ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮನ-೦೨: ಒಂದು ಕೊಲೆ..

ಮೊನ್ನೆ ನನ್ನಿಂದ ಒಂದು ಅಪಚಾರ ನಡೆದು ಹೋಯಿತು.
ಜೀವನದಲ್ಲಿ ಮೊದಲ ಬಾರಿ ನಾನೊಂದು ಕೊಲೆ ಮಾಡಿದೆ.

ಮೊನ್ನೆ ತಲೇಲಿ ಏನೊ ತುಂಬ್ಕೊಂಡು, ಕಾರಿನಲ್ಲಿ ಮನೆಗೆ ಬರ್ತಾ ಇರಬೇಕಾದ್ರೆ, ಒಂದು ಅಳಿಲು ಓಡೊಡಿ ಬಂದು ನನ್ನ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿತು.
ಏನೋ ಓಡಿ ಬಂದುದು ನನಗೆ ಅರಿವಾಯಿತು,
ಆದರೆ ಅದು ಕಾರಿನಡಿ ಸಿಕ್ಕಿ ಸಾಯಬಹುದು ಅಂತ ಅನಿಸಿರಲಿಲ್ಲ.

ನಮನ-೦೧: ಪರಿಚಯ

ಹೆಸರು ಉಮೇಶ.
ಸಾಮಾನ್ಯವಾಗಿ, 'ಯು‌ಎನ್‌ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ.
ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ.
"ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾಗ ಕೊಟ್ಟ ಹಾಗೆ ಆಗುತ್ತೆ, ಅಷ್ಟೆ.

ಕನ್ನಡ ಕಾಸು ಮತ್ತು ಇ೦ಗ್ಲಿಷ್ ಕಾಸು

ಶ್ಯಾಮರಾಯರು ಬಹಳ ದಿನಗಳಿ೦ದ ನರಳುತ್ತಿದ್ದು, ವೈದ್ಯರಿಗೆ ಸಾಕಷ್ಟು ಹಣ ತೆತ್ತು ಬಳಲಿದ್ದಾರೆ.  ರೋಗ ಮಾತ್ರ ಗುಣವಾಗಿಲ್ಲ.  ವೈದ್ಯರು ಹೇಳುತ್ತಾರೆ: ರಾಯರೇ, ನನಗೆ ಕಾಸೇ ಸಿಕ್ತಾ ಇಲ್ಲ. ನೀವು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊ೦ಡು ಬನ್ನಿ.  ರ್‍ಆಯರ ಕೋಪ ನೆತ್ತಿಗೇರುತ್ತದೆ. "ಏನ್ರೀ ಡಾಕ್ಟ್ರೇ, ನಿಮಗೇನೂ ಮನುಷ್ಯತ್ವನೇ ಇಲ್ಲವೇ? ನಾನೂ ಇದುವರಗೆ ಸಾವಿರಾರು ರೂಪಾಯಿ ಸುರಿದಿದ್ದೇನೆ.  ಆದರೂ ಕಾಸೇ ಸಿಕ್ತಿಲ್ಲ ಅ೦ತೀರಲ್ಲರೀ?  ನೀವೇನು ಮನುಷ್ಯರೋ ಅಥವಾ ಧನಪಿಶಾಚಿನೋ?"  ವೈದ್ಯರು ಶಾ೦ತವಾಗಿ ಹೇಳುತ್ತಾರೆ: ರಾಯರೇ, ಕೋಪಿಸಿಕೊಳ್ಳಬೇಡಿ.  ನಾನು ಹೇಳಿದ್ದು ಕನ್ನಡ ಕಾಸಲ್ಲ ಇ೦ಗ್ಲಿಷ್ ಕಾಸು(cause). "ಓಹೋ, ಹಾಗಾದ್ರೆ ಸರಿ.  ಕ್ಷಮಿಸಿ"

ಸೂಕ್ಷ್ಮ ಶರೀರದ ರೂಪಕ

ನಮ್ಮದೇಹದಲ್ಲೊಂದು
ಎರಡು ತಲೆಯ ಹಾವಿದೆ,
ಎರಡು ಕಡೆಯು ಹೆಡೆಯಿದೆ,
ಹೆಡೆಗಳಲ್ಲಿ ವಿಷವಿದೆ.
