ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯುಗಾದಿ

ಮತ್ತೆ ಬಂದಿದೆ ಹೊಸ ಚೈತನ್ಯದ ನವ ಯುಗಾದಿ
ಹೊಸ ಬಯಕೆ ಕನಸುಗಳ ನವಜೀವನದ ಬುನಾದಿ
ಸರ್ವಜಿತು ಬಂದಿಹನು ಹೊಸ ವರುಷದ ನಾಯಕನಾಗಿ
ಹೊಸ ರಾಗ ತಾಳದ ಮಧುರ ಬಾಳಗೀತೆಯ ಗಾಯಕನಾಗಿ

ಭೂರಮೆಯು ಸಿಂಗಾರಗೊಂಡು ಹಸಿರಾಗಿ ನಿಂತಿಹಳು
ಸಕಲ ಪ್ರಾಣಿ,ಪಕ್ಷಿ ಮನುಸಂಕುಲಕೆ ಉಸಿರಾಗಿ ಬಂದಿಹಳು
ಎತ್ತಣದೋ ಮಾಮರಕೆ ಎತ್ತಣದೋ ಕೋಗಿಲೆಗೆ ನಂಟನ್ನು ಬೆಸೆದಿಹಳು

ಭೂಮಾತೆ

ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ
ದೈವದನಂತ ಸೃಷ್ಥಿಯಲಿ ನಾನೊಂದು ಚೇತನ
ಎನಿತು ಬಹುಭಾರ ತಡೆದಿರುವೆ ನೀನು
ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು

ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ
ಚಿಂತಿಸದೆ ಕೊರಗದೆ ಬಿಡಿಸಲವಕಾಶ ನೀಡು ಎನಗೆ
ಅನವರತ ಯತ್ನಿಸುವೆ ತರಲು ಬಿಡುಗಡೆಯ ಕಾಲ
ಹರಸು ಎನ್ನ ಅದೊಂದಾಗಲಿ ಲೋಕಕಲ್ಯಾಣಕೆ ಮೂಲ

?

ಹೌದು......ಈಗಲೂ ನಾ
ಅದೇ ಜಗುಲಿಯಲಿ
ಅದೇ ಭಂಗಿಯಲಿ
ಅದೇ ರಾಗವ... ಹಾಡುತಾ
.... ಕೂತಿದ್ದೇನೆ

ನಿನಗಾಗಿ ನಾ .....ಕಾಯುತಿಲ್ಲ
......ಕಾಯಬೇಕಾಗಿಲ್ಲ
ನಿನ್ನೊಂದಿಗೆ ಕೊಂಡುಹೋದ
ಪ್ರಶ್ನೆ.... ಉತ್ತರ ಬೇಕಿದೆ
ನಿನ್ನೊಂದಿಗೆ ಬಾಡಿಹೋದ
ಚಿಗುರು-ಕನಸು....ಲೆಕ್ಕ ಬೇಕಿದೆ

ನಿನಗಾಗಿ ನಾ ........ ಹಾಡಲಿಲ್ಲ
'ರಾಗ'ದ ಹೊರತು ... ನನ್ನ ಬಳಿ

ಗಾದೆ + ಟಿಪ್ಪಣಿ

ದರ್ಮಕ್ಕೆ ದಟ್ಟಿ ಕೊಟ್ರೆ ಇತ್ತಲ್ ಗೆ ಹೋಗಿ ಮೊಳ ಹಾಕಿದ್ನಂತೆ.

ಅಂದ್ರೆ...ನೀವು ಬಿಟ್ಟಿಯಾಗಿ ಏನಾದ್ರೊ ಕೊಟ್ರೆ...ಅದನ್ನು ತಗೊಂಡವ್ರು ಅನುಮಾನಿಸುತ್ತಾರೆ...ಅಥವ ತಗೊಂಡವ್ರಗೆ ಅದರ ಬಗ್ಗೆ ಐಬು ಮೂಡಿ ಅದನ್ನು ಪರೀಕ್ಸೆ ಮಾಡ್ತಾರೆ. ವಸ್ತುವನ್ನು ಬಿಟ್ಟಿಯಾಗಿ ತಗೊಂಡು ಅದರ ಐಬುಗಳ ಬಗ್ಗೆ ಮಾತಾಡುವುದು ಜಂಬದ ಮಾತಾಗುತ್ತದೆ.

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? - (ರಾಗ ಮೋಹನ, ಭಾಗ ಐದು, ಅಂತೂ ಮುಗಿಯಿತು!)

ಮೋಹನ ಮುರಳಿಯ ಕರೆಯ ಬಗ್ಗೆ ವಿಚಿತ್ರಾನ್ನದ ಶ್ರೀವತ್ಸಜೋಷಿಯವರು ಮೊನ್ನೆ ಬರೆದಿದ್ದರು. ಆಗಲೇ ನಾನು ನನ್ನ ಮೋಹನ ರಾಗದ ಬಗ್ಗೆಯ ಟಿಪ್ಪಣಿ ಇನ್ನೂ ಮುಗಿಸಲೇ ಇಲ್ಲ ಎಂಬುದು ನೆನಪಾಯಿತು. ಇರಲಿ, ನಾನು ನನ್ನ ವಿವರಣೆ ಬರೆಯದಿದ್ದರೆ, ಮೋಹನಕ್ಕಾದ ಹಾನಿ ಏನೂ ಇಲ್ಲ. ಆದರೂ. ಸರಿಯಾದ ಮುಕ್ತಾಯಕ್ಕೆ, ಇದು ಬೇಕೆನ್ನಿಸಿತು.

ಇದು ಪಾನಕ ಪ್ರಪಂಚ...

ನಿಮಗೆ ಗೊತ್ತಾ, ೫೦ ವಷ೯ದ ಕೆಳಗೆ ಮಲೆನಾಡು ಭಾಗದಲ್ಲಿ ೭೦ಕ್ಕೂ ಹೆಚ್ಚು ರೀತಿ ಪಾನಕ ಇತ್ತು. ಇದು ಪ್ರೂವ್ ಆಗಿದೆ. ದಾಖಲೆ ಸಮೇತ.
ಕೃಷಿ ಪ್ರಯೋಗ ಪರಿವಾರ ಸಂಸ್ಥೆಯು ೪೦ ಜನರ ಸಹಾಯ ಪಡೆದು ಈ ಮಹತ್ ಕಾರ್ಯ ಮಾಡಿದೆ.

ಕನ್ನಡ PDFಗಳು

ಎಣಿಸಿಗೆ ಬಲೆಯಲ್ಲಿ ಕನ್ನಡ PDF ಹೊತ್ತಿಗೆಗಳು ಬಾಳ ಕಡಿಮೆ. http://dli.iiit.ac.in ನಲ್ಲಿ ಆನ್‍ಲೈನ್ ಹೊತ್ತಿಗೆಗಳನ್ನು ಓದಬಹುದು.

http://mykannada.net ನಲ್ಲಿ ನೇರವಾಗಿ ಇಳಿಸಿಕೊಳ್ಳಬಹುದಾದ ಕೆಲವು PDF ಹೊತ್ತಿಗೆಗಳು ಸಿಗುತ್ತವೆ. ನೋಡಿ.

ಪ್ಯಾಂಟಿಂದ ಪಂಚೆಗೆ !!!

ನಂ ಮಾನ್ಯ ಮುಖ್ಯ ಮಂತ್ರಿಗಳು ಅವಗವಾಗ ಪಂಚೆ-ಶರಾಯಿಗೆ ಶಿಫ್ಟ ಆಗ್ತ ಇತ್ರಾರೆ ? ಇದರ ಉದ್ದೇಶ ಏನು ಶಿವಾ ? ಖಾದಿಯಿಂದ ಪಂಚೆ-ಶರಾಯಿಗೆ ? ಎನಾದ್ರು ???? ;)