ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

ಬರಹ

 

 

"ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯಸುವ ಫಿಕ್ಷನ್ ಇದರ ಕಥೆ. ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಳಿತು ನೋಡಿ ನಗುವುದನ್ನು ಬಿಟ್ಟರೆ ಸಿನಿಮಾ ವೀಕ್ಷಕನಿಂದ ಇನ್ನೇನನ್ನೂ ಬಯಸುವುದಿಲ್ಲ. ಆದರೆ ಸಿನಿಮಾ ಹೆಚ್ಚು ವಲ್ಗಾರಿಟಿ ಇಲ್ಲದೆ ನಗಿಸಿ, ಹಲವೆಡೆ ಸಹಜ ಡೈಲಾಗುಗಳನ್ನ ಹೊತ್ತುಕೊಂಡು ಬಹಳ ಖುಷಿ ಕೊಡುವ ಚಿತ್ರವಾಗಿ ಮುಗಿಯುತ್ತದೆ.

ಗಣೇಶನ ಬಾಯಿಂದ witty ಡೈಲಾಗ್ಸ್ ಒಂದರಮೇಲೊಂದು ಸುರಿಯುತ್ತ ವೀಕ್ಷಕರು ಸ್ಕ್ರೀನಿಗೆ ಕಣ್ಣಿಟ್ಟು ಕೂತಿರುವಂತೆ ಮಾಡುತ್ತದೆ. ಸ್ಕ್ರೀನ್ ಪ್ಲೇ ಜೀವ ತುಂಬಿಕೊಂಡಿರುವಂತಿದೆ, ಅರ್ಥಪೂರ್ಣವಲ್ಲದಿದ್ದರೂ. ಸಂಗೀತ ಬಹಳ ಡಿಫರೆಂಟ್ ಆಗಿದ್ದು ವೀಡಿಯೋ ಹಾಡುಗಳಿಗೆ ಚೆನ್ನಾಗಿ ಹೊಂದಿಕೊಂಡಂತೆ ಮೂಡಿಬಂದಿದೆ.
ಸಿನೆಮಾಟೋಗ್ರಫಿ ಬಹಳ ಚೆನ್ನಾಗಿದೆ. ಡಿಜಿಟಲ್ ಎಫೆಕ್ಟ್ ಚೆಂದವಾಗಿ ನಂಬಿಕೆ ತರುವಂತಿದೆ (ಸಂಪೂರ್ಣವಾಗಿ ಸರಿಯಾಗಿಲ್ಲದಿದ್ದರೂ).

ನಟ ಗಣೇಶ್ ತಮ್ಮ ಪಾತ್ರಕ್ಕೆ ಸರಿಯಾಗಿ ಹೊಂದುತ್ತಾರೆ. ಡೈಸಿ ಬೋಪಣ್ಣರ ಪಾತ್ರ ಸಿನಿಮಾ ಹಾಲ್ ಬಿಟ್ಟು ಹೊರಬಂದರೂ ನೆನಪಿನಲ್ಲುಳಿಯುತ್ತದೆ. ಜೊತೆಗಿರುವ ಉಳಿದ ಕಲಾವಿದರು ಒಳ್ಳೆಯ ನಟನೆಯಿಂದ ಚಿತ್ರವನ್ನು ಮತ್ತಷ್ಟು ಉತ್ತಮವಾಗಿಸಿದ್ದಾರೆ.

 

 

ಬಹುಶಃ ಇಡೀ ಚಿತ್ರದ ಜೀವಾಳ ಅದರ ಡೈಲಾಗ್. ಚೆನ್ನಾಗಿ ಬರೆಯಲ್ಪಟ್ಟಿದೆ. ನಿರ್ದೇಶಕ ಯೋಗರಾಜ ಭಟ್ ಇಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಈ ಚಿತ್ರ "ಮುಂಗಾರು ಮಳೆ"ಗಿಂತ ಎಷ್ಟೋ ಉತ್ತಮ ಎನ್ನಿಸುವುದರಲ್ಲಿ ಸಂಶಯವಿಲ್ಲ.

ಚಿತ್ರಗಳು: ಚಿತ್ರಲೋಕ.com

([:http://hpnadig.net/blog/2008/01/20/galipata-2-hours-pure-entertainment/477| ಇಂಗ್ಲೀಷಿನಲ್ಲಿ ನಾನು ಬರೆದ ರಿವ್ಯೂ ಇಲ್ಲಿ ಓದಬಹುದು])