ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕ್ಕೆ ದಿಕ್ಕಿಲ್ಲವೆ?!!

೪ ದಿಕ್ಕುಗಳಾದ ಪೂರ್ವ , ಪಶ್ಚಿಮ, ಉತ್ತರ , ದಕ್ಷಿಣ ಇವುಗಳಿಗೆ ಕನ್ನಡದಲ್ಲಿ ಮೂಡಣ, ಪಡುವಣ, ಬಡಗಣ, ತೆಂಕಣ ಎನ್ನುವುದು ಸರಿಯೆ?

ಇನ್ನುಳಿದ ೪ ದಿಕ್ಕುಗಳಾದ ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯಗಳಿಗೆ ಕನ್ನಡ ಪದಗಳು ಇವೆಯೆ? ಇದ್ದರೆ ಅವು ಏನು?

ಬಲ್ಲವರು ತಿಳಿಸಿಕೊಡಬೇಕು.

DLI ತಾಣ ಎಟುಕುತ್ತಿಲ್ಲ..

ಸುಮಾರು ಒಂದು ತಿಂಗಳಿನಿಂದ ನನಗೆ DLI ತಾಣ ಎಟುಕುತ್ತಿಲ್ಲ..

ಈ ಕೆಳಗಿನಂತೆ ಉಲಿಯುತ್ತಿದೆ ಈ ತಾಣ..
The page is currently unavailable
Due to current high demand, the page you are looking for cannot be delivered right now.

ನಿಮಗೂ ಹೀಗೆಯೇ ಬರುತ್ತಿರುವುದೋ..?

ಏನನ್ನೂ ಕಲಿಸದ ಇಂದಿನ ಕನ್ನಡ ಚಿತ್ರಗಳು...


ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ ಸ್ಕೂಟರ್ ತಳ್ಳುತ್ತ ನಟಿಸುತ್ತಿರುವಾಗ ನಮ್ಮಲ್ಲಿನ ಹಿರಿಯರಿಗೆ ರೈತನ ಪಾತ್ರದಲ್ಲೂ ಸೆಕ್ಸಿಯಾಗಿ ಕಾಣುವ ಹಂಬಲ!

ರಾಮನಗರ ನಗರ ಸಭಾ ಚುನಾವಣೆ: ನೂರಾರು ಕೋಟಿಗಳ ಕಾಮಗಾರಿ: ಓಟಿನ ಪ್ರತಿಫಲಾಪೇಕ್ಷೆಯಲ್ಲಿ ಜೆಡಿಎಸ್

ರಾಮನಗರದ ಅಭಿವೃದ್ದಿಗಾಗಿ ಕ್ಷೇತ್ರದ ಶಾಸಕರು ಆದ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರು ನೂರಾರು ಕೋಟಿ ರೂ.ಗಳನ್ನು ಸರ್ಕಾರದಿಂದ ಕೊಡಿಸಿದ್ದಾರೆ. ಎಂದು ಆಗದಿದ್ದ ಅಭಿವೃದ್ದಿ ಕಾಮಗಾರಿಗಳು ಆಗುತ್ತಿವೆ. ಇದೀಗ ಅವರಿಗೆ ಕೃತಜ್ಣತೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ.

ನಾಳೆಯಿಂದ ಕನ್ನಡ ಕಸ್ತೂರಿ ಹೊನಲು

ಕನ್ನಡಿಗರ ಮೊದಲ ಕಿರುತೆರೆ ಹೊನಲು ನಾಳೆಯಿಂದ ಹರಿದು ಬರಲಿದೆ. ಇನ್ನಾದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡಕ್ಕಾಗಿ ಕಸುಬುದಾರರಾಗುವರೆಂದು(entrepreneurial) ಬಯಸೋಣವೆ?

http://prajavani.net/Content/Sep252007/state2007092447283.asp?section=updatenews

ಆಟ, ಧರ್ಮ ಮತ್ತು ರಾಜಕೀಯ

ಭಾರತ ೨೦-೨೦ ಪಂದ್ಯವನ್ನು ಗೆದ್ದಾದ ಮೇಲೆ, ಪಾಕಿಸ್ತಾನದ ನಾಯಕ ಹೇಳಿದ್ದು, 'First of all I'd like to thank people back home and the Muslims around the world'. ವಿಪರ್ಯಾಸವೆಂದರೆ ಭಾರತದ ಮುಸಲ್ಮಾನ ಇರ್ಫಾನ್ ಪಠಾಣ್ ಪಂದ್ಯಪುರುಷ.

Aparthakosha - By Ganesh K, Davangere-Bengaluru

ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..!

ಸಾಲಿಯಾನಿ : ಶಾಲಾಬಾಲಕ(ಕಿ)

ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ

ಸಾಂಗ್ಲಿಯಾನಿ : ವಿವರಣೆ ಬೇಕಿಲ್ಲ

ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು..!

ಮತ್ತಷ್ಟು ಅಪಾರ್ಥಗಳಿಗಾಗಿ....

www.aparthakosha.wordpress.com