ದೇವರಿಗೊಂದು ಮನವಿ

ದೇವರಿಗೊಂದು ಮನವಿ

ಬರಹ

ನೀನೆ ಆದಿ ನೀನೆ ಅಂತ್ಯ ನಮ್ಮ ಪಾಲಿಗೆ

ನೀನೆ ಶಕ್ತಿ ನೀನೆ ಯುಕ್ತಿ ನಮ್ಮ ಬಾಳಿಗೆ

ಆಸರೆ ನೀ ನಮಗೆ ನೀ ಕೈಬಿಟ್ಟರೆ ಸಾವೆಮಗೆ   "ಪ" 

ಯಾರು ತಾಯಿ ಯಾರು ತಂದೆ ನನ್ನ ಪಾಲಿಗೆ

ಬಾಳತುಂಬ ಬವಣೆ ಏಕೆ ನಮ್ಮ ಬಾಳಿಗೆ

ಯಾವ ತಪ್ಪಿಗೆ ಇಂತ ಶಿಕ್ಷೆಯು ನಮಗೆ  "ನೀನೆ"

ಹಗಲು ರಾತ್ರಿ ಕಳೆವುದೇಗೆ

ಗಾಳಿ ಮಳೆಯ ಸಹಿಪುದೇಗೆ

ಅಲೆಯುತಿರುವೆ ದಾರಿ ಕಾಣದೆ     "ನೀನೆ"

ಬಾಳತುಂಬ ಬವಣೆ ತುಂಬಿ

ನಾನು ನೊಂದಿಹೆ ಬಾಳಲಾರೆ

ಬದುಕಲಾರೆ ನೀನು ಬಾರದೆ ದಾರಿ ತೊರದೆ   "ನೀನೆ"

ತಿನ್ನೊಅನ್ನ ಚಿನ್ನವಾಗಿ ಕಣ್ಣನೀರು

ನೆತ್ತರಾಗಿ ಕರೆವೆ ಬರುವೆಯಾ

ದೇವ ನಮ್ಮ ನೀನು ಮರೆತೆಯಾ  "ನೀನು"

ಹರಿದ ಬಟ್ಟೆ ಮುರಿದ ತಟ್ಟೆ

ಬದುಕು ಎಂಬುದಿಷ್ಟೆ ಎಲ್ಲ

ಲೊಳಲೊಟ್ಟೆ ಎಂಬ ಸತ್ಯ ತೆರೆದಿಟ್ಟೆ   "ನೀನು"

- ಕೃಷ್ಣಮೊರ್ತಿ ಅಜ್ಜಹಳ್ಳಿ  ಬಿ ಎಂ ಎಸ್ ಸಿ ಇ ಬೆಂಗಳೊರು-೧೯