ವಿಮರ್ಶಕ
ಬರಹ
ಸಾಹಿತ್ಯವೇ ಮದುವಣಗಿತ್ತಿ
ಓದುಗನೇ ಮದು ಮಗ
ವಿಮರ್ಶಕರೇ ಆಹ್ವಾನಿತರು
ಸ್ವಘೋಷಿತ ಪಂಡಿತರು!!
ಓದುಗನ ಆಭಿರುಚಿ ಗೊತ್ತೆಂದು ಬೀಗುವರು
ಆವನ ಬೇಕು-ಬೇಡಗಳ ನಿರ್ಧರಿಸುವರು
ಓದುಗ-ಸಾಹಿತಿ ಮಧ್ಯದ ಸ್ವಕಲ್ಪಿತ ತಂತುಗಳು
ತಾವಿಲ್ಲದೆ ಸಾಹಿತ್ಯವೇ ಇಲ್ಲವೆಂದುಕೊಂಡವರು!!
ಕೇಳೀ ಕಿವಿಮಾತು, ಇವರಲ್ಲ ಸಾಹಿತ್ಯದಗತ್ಯ,
ಸಹೃದಯ ಓದುಗನಿರುವವರೆಗೆ ಇವರನಗತ್ಯ
ಹರಿವ ನೀರ್ಗೇಕೆ ದೊಣ್ಣೆ ನಾಯಕನ ಪಾರುಪತ್ಯ?
ಅರಿವಾಗಲಿವರಿಗೆ ಸ್ವಕಲ್ಪನೆಯ ಮಿಥ್ಯ!!
-ಗುವಿಚರಾ