ಎಲ್ಲಿದೆ? ಹೇಗಿದೆ?
ತಿಳಿಯಬೇಕಾಗಿದೆ.
ಇಂದ್ರೀಯಗಳ ಕೊರೆದು ಕೊರೆದು ಹುತ್ತ ಮಾಡಿಕೊಂಡಿದೆ,
ವಿಷಯಗಳನು ನುಂಗಿ ನುಂಗಿ ವಿಷವಬೆಳೆಸಿಕೊಂಡಿದೆ,
ಪ್ರೀತಿ ಕ್ಷಮಾ ಕರುಣೆಗಳನು ಮೂಟೆಕಟ್ಟಿ ಕುಳಿತಿದೆ,
ಎಷ್ಟುಸಲ ಸುಟ್ಟರೂ ಮತ್ತೆ ಹುಟ್ಟಿ ಬರುತಿದೆ.
ಏನಿದು? ಯಾಕಿದು?
ಅರಿಯಬೇಕಾಗಿದೆ.
ರೋಷವೆಂಬ ವೇಷ ತೊಟ್ಟು,
ದ್ವೇಷವೆಂಬ ವಿಷದಿಂದ,
ನಾಶಮಾಡೊ ಪಾಶವೀಯ
ನೋವು ಕೊಡುವ ಹಾವಿದು.
ಕಣ್ಣೆಲ್ಲ ಕಾಮವಾಗಿ,
ಕ್ರೋಧ ಕೋರೆಹಲ್ಲುಗಳ,
ಲೋಭವೆಂಬ ನಾಲಿಗೆಯಾ
ಬುಸುಗುಟ್ಟುವ ಹಾವಿದು.
ಮತ್ಸರದಾ ವಿಷವ ಹೊತ್ತು,
ಮದದಹೆಡೆಯ ಮೇಲೆತ್ತಿ,
ಮೋಹದಿಂದ ನರ್ತಿಸುವಾ
ಆರು ಗುಣದ ಹಾವಿದು.
ಕೊಲ್ಲುವ ಬಗೆ, ಗೆಲ್ಲುವ ಬಗೆ,
ಕಲಿಯಬೇಕಾಗಿದೆ.
ಹರಿಯ ಅರಿಯ ಉರಗವಿದನು ಅರಿಯದೇ ಬೆಳೆಸಿದೆವು,
ಹರಿ ಭಕ್ತಿಯ ಶಕ್ತಿಯಿಂದ ಅರಿವೈರಿಯ ವದಿಸಲೆಂದು,
ವಿಷಯಗಳನು ದೂರಸರಿಸಿ ವಿಷದಿಂದ ಮುಕ್ತರಾಗಿ,
ಇಂದ್ರೀಯಗಳ ಬಾಯ್ಮುಚ್ಚಿ ಉಸಿರುಕಟ್ಟಿ ಕೊಲ್ಲಬೇಕು,
ಉಂಡಮನೆಗೆ ಎರಡು ಬಗೆವ, ಎರಡು ತಲೆಯ ಈ ಹಾವನು.
ಅಹೋರಾತ್ರ.

ಗ್ರಾಮೀಣ ರಂಗಭೂಮಿ

ಗ್ರಾಮೀಣ ರಂಗಭೂಮಿ

ಹಾಗೆ ನೋಡಿದರೆ ಗ್ರ್ರಾಮೀಣ ರಂಗಭೂಮಿಯ ಮುಖ್ಯ ಹರಿವು ಜಾನಪದ ರಂಗಭೂಮಿಯೇ. ಈ ರಂಗಭೂಮಿ ಆಚರಣಾ ರಂಗಭೂಮಿಯಾಗಿ ಹುಟ್ಟಿ ಮುಂದೆ ಆಚರಣೆಯ ಕೊಂಡಿಗಳನ್ನು ಒಂದೊಂದಾಗಿ ಕಳಚಿಕೊಳ್ಳ್ಳುತ್ತ, ನಿಧಾನವಾಗಿ ಮನರಂಜನಾಪ್ರಧಾನವಾದದ್ದು ಮತ್ತು ನಂತರ ಸ್ವತಂತ್ರ ಅಸ್ಠಿತ್ವ ಪಡೆದದ್ದು ಈಗ ಇತಿಹಾಸ. ಮುಂದೆ ಕನ್ನಡದ ಸಂದರ್ಭದಲ್ಲಿ ನಾಟಕ ರಂಗಭೂಮಿಗೆ ತಾಂತ್ರಿಕವಾಗಿ ಮೂಲದ್ರವ್ಯ ಒದಗಿಸಿದ್ದು ಈ ಜನಪದ ರಂಗಭೂಮಿಯೇ. ಇಂಥ ಮಹತ್ವದ ಜಾನಪದ ರಂಗಭೂಮಿಯ ಆಳ,ಹರಿವು, ವಿಸ್ತಾರ ಅಗಾಧವಾದದ್ದು. ಇಳಿದಷ್ಟೂ ಆಳ ಮತ್ತೂ ಆಳ. ಆದುದರಿಂದ ಗ್ರಾಮೀಣ ರಂಗಭೂಮಿಯ ಇತ್ತೀಚಿನ ಒಂದು ಮುಖ್ಯ ಪ್ರಕಾರವಾದ ಹಳ್ಳಿಯ ನಾಟಕಗಳ ರಂಗಭೂಮಿ ಕುರಿತು ಕೆಲವು ವಿಚಾರಗಳನ್ನ ನಾನಿಲ್ಲಿ ಚರ್ಚಿಸಲು ಯತ್ನಿಸುತ್ತೇನೆ. ಹಬ್ಬ ಹರಿದಿನಗಳಲ್ಲಿ ಉತ್ಸವ,ಜಾತ್ರೆ,ಕಾರ್ತಿಕಗಳಲ್ಲಿ ಕಾಣುತ್ತಿದ್ದ ಆಚರಣಾ ಕ್ರಿಯೆ ಕಲಾತ್ಮಕ ರೂಪ ಪಡೆದುಕೊಂಡು ಪ್ರದರ್ಶನ ಕಲೆಯಾದರೂ ಅದು ಆಯಾ ಸಂದರ್ಭದ ಜೊತೆಗಿನ ತನ್ನ ಸಂಬಂಧವನ್ನು ಹಾಗೆಯೇ ಉಳಿಸಿಕೊಂಡು ಬಂದಿತು. ಇಂದಿಗೂ ಯಕ್ಷಗಾನ, ಬಯಲಾಟ, ನಾಟಕಗಳು ಹಳ್ಳಿಗಲ್ಲಿ ಪ್ರದರ್ಶಿತವಾಗುವದು ಕಾರ್ತಿಕದಲ್ಲಿಯೇ. ಆದುದರಿಂದಲೇ ಒಂದು ರೀತಿಯಲ್ಲಿ ಇವೆಲ್ಲ ಆರಾಧನಾ ರಂಗಭೂಮಿಯ ಮುಂದುವರಿಕೆಯೇನೋ ಎನಿಸಿಬಿಡುತ್ತದೆ. ಕನ್ನಡದ ನಾಟಕ ಜಗತ್ತನ್ನು ಜೀವಂತವಾಗಿಟ್ಟವು ಹಳ್ಳಿ ಹಳ್ಳಿಗಳಲ್ಲಿ ಪ್ರತಿ ವರ್ಷ ನಡೆಯುವ ನಾಟಕಗಳೇ ಎಂಬುದು ನನ್ನ ನಂಬಿಕೆ. ಕರಾವಳಿಯಿಂದ, ಮಲೆನಾಡನ್ನೊಳಗೊಂಡು ಬಯಲು ಸೀಮೆಯ ಮೂಲೆಯ ಹಳ್ಳಿ ಹಳ್ಳಿಗಳಲ್ಲಿ ಆನೂಚಾಚವಾಗಿ ಪ್ರತಿ ವರ್ಷ ಹರಕೆಯಂತೆ ನಡೆಯುವ ಈ ನಾಟಕಗಳು ಗ್ರಾಮೀಣ ರಂಗಫಸಲಿನ ಹಸಿರು ಕುಡಿಗಳು. ಹಳ್ಳಿಯ ಕಲಾಸಕ್ತರೆಲ್ಲ ತಿಂಗಳುಗಟ್ಟಲೆ ಒಂದೆಡೆ ಸೇರಿ, ಕಷ್ಟ ಸುಖ ಹಂಚಿಕೊಳ್ಳುತ್ತ, ತಾವೇ ನಾಟಕ ಕಲಿಯುತ್ತ, ಹಲವು ಬಾರಿ ಪೇಟೀ ಮಾಸ್ತರರನ್ನು ಕರೆಸಿಕೊಂಡು, ಅಭಿನಯ, ಹಾಡುಗಳ ಪಾಠ ಹೇಳಿಸಿಕೊಳ್ಳ್ಳುತ್ತ, ರಾತ್ರಿಗಳಲ್ಲೆಲ್ಲ ಹರ್ಮೋನಿಯಂ ಸ್ವರದೊದನೆ ಹಾಡುತ್ತ, ಕುಣಿಯುತ್ತ, ತಾರಕ ಸ್ವರದಲ್ಲಿ ಡೈಲಾಗ್ ಹೇಳುತ್ತ ನಾಟಕದ ತಾಲೀಮು ನಡೆಸುತ್ತ, ಹಗಲೆಲ್ಲ ತಾಲೀಮಿನ ಸುದ್ದಿ ಹೇಳುತ್ತ ಕಳೆಯುವ ಸಂಭ್ರಮದ ದಿನಗಳು ಒಂದು ಹಳ್ಳಿಯನ್ನು ಸಾಂಸ್ಕೃತಿಕವಾಗಿ ಮತ್ತು ತನ್ಮೂಲಕ ಸಾಮಾಜಿಕವಾಗಿ ಬೆಳೆಸುವಲ್ಲಿ ವಹಿಸುವ ಪಾತ್ರ ಹಿರಿದಾದುದು. ಸುಮಾರಿಗೆ ಒಂದೇ ಕಾಲದಲ್ಲಿ ಕನ್ನಡ ನಾಡಿನ ಹಳ್ಳಿ ಹಳ್ಳಿಗಳಲ್ಲಿ ನಿರಂತರವಾಗಿ ನಡೆಯುವ ಈ ಪ್ರಕ್ರಿಯೆಯ ಅಗಾಧತೆಯನ್ನು ಊಹಿಸಿಕೊಂಡರೇ ಖುಶಿಯಾಗುತ್ತದೆ. ಈ ಹಳ್ಳಿಯ ನಾಟಕಗಳು ನೇರವಾಗಿ ಕಂಪನಿ ನಾಟಕಗಳಿಂದ ಪ್ರಭಾವಿತವಾದವು. ನೀತಿಯ ಪಾಠ ಹೇಳುವ, ಕಪ್ಪು ಬಿಳುಪು ಪಾತ್ರಗಳನ್ನೊಳಗೊಂಡ ಕಥಾನಕಗಳಿವು. ಮಾರ್ಕೆಟ್ ಗಳಲ್ಲಿ ದೊರಕುವ ಅಚ್ಚಾದ ನಾಟಕಗಳೇ ಇವುಗಳ ಸಾಹಿತ್ಯ. ಇವುಗಳಲ್ಲಿ ಹೆಚ್ಚಿನವು ಕಂಪನಿಗಳಲ್ಲಿ ಪ್ರದರ್ಶನ ಕಂಡು ಪ್ರಸಿಧ್ಧಿ ಪಡೆದಂಥವು. ವರ್ಷಕ್ಕೊಮ್ಮೆ ತಾವೇ ಬರೆದು ನಾಟಕವಾಡುವ ಉಮೇದುವಾರರೂ ಕೆಲವು ಹಳ್ಳಿಗಳಲ್ಲಿ ಇದ್ದಾರೆ. ಇನ್ನು ಕೆಲವು ಬಾರಿ ಎರಡು ಮೂರು ಪುಸ್ತಕಗಳು ಸೇರಿ ಒಂದು ರಂಗಪ್ರದರ್ಶನವಾಗುವದುಂಟು. ಬಹುತೇಕ ಕಂಪನಿ ನಾಟಕಗಳಲ್ಲಿ ಹಾಸ್ಯದ ಪ್ಲಾಟ್ ಬೇರೆಯದೇ ಆಗಿದ್ದು ನಾಟಕದ ಕೊನೆಯಲ್ಲಿ ತನ್ನ ಕೊಂಡಿ ಜೋಡಿಸಿಕೊಳ್ಳುತ್ತದೆ. ಇಂಥ ಉದಾರತೆಯೇ ನಮ್ಮ ಹಳ್ಳ್ಳಿಗರಿಗೆ ನಾಟಕವನ್ನು ಎಡಿಟ್ ಮಾಡುವ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಆದುದರಿಂದ ಒಂದು ನಾಟಕದ ಮುಖ್ಯ ಭಾಗಕ್ಕೆ ಇನ್ನೊಂದು ನಾಟಕದ ಹಾಸ್ಯದ ಭಾಗ ಸೇರಿಕೊಂಡು ಹೊಸ ನಾಟಕವೇ ಆಗಿಬಿಡುತ್ತದೆ. ಇನ್ನು ಹಾಡುಗಳನ್ನು ಇಷ್ಟಪಟ್ಟಂತೆ ಬಳಸಬಲ್ಲ ತಾಖತ್ತಂತೂ ಇದ್ದೇಇದೆ. ಹೀಗಾಗಿ ನಾಟಕ ನೂತನವಾಗುತ್ತಲೇ ಹೋಗುತ್ತದೆ. ನಾನು ಮೊದಲೇ ಹೇಳಿದಂತೆ ನಮ್ಮ ಜನಪದ ರಂಗಭೂಮಿ ಕಂಪನಿ ನಾಟಕಗಳ ಮೇಲೆ ಬೀರಿದ ಪ್ರಭಾವ ಅಗಾಧವಾದುದು. ಅಂತೆಯೇ ಕೆಲವು ಚಿಕ್ಕ ಪುಟ್ಟ ಆಚರಣೆಗಳು ಕೂಡ ಹಳ್ಳಿ ನಾಟಕಗಳಲ್ಲಿ ಚಾಲ್ತಿಯಲ್ಲಿವೆ. ನಾಟಕದ ಮೊದಲು ಚೌಕಿಯಲ್ಲಿ ಪೂಜೆ, ನಂತರದ ನಾಂದಿ ಪದ್ಯ, ಇವೆಲ್ಲ ಹಾಗೆಯೇ ಉಳಿದುಕೊಂಡಿವೆ. ಆದರೆ ಇನ್ನುಳಿದಂತೆ ಹಳ್ಳಿಯ ನಾಟಕಗಳು ಪ್ರಾದೇಶಿಕತೆಯನ್ನು ಉಳಿಸಿಕೊಂಡಂತೆ ತೋರುತ್ತಿಲ್ಲ. ಸಿಧ್ದ ನಾಟಕಗಳ ಪುಸ್ತಕಗಳನ್ನು ಅವರು ಉರು ಹೊಡೆದು ಆಡುತ್ತ ಬಂದಿದ್ದರಿಂದ ಅಂಥ ಸಾಧ್ಯತೆಗಳು ಇರುವುದಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಇಂಥ ಸಾಧ್ಯತೆಗಳ ಬಾಗಿಲು ತೆರೆದಿತ್ತು. ವಿವಿಧ ಮಟ್ಟಗಳಲ್ಲಿ ನಡೆಯುತ್ತಿದ್ದ ಯುವಜನ ಮೇಳಗಳಲ್ಲಿ ಯುವಕರು ಮತ್ತು ಯುವತಿಯರಿಗಾಗಿಯೇ ಪ್ರತ್ಯೇಕವಾಗಿ ನಾಟಕಗಳ ಸ್ಪರ್ಧೆಯಿರುತ್ತಿತ್ತು. ಪ್ರತಿ ತಾಲೂಕಿನ ಹತ್ತಾರು ಹಳ್ಳಿಗಳ ಯುವಕ ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ರಾತ್ರಿಯಿಡೀ ನಡೆಯುತ್ತಿದ್ದ ಈ ಸ್ಪರ್ಧೆಯ ತಯಾರಿಯೂ ತಿಂಗಳುಗಟ್ಟಲೇ ನಡೆಯುತ್ತಿತ್ತು. ನಾಟಕಗಳಿಗೆ ಕಾಲಮಿತಿ ಪಾತ್ರಮಿತಿಗಳಂತಹ ಕೆಲವು ತೊಡಕುಗಳಿದ್ದರೂ, ಒಂದಿಷ್ಟು ಹೊಸ ವಿಚಾರ ಹೊತ್ತ ಹುಡುಗರೆಲ್ಲಾ ಸೇರಿ ಸ್ಪರ್ಧೆಯನ್ನು ಲಕ್ಷ್ಯದಟ್ಟುಕೊಂಡು ನಾಟಕ ಕಟ್ಟುತ್ತಿದ್ದರು. ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. ನಿರಂತರವಾಗಿ ಹಲವು ವರ್ಷಗಳ ಕಾಲ ಇಂಥ ನಾಟಕಗಳನ್ನು ನೋಡಿದ ಅನುಭವದಲ್ಲಿ ಹೇಳುವದಾದರೆ, ಇಂಥ ನಾಟಕಗಳಲ್ಲಿ ಮೇಲ್ಸ್ತರದಲ್ಲಿಯಾದರೂ ಪ್ರಾದೇಶಿಕ ಝಲಕುಗಳಿರುತ್ತಿದ್ದವು. ಜಾನಪದ ಹಾಡುಗಳು, ನೃತ್ಯಗಳು ಅಲ್ಲಲ್ಲಿ ಕಾಣಸಿಗುತ್ತಿದ್ದವು. ಹಳ್ಳಿಯ ವಾದ್ಯಗಳ ಯಥೇಚ್ಛ ಬಳಕೆಯಾಗುತ್ತಿತ್ತು. ಒಟ್ಟಾರೆ ನಾಟಕಗಳಲ್ಲಿ ಪ್ರಾದೇಶಿಕತೆ ಕಾಣತೊಡಗಿತ್ತು. ಆದರೆ ಇತ್ತೀಚೆಗೆ ಹಲವು ವರ್ಷಗಳಿಂದ ಯುವಜನ ಮೇಳಗಳಲ್ಲಿ ನಾಟಕ ಸ್ಪರ್ಧೆಯೇ ನಿಂತುಹೋಗಿ ಹಳ್ಳಿಗಳಲ್ಲಿ ಕಾಣಬರುತ್ತಿದ್ದ `ಇನ್ನೊಂದು ರಂಗಭೂಮಿಯ ಚಟುವಟಿಕೆಗಳಿಗೆ ತೆರೆ ಬಿದ್ದಿದೆ. ಇದು ಒಟ್ಟಾರೆ ರಂಗಭೂಮಿಯ ದೃಷ್ಟಿಯಿಂದಲೂ ಗಂಭೀರ ಗಾಯವೇ ಸರಿ. ಸದ್ಯ ಹಳ್ಳಿಗಳಲ್ಲಿ ನಡೆಯುತ್ತಿರುವ ನಾಟಕಗಳ ಶೈಲಿಯನ್ನು ಗಮನಿಸಿದರೆ ಅವುಗಳಲ್ಲಿ ಪ್ರಾದೇಶಿಕತೆಯನ್ನರಸುವದು ಕಷ್ಟವೇ. ಆದರೆ ಅದು ಸಾಧ್ಯವಾಗಬೇಕು. ಹಾಗಾದಾಗ ಅಪಾಯದ ಅಂಚಿನಲ್ಲಿರುವ ಹಲವು ಜಾನಪದ ಕಲಾಪ್ರಕಾರಗಳಿಗೊಂದು ವಿಶಿಷ್ಟ ಸ್ಥಾನ ಸಿಕ್ಕಂತಾದೀತು. ನಮ್ಮ ಹಳ್ಳಿಯ ನಾಟಕಗಳ ರಂಗಭೂಮಿ ಹಲವಾರು ವರ್ಷಗಳಿಂದ ಕಂಪನಿ ನಾಟಕಗಳ ಸೀನರಿಯ ತಾಂತ್ರಿಕತೆಯನ್ನೇ ಮುಂದುವರೆಸಿಕೊಂಡು ಬಂದಿದೆ. ನಾಟಕಗಳ ಆಯ್ಕೆ ಮತ್ತು ಅದು ಬೇಡುವ ತಂತ್ರಗಾರಿಕೆ ಮನೆ ಸೀನ್, ರಸ್ತಾಸೀನ್ ಗಳ ಆಚೆ ಹಳ್ಳಿಗರನ್ನು ಯೋಚಿಸದಂತೆ ಮಾಡಿದೆ. ಆದರೆ ಅವುಗಳಿಗೆ ತಗಲುವ ವೆಚ್ಚ ಅಪಾರವಾದದ್ದು. ಸೆಟ್ ನವರನ್ನು ತಿಂಗಳುಗಟ್ಟಲೇ ಮೊದಲು ರಿಸರ್ವ್ ಮಾಡಿ, ಅಡ್ವಾನ್ಸ್ ಕೊಟ್ಟು, ದುಬಾರಿ ಬಾಡಿಗೆ ತೆತ್ತು ಆಡುವ ಹಲವಾರು ನಾಟಕಗಳು ನಿಟ್ಟುಸಿರಿನಲ್ಲಿ ಕೊನೆಗೊಳ್ಳುತ್ತವೆ. ಹಲವು ಬಾರಿ ಅವುಗಳನ್ನು ಭರಿಸಲಾರದೇ ಅಲವತ್ತುಕೊಂಡವರಿದ್ದಾರೆ. ಈ ವೆಚ್ಚವೇ ಮುಳುವಾಗಿ ಹಲವು ಹಳ್ಳಿಗಳಲ್ಲಿ ನಾಟಕಗಳೇ ನಿಂತದ್ದೂ ಉಂಟು. ಹಳ್ಳಿಯ ರಂಗಾಸಕ್ತರು ಇಂಥ ಜಂಜಡಗಳಿಂದ ಹೊರಬರಬೇಕಾಗಿದೆ. ತುಂಬ ಸುಲಭವಾಗಿ ಹಳ್ಳಿಗಳಲ್ಲಿಯೇ ಸಿಧ್ದಪಡಿಸಿಕೊಳ್ಳಬಹುದಾದ ರಂಗಸಜ್ಜಿಕೆಗಳು, ಉಡುಪುಗಳು, ರಂಗೋಪಕರಣಗಳನ್ನ ಉಪಯೋಗಿಸಿಕೊಂಡು ಒಳ್ಳೆಯ ನಾಟಕವನ್ನಾಡಬಹುದು. ಖರ್ಚನ್ನೂ ತಗ್ಗಿಸಬಹುದು. ಸೆಟ್ಟಿನ ಖರ್ಚುಗಳನ್ನು ಭರಿಸಲಾರದೇ ನಾಟಕಗಳನ್ನು ಕಳೆದುಕೊಂಡಿರುವ ಹಳ್