗುಳುಂ ಮಾಡಿ, ಹಾಲುಟೀ ಕುಡಿದು ಓಟ ಹೊರಗೆ.. ಅಲ್ಲಿ ರಸ್ತೆಬದಿಯ ಅಂಗಳದಲ್ಲಿ, ರೇಣುಕ,ಶಿವು,ತಾರ,ಶಾಯಿನಾ,ಲಕ್ಷ್ಮಣ,ದುರ್ಗಪ್ಪ ಎಲ್ಲ ಸೇರಿ ಕತ್ತಲು ಕವಿಯುವವರೆಗೆ ಬಾಯಿಗೆ ಬಂದ ಆಟ ಆಡಿ ಮಣ್ಣಧೂಳಿನ ತೆರೆಹೊದ್ದು ಗೋಧೂಳಿಯಲ್ಲಿ ಮನೆಗೆ ಬರುವ ಪುಟ್ಟ ಕರುಗಳಂತೆ ಬಂದ ಮೇಲೆ.. ಮತ್ತೆ ಕೈಕಾಲು ತೊಳೆದು.. ಈ ಸಲ ಹಿಮ್ಮಡಿ ನೆನೆಯುವ ಹಾಗೆ ಎಚ್ಚರಿಕೆಯಿಂದ ಕಾಲು ತೊಳೆಯಬೇಕು ಇಲ್ಲದಿದ್ದರೆ ಬಚ್ಚಲ ಒಲೆಯ ಬುಡದಲ್ಲೆಲ್ಲೋ ಬೆಚ್ಚಗೆ ಕುಳಿತ ಶನಿಮಹಾತ್ಮ ನಳನ ಹಿಮ್ಮಡಿ ಕಚ್ಚಿಹಿಡಿದಹಾಗೆ ಹಿಡಕೊಂಡು ಬಿಡುತ್ತಾನೆ.. ಆಮೇಲೆ ಅಷ್ಟೆ..!

ಇಬ್ಬರೂ ಗೋಣಿಚೀಲಕ್ಕೆ ಕಾಲು ಒರೆಸುತ್ತಾ ಒಳಗೆ ಬಂದರೆ ಅಮ್ಮ ಆಗಷ್ಟೇ ದೀಪಕ್ಕೆ ಎಣ್ಣೆತುಂಬುತ್ತಾ ಹತ್ತಿಸುತ್ತಿದ್ದಾಳೆ. ಒಂದು ಊದುಬತ್ತಿ ಬೇರೆ. ಈಗ ಅಮ್ಮನದ್ದು ಮಾತಿಲ್ಲ ಸಂಜ್ಞೆ. ನಾವಿಬ್ಬರೂ ಸಿಕ್ಕಾಪಟ್ಟೆ ಒಳ್ಳೆಯವರ ಹಾಗೆ ಕೈ ಮುಗಿದು ಅಮ್ಮನ ಮುಖದ ಮೇಲೆ ಬೆಳಕಿನಾಟ ಹಚ್ಚಿರುವ ದೀಪದ ಪುಟ್ಟ ಉರಿಯನ್ನೇ ನೋಡುತ್ತಾ ನೋಡುತ್ತಾ ನಿಜವಾಗಲೂ ತುಂಬ ಒಳ್ಳೆಯವರಾಗಿಬಿಡುತ್ತಿದ್ದೆವು. ಅಮ್ಮನ ಅಹವಾಲು ಮುಗಿದು ನಮ್ಮ ಕಡೆ ತಿರುಗಿದ ಕೂಡಲೆ, ನಮ್ಮ ಬಾಯಿ ತಾನೆತಾನಾಗಿ ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ.. .ಎಂದು ಒಪ್ಪುವಾ ವಿಘ್ನೇಶ್ವರನಿಗೆ ನಮಸ್ಕರಿಸಿ, ಪಾರ್ವತಿ, ಶಾರದೆ, ಅನ್ನಪೂರ್ಣೆ, ಗುರುರಾಯರನ್ನೆಲ್ಲ ಓಲೈಸಿ ಮುಗಿಸುವಾಗ ನಾವು ಶಿರಬಾಗಿ ನಮಿಸಿ ಎದ್ದವರು ಮತ್ತೆ ವಾಪಸ್ ಕಿರಾತರಾಗಿ ಬಿಡುತ್ತಿದ್ದೆವು. ಗೂಡಿನಲ್ಲಿದ್ದ ಇಡಗುಂಜಿ ಗಣಪತಿಯಂತೂ ನಮ್ಮನ್ನು ನೋಡಿದಾಗಲೆಲ್ಲ ಕಿರುನಗು..

ಬೇಸಿಗೆ ರಜೆಯ ಆಟೋಟ್ಟಹಾಸದ ಸಂಜೆಗಳಲ್ಲಿ, ಊರಲ್ಲಿ, ಸಂಜೆಯ ಆಟ ಮುಗಿದು ಮನೆಗೆ ಬಂದು ಕಾಲ್ತೊಳೆದು ದೇವರ ಮನೆಯ ಮುಂದೆ ಅಕ್ಕನ ಜೊತೆ ತಾಳ ಹಿಡಿಯಲು ನಾವಿಬ್ಬರೂ ಕುಸ್ತಿ ಮಾಡಿ ಕೂರುವಷ್ಟರಲ್ಲಿ ಅವಳು ಒಪ್ಪಾಗಿ ಬಂದು ಕೂತು -ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಅಂತ ಶುರುಮಾಡುತ್ತಿದ್ದಂತೆ ನಾವು ನಮ್ಮ ಕಿತಾಪತಿ ಮರೆತು ಆ ಹಾಡಿನ ಎಳೆಯನ್ನೇ ಹಿಡಿದು ರಾಮ ಪಟ್ಟಾಭಿಷೇಕದಲ್ಲಿ ನಲಿಯುತ್ತಾ, ನಮ್ಮ ಮನೆಗಳಲ್ಲಿ ಪರಿಚಿತವಿರುವ ಎಲ್ಲ ದೇವರನ್ನೂ ಓಲೈಸಲು ವಿಧವಿಧದ ಭಜನೆಗಳನ್ನು ಗುನುಗುತ್ತಾ ಇದ್ದರೆ ಅಲ್ಲಿ ಪೀಠದ ಮೇಲೆ ದೀಪದ ಸಣ್ಣ ಬೆಳಕಿನಲ್ಲಿ ಹೊಳೆಯುವ ಎಲ್ಲ ದೇವಾನುದೇವತೆಗಳೂ, ಮನೆಯಲ್ಲಿ ಅಲ್ಲಲ್ಲಿ ಅವರವರ ಕೆಲಸದಲ್ಲಿರುವ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಅಮ್ಮಮ್ಮ ಎಲ್ಲರೂ ಸುಪ್ರಸನ್ನರಾಗಿ ಎಂತಹ ಬಂಗಾರದ ಮಕ್ಕಳಾಗುತ್ತಿದ್ದೆವು.

ಎಲ್ಲ ಕಿರಾತಬುದ್ಢಿ, ತುಂಟತನ, ಹೊಟ್ಟೆಯುರಿ, ಎಲ್ಲ ಸಂಜೆಯ ಕತ್ತಲಲ್ಲಿ ಕರಗಿ, ಬೆಳಕಿನ ಪುಟ್ಟ ಹಾಡಿನೆಳೆ ಹಿಡಿದು ಕಿನ್ನರಲೋಕದ ದಾರಿಯಲ್ಲಿ ದೇವರ ದೇವ ವಾಸುದೇವನ ಕೊಳಲ ನೆನಪಿನಲ್ಲಿ ನಮ್ಮ ಪಯಣ.