ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು

ಮೊದಲು ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು executable jar ಒಂದನ್ನು ನೀಡಿದ್ದರು. ನಾನು ಅದೇ jar ಅನ್ನು ಬಳಸಿಕೊಂಡು applet ಒಂದನ್ನು ಬರೆದಿದ್ದೇನೆ. ಇದನ್ನು ಮೊದಲುಮಾಡುವ ಮೊದಲು ನಿಮ್ಮ PC ಲಿ ಜಾವಾ ಇರಬೇಕು.

ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥೆಗಾರರು ಮುನ್ನುಡಿ ಬರೆದು, ಪುಸ್ತಕ ಬಿಡುಗಡೆ ಮಾಡಿ, ಶುಭಹಾರೈಸಿ ಹೋಗುವುದು ನಡೆಯುತ್ತಲೇ ಇದೆ. ಇವೆಲ್ಲ ಈ ಲೇಖಕರು ತಾವೇ ಸ್ವಂತ ಖರ್ಚು ಹಾಕಿ ಪ್ರಕಟಿಸಿರುವ ಪುಸ್ತಕಗಳು. ಹಾಗಿದ್ದ ಮೇಲೆ, ಇದರ ಗುಣಮಟ್ಟ ಎಂತಹದ್ದಿರಬಹುದು ಎಂಬ ಪ್ರಶ್ನೆ ಏಳುವುದು ಸಹಜವೆ. ನನಗನ್ನಿಸುವ ಹಾಗೆ ಇವೆಲ್ಲ ಸುಮಾರು ಒಳ್ಳೆಯ "ಟೈಮ್ ಪಾಸ್" ತರಹದ ಮುದ ನೀಡುವ ಕೃತಿಗಳು. ಆದರೆ, ಯಾವುದೇ "ಆವರಣ" ದಂತಹ ಗಂಭೀರ ಚರ್ಚೆಗೆ ಗುರಿಪಡಿಸುವಂತಹ ಮೇರುಕೃತಿಯಲ್ಲ. ಹೀಗೆ ಬರೆದ ಮರುಕ್ಷಣ ಅನ್ನಿಸಿದ್ದು, ನಾನೇಕೆ ಆವರಣದ ಜೊತೆ ಎನ್.ಅರ್.ಐ. ಕೃತಿಗಳನ್ನು ತಾಳೆ ಹಾಕುತ್ತಿದ್ದೇನೆ? ಇವಕ್ಕೆ ಇವರದ್ದೇ ಒಂದು ಸ್ವಂತ ಸ್ಥಾನವಿಲ್ಲವೇ?

ಹೌದು, ಇವರಿಗೆ ಒಂದು ಸ್ಥಾನವಿದೆ. ಅದೇನೆಂದರೆ, ಒಂದು ಪುಟ್ಟ ಮಗು ಚೆನ್ನಾದ ಚಿತ್ರ ಬಿಡಿಸಿದಾಗ, ದೊಡ್ಡವರು- ಚೆನ್ನಾಗಿದೆ ಮರಿ, ಇನ್ನೂ ಬರೆ, ನಿನಗೆ ಒಳ್ಳೆಯ ಭವಿಷ್ಯವಿದೆ- ಎಂದು ಬೆನ್ನು ತಟ್ಟಿ ಮುಂದೆ ಹೋಗುವ ಸ್ಥಾನ. ಯಾರೂ ಕನ್ನಡ ಸಾಹಿತ್ಯದಲ್ಲಿ ಇವರದೂ ಒಂದು ಪಾತ್ರವಿದೆಯೆಂದು ಗುರುತಿಸದ ಸ್ಥಾನ. ಭಾರತದಲ್ಲಿ ನಡೆಯುವ ಕನ್ನಡ ಕೃಷಿ "ಮೇಯಿನ್ ಸ್ಟ್ರೀಮ್", ಇಲ್ಲಿ ನಡೆಯುವುದು ಸಂತೃಪ್ತ ಮನಸ್ಸು ತಿಂದು ತೇಗಿ, ಬೀಗಿ ಬರೆಯುವ "ಹಾಬಿ" ಯ ಬರಹ. ಹೀಗಂತ ಬೆನ್ನ ಹಿಂದೆ ಹೇಳಿರುವ ಭಾರತದ ಲೇಖಕರು ಇದ್ದಾರೆ. ಹೌದಪ್ಪ ಹೌದು ಎಂದು ಅವರ ವಾಕ್ಯವೆಲ್ಲ ವೇದವೆನ್ನುವಂತೆ ಅಮೆರಿಕನ್ನಡಿಗರು ಸಹ ಅದಕ್ಕೆ ತಲೆಯಲ್ಲಾಡಿಸಿದ್ದಾರೆ. ಇದು ನಿಜವೇ? ಹಾಗಿದ್ದರೆ ನಾವೇಕೆ ಅವರನ್ನು ಮೆಚ್ಚಿಸಲು ಬರೆಯಬೇಕು? ನಾವೇಕೆ ಇವರ ಕಣ್ಣಲ್ಲಿ ಬೆಳಗಬೇಕೆಂದು ಒದ್ದಾಡಬೇಕು? ಗುಡಿಸಲಲ್ಲಿ ಮಲಗಿ, ಕೊಳಚೆಗೇರಿಯಲ್ಲಿ ಜೀವನ ಸವಿಸುವ ಪಾತ್ರಗಳು ಮಾತ್ರ ಪ್ರಶಸ್ತಿಗೆ ಲಾಯಕ್ಕೋ? ಹವಾನಿಯಂತ್ರಿತ ಕ್ಯೂಬಿಕಲ್ನಲ್ಲಿ ಕುಳಿತಿದ್ದು, ಕಾರಿನಲ್ಲಿ ಮನೆಗೆ ತೆರಳುವ ಪಾತ್ರಗಳ ಬದುಕಿನಲ್ಲಿ ಗೋಳೇ ಇಲ್ಲವೋ? ಹಾಗಿದ್ದಲ್ಲಿ ಇಲ್ಲಿನ ಮಾನಸಿಕ ಆಸ್ಪತ್ರೆಗಳಲ್ಲಿ ಕ್ಯೂ ಯಾಕಿರುತ್ತೆ?

