ರಾಮನಗರ ನಗರ ಸಭಾ ಚುನಾವಣೆ: ನೂರಾರು ಕೋಟಿಗಳ ಕಾಮಗಾರಿ: ಓಟಿನ ಪ್ರತಿಫಲಾಪೇಕ್ಷೆಯಲ್ಲಿ ಜೆಡಿಎಸ್

Submitted by prakashrmgm on Tue, 09/25/2007 - 05:56

ರಾಮನಗರದ ಅಭಿವೃದ್ದಿಗಾಗಿ ಕ್ಷೇತ್ರದ ಶಾಸಕರು ಆದ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರು ನೂರಾರು ಕೋಟಿ ರೂ.ಗಳನ್ನು ಸರ್ಕಾರದಿಂದ ಕೊಡಿಸಿದ್ದಾರೆ. ಎಂದು ಆಗದಿದ್ದ ಅಭಿವೃದ್ದಿ ಕಾಮಗಾರಿಗಳು ಆಗುತ್ತಿವೆ. ಇದೀಗ ಅವರಿಗೆ ಕೃತಜ್ಣತೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ನಗರ ಸಭಾ ಚುನಾವಣೆಯಲ್ಲಿ ನಗರದ ಮತದಾರರು ತಮ್ಮ ಓಟನ್ನು ಜೆ ಡಿ ಎಸ್ ಅಭ್ಯರ್ಥಿಗಳಿಗೆ ಕೊಟ್ಟು ಗೆಲ್ಲಿಸುವ ಮೂಲಕ ತಮ್ಮ ಕೃತಜ್ಣತೆ ಸಲ್ಲಿಸುವಂತೆ ಕೆಲವು ಜೆಡಿಎಸ್ ಮುಖಂಡರು ಮತದಾರರನ್ನು ಓಲೈಸುತ್ತಿರುವುದು ಕಂಡು ಬಂದಿದೆ.

ಒಂದು ಪಕ್ಷ ನಗರ ಸಭೆಯ ಆಡಳಿತ ಜೆ ಡಿ ಎಸ್ ಗೆ ದೊರಕದೆ ಹೋದಲ್ಲಿ ಕುಮಾರ ಸ್ವಾಮಿಯವರಿಗೆ ಬೇಸರವಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರದಿಂದ್ ಸ್ಪರ್ಧಿಸದೆ ಬೇರೆಡೆಯಿಂದ ಸ್ಪರ್ಧಿಸ ಬಹುದು ಎಂಬ ಎಚ್ಚರಿಕೆಯನ್ನು ಕೆಲವು ಅಭ್ಯರ್ಥಿಗಳು ತಮ್ಮ ಮತದಾರನ್ನು ಎಚ್ಚರಿಸುತ್ತಿದ್ದಾರೆ.

Rating
No votes yet