ಸುಭಾಷಿತ
ಕತ್ತಿ ಪರದೇಶಿಯಾದರೆ ಮಾತ್ರ ನೋವೇ? ನಮ್ಮವರು ಹದಹಾಕಿ ತಿವಿದರದು ಹೂವೇ?
ಕತ್ತಿ ಪರದೇಶಿಯಾದರೆ ಮಾತ್ರ ನೋವೇ? ನಮ್ಮವರು ಹದಹಾಕಿ ತಿವಿದರದು ಹೂವೇ?
ಕಣ್ಣಿಲ್ಲದವನು ಕೋಪ ಬಂದರೂ ದುರುಗುಟ್ಟಲಾರ, ರಟ್ಟೆಯಿಲ್ಲದವನು ಶಸ್ತ್ರವಿದ್ದರೂ ಯುದ್ಧ ಮಾಡಲಾರ.
ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು, ಏರಿದವನು ಚಿಕ್ಕವನಿರಬೇಕಲೆ ಎಂಬಾ ಮಾತನು ಸಾರುವನು
ಎಳೆನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರು ಆರಯ್ಯ?
ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿನೀರನೆರೆದವರು ಆರಯ್ಯ?
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ
ಎಲ್ಲಿ ಬರಮಾಡಿಕೊಳ್ಳುವವರು ಇಲ್ಲವೋ ಎಲ್ಲಿ ಆತ್ಮೀಯ ವಾತಾವರಣ ಇಲ್ಲವೋ ಎಲ್ಲಿ ಗುಣದೋಷಗಳ ಮಾತೇ ಇಲ್ಲವೋ ಅಂಥ ಮನೆಗೆ ಹೋಗಲಾಗದು.
ಎದೆಯ ಹೊರೆಯನಿಳಿಸಿ ಮೇಲೆ ಬರುವ ನಗು ಬದುಕ ಬೆಲೆ, ನಕ್ಕರೆ ನಗಬಲ್ಲುದಿಳೆ
ಉನ್ನತಿ ಪಡೆದನ್ಯರಿಗೆ ನೆರವಾಗದಿರೆ ನಿನ್ನಯ ಜನ್ಮವು ವ್ಯರ್ಥ, ಮೇಲೇರಿದ ಮೋಡ ಮಳೆ ಸುರಿಯದಿರೆ ಏರಿದ್ದಕ್ಕೇನಿದೆ ಅರ್ಥ?
ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ, ಉತ್ಸಾಹೀ ಪುರುಷನಿಗೆ ಜಗತ್ತಿನಲ್ಲಿ ದುರ್ಲಭ ವಸ್ತುವೆಂಬುದೇ ಇಲ್ಲ.
ಈ ಭೂಮೀಲಿ ಜೀವಿಸೋಕೆ ಭಗವಂತನಿಗೆ ಕೊಡೋ ಬಾಡಿಗೆ, ಸುತ್ತಮುತ್ತಲೂ ಇರೋ ಜನರಿಗೆ ಉಪಕಾರವಾಗಿರೋದೇ...