ಕನ್ನಡ ಪತ್ರಿಕೆಗಳು

ಕನ್ನಡ ಪತ್ರಿಕೆಗಳು

Comments

ಬರಹ

ಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ ಓದುವುದೇ ತ್ರಾಸದ ಕೆಲಸ. ನಾನು ದಿನಾಲು ಉದಯವಾಣಿ, ವಿಜಯ ಕರ್ನಾಟಕ ಓದುತ್ತೇನೆ. ನನಗೇಕೊ ಹಳೇ ಉದಯವಾಣಿಯೇ ಖುಷಿ ಕೋಡುವುದು. ಈಗ ಅದರಲ್ಲಿ ಪೇಜು ತುಂಭ ಜಾಹಿರಾತು ಸುದ್ದಿ ಓದುವುದಕಿಂತ ಸುದ್ದಿ ನೋಡೋದು ಮಾತ್ರ. ಮುಂಚಿನ ಒಳ್ಳೆಯ ಅಂಕಣಕಾರರ ಲೇಖನವು ಮಾಯ. ಕ್ರೀಡೆಗೆ ಎರಡು ಪುಟ ಮೀಸಲಿಟ್ಟು ಅಲ್ಲಿ ಜಾಹಿರಾತು ತುಂಬಿಸುತ್ತಾರೆ. ರವಿವಾರದ ಸಾಪ್ತಾಹಿಕ ವಂತು ತುಂಬಾ ಕಳೆ ಗುಂದಿದೆ, ಮುಂಚಿನ ಸೌಂದ್ರಯ ಕಳೆದು ಕೊಂಡಿದೆ. ಓಟ್ಟಾರೆ ಹಣ ಮಾಡೊದೆ ಮುಖ್ಯ ವಾದಂತೆ ತೋರುತ್ತದೆ. ಈಕಡೆ ವಿಜಯ ಕರ್ನಾಟಕ ನಾನು ಬದಲಾಗಿದ್ದೇನೆ ಅಂತ ಹೇಳಿಕೊಂಡು "ಟೈಂಸ್ ಆಫ಼್ ಇಂಡಿಯ"ದ ಕನ್ನಡ ಅಚ್ಚಿನ ಹಾಗೆ ಕಾಣಲಾರಂಬಿಸಿದೆ. ನೀವೇನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet