ಆಟ, ಧರ್ಮ ಮತ್ತು ರಾಜಕೀಯ

Submitted by keshav on Tue, 09/25/2007 - 03:42
ಭಾರತ ೨೦-೨೦ ಪಂದ್ಯವನ್ನು ಗೆದ್ದಾದ ಮೇಲೆ, ಪಾಕಿಸ್ತಾನದ ನಾಯಕ ಹೇಳಿದ್ದು, 'First of all I'd like to thank people back home and the Muslims around the world'. ವಿಪರ್ಯಾಸವೆಂದರೆ ಭಾರತದ ಮುಸಲ್ಮಾನ ಇರ್ಫಾನ್ ಪಠಾಣ್ ಪಂದ್ಯಪುರುಷ.

ಅಫಘಾನಿಸ್ತಾನದ ಮೇಲೆ ಅಮೇರಿಕಾ ದಂಡೆತ್ತಿದಾಗ ಜಾರ್ಜ್ ಬುಷ್ ಹೇಳಿದ, 'GOD has told me to attack Afganistan'. ವಿಪರ್ಯಾಸವೆಂದರೆ ಅವನನ್ನು ಮೊದಲು ಬೆಂಬಲಿಸಿದ್ದು ಮುಸಲ್ಮಾನರೇ ಹೆಚ್ಚಾಗಿರುವ ಪಾಕಿಸ್ತಾನ.

ಸೇತುಸಮುದ್ರಂ ವಿವಾದದಲ್ಲಿ ರಾಮ ಇದ್ದನೋ ಇಲ್ಲವೋ, ರಾಮಸೇತು ಇತ್ತೋ ಇಲ್ಲವೋ ಇನ್ನೊಂದು ವಿಷಯ. ಆರ್ಯರು ಭಾರತದ ಹೊರಗಿನಿಂದ ಬಂದವರೆಂದು ಯುರೋಪಿಯನ್ ಇತಿಹಾಸಕಾರರ ಮಾತುಗಳನ್ನು ಸತ್ಯವೆಂದು ನಂಬಿ ದಕ್ಷಿಣ ಭಾರತ (ದ್ರವಿಡರು) ಉತ್ತರಭಾರತದವರು (ಆರ್ಯರು) ಹೇಳುವುದೆಲ್ಲವನ್ನೂ ತೆಗಳುವುದು. ವಿಪರ್ಯಾಸವೆಂದರೆ ಕರುಣಾನಿಧಿಯ ಮೇಲೆ ಫತ್ವಾ ಹೊರಡಿಸುವುದು.

ಯಾಕೆ ಅವಶ್ಯಕತೆ ಇಲ್ಲದಿದ್ದರೂ ರಾಜಕೀಯದಲ್ಲಿ ಧರ್ಮ ಸೇರಿಸುತ್ತಾರೆ, ಆಟದಲ್ಲಿ ಧರ್ಮ ತುರುಕುತ್ತಾರೆ?
Rating
No votes yet