ಬಾಳ ಜೋಡಿ

ಬಾಳ ಜೋಡಿ

ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು
ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು

ನೀನೀಗ ಬಂದಿರುವೆ ನನ್ನ ಜೀವನದಲಿ
ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ

ದಾರಿಯಲಿ ಇಹುದು ಕಡಿದಾದ ಬೆಟ್ಟ
ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ!

ನಾವ್ದಾಟಬಹುದು ನದಿಯು-ನದಿಯ ಸುಳಿಯು
ನೀನಿರಲು ಜೊತೆಯಲ್ಲಿ ಇರುವುದೇ ಸುಳಿಯ ಸುಳಿವು?

ಶ್ವೇತಭವನದಲೀ...ಹೂವಿಗೆ ಬಣ್ಣತಂದವನೇ...ಒಲವೇ ಮಿಸ್‍ಮಯಾ...!

ಏನು? ನಿಜ್ವಾ? ಅಮೆರಿಕದ ಪ್ರಥಮ ಪ್ರಜೆ ಬುಶ್ ಮತ್ತು ಪ್ರಥಮ ಮಹಿಳೆ ಅರ್ಥಾತ್ ಬುಶ್ ಪತ್ನಿ ಲಾರಾ ಮಾತಿನ ಮಧ್ಯೆ `ಮುಂಗಾರು ಮಳೆ 'ಯೇ? ಅವರು ಕನ್ನಡ ಚಿತ್ರನೋಡಿದ್ರಾ?ಕೂಡಲೇ ರುಚಿ ನೋಡಿ, ತಿಳಿ ಹಾಸ್ಯ ಬೆರೆತ ಸ್ಪೆಷಲ್ ವಿಚಿತ್ರಾನ್ನ-ಶ್ರೀವತ್ಸ ಜೋಶಿಯವರದ್ದು.

ದೇವರಿಗೊಂದು ಮನವಿ

ನೀನೆ ಆದಿ ನೀನೆ ಅಂತ್ಯ ನಮ್ಮ ಪಾಲಿಗೆ

ನೀನೆ ಶಕ್ತಿ ನೀನೆ ಯುಕ್ತಿ ನಮ್ಮ ಬಾಳಿಗೆ

ಆಸರೆ ನೀ ನಮಗೆ ನೀ ಕೈಬಿಟ್ಟರೆ ಸಾವೆಮಗೆ   "ಪ" 

ಯಾರು ತಾಯಿ ಯಾರು ತಂದೆ ನನ್ನ ಪಾಲಿಗೆ

ಬಾಳತುಂಬ ಬವಣೆ ಏಕೆ ನಮ್ಮ ಬಾಳಿಗೆ

ಕೆ.ರಾಮದಾಸ್ ಇನ್ನಿಲ್ಲ

ಕೆ.ರಾಮದಾಸ್ ಮೈಸೂರಿನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ವಿವರಗಳಿಗೆ ಕೆಳಗಿನ ಚುರಮುರಿ ಲಿಂಕ್ ನೋಡಿ.
http://churumuri.wordpress.com/2007/06/19/k-ramdas-rest-in-peace/

ಅಂತರಜಾಲದಲ್ಲಿ ಎಲ್ಲಾದರೂ ಕೆ.ರಾಮದಾಸ್ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿ.

ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಷಯವನ್ನು ಪ್ರಸ್ತಾಪಿಸುವಾಗಲೆಲ್ಲ ನಾವು ಮಾಡುವ ಹೆದ್ದಪ್ಪು ಎಂದರೆ ’ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳುವುದು. ನಾವು ತಿದ್ದಿಕೊಳ್ಳಲೇಬೇಕಾದ ಅಂಶ ಒಂದಿದೆ: ನಮಗೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡೆವು.

ತಂದೆಯ ದಿನ

ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂದಿರು ಔಷಧಿ ತರಲು ನಡೆದರು. ಹೀಗಾಗಿ ನನ್ನ ತಂದೆಯ ಕೊನೆಯುಸಿರು ನೋಡಿದ್ದು ನಾನು ಮತ್ತು ನನ್ನ ತಾಯಿ ಇಬ್ಬರೇ. ನನ್ನ ತಾಯಿ ಅವರ ಬಾಯೊಳಗೆ ಸುರಿದ ಗಂಗಾಜಲ ನೊರೆ ನೊರೆಯಾಗಿ ಆಚೆ ಇಳಿದಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನನ್ನು ಚಟ್ಟಕ್ಕೆ ಬಿಗಿದು, ಅವರ ಬಾಯಿಗೆ ಅಕ್ಕಿಕಾಳು ಹಾಕಿದ್ದು, ನಮ್ಮ ಗೋಳಾಟ, ಅಸಹಾಯಕತೆಯನ್ನು ಕುತೂಹಲದಿಂದ ನೋಡಲು ಅಪರಿಚಿತರು ಮನೆಯ ಮುಂದೆ ನೆರೆದದ್ದು, ಇವೆಲ್ಲಾ ಎಂದೂ ಮರೆಯದ ದೃಶ್ಯಗಳು. ಆ ಒಂದು ರಾತ್ರಿ ನಮ್ಮ ಪರಿವಾರದ ಎಲ್ಲರ ಮೇಲೂ ಒಂದೊಂದು ರೀತಿಯ ಪರಿಣಾಮ ಬೀರಿತು.

ಆರು ವರುಷದ ಮಗುವಿಗೆ ಇದರಿಂದ ಮಾನಸಿಕವಾಗಿ ಹೆಚ್ಚೇನೂ ಬದಲಾಗಬಾರದಲ್ಲವೇ? ಏಕೆಂದರೆ, ಮಗುವಿಗೆ ಏನು ತಿಳಿದೀತು ಎಂದೆನಿಸುತ್ತಲ್ಲವೇ? ಆದರೆ, ನನಗೇ ಆಶ್ಚರ್ಯವಾಗುವಂತೆ ಆ ಘಟನೆ ನನ್ನನ್ನು ಬದುಕಿನಲ್ಲಿ ರೂಪಿಸಿದೆ. ಆ ದಿನಗಳಲ್ಲಿ ಎಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿದ್ದಂತೆ ಭಾಸವಾಗುತ್ತಿತ್ತು ಮತ್ತು ಆ ನೋಟವನ್ನು ನಾನು ದ್ವೇಷಿಸುವಂತೆ ಮಾಡುತ್ತಿತ್ತು. ಈಗಲೂ ಸಹ ನನಗೆ ಯಾರದೇ ಸಹಾನುಭೂತಿ ಅಥವಾ ಕರುಣೆ ರುಚಿಸುವುದಿಲ್ಲ. ಹತ್ತಿರದವರ ಮುಂದೆಯೂ ನನ್ನ ದುರ್ಬಲತೆಯನ್ನು ತೆರೆದಿಡಲು ಹೆದರುತ್ತೇನೆ, ಏಕೆಂದರೆ, ಅದರಿಂದ ಅವರಲ್ಲಿ ಹುಟ್ಟುವ ಅನುಕಂಪ ನನಗೆ ಸೇರುವುದಿಲ್ಲ.

ray ಕಿರಣ ಆದ್ರೆ radiation ವಿಕಿರಣ ಅಂತೆ !?

radiation ಗೆ ವಿಕಿರಣ ಸರಿಯಾದ ಪದವೆ?

ವಿಕಿರಣ ಅಂದ್ರೆ ವಿಶೇಶ ಕಿರಣ? ....ಅಂದ್ರೆ ಇಂಗ್ಲಿಸಿನಲ್ಲಿ ಅದು special rays ಅಂತ ಆಗಬೇಕಿತ್ತು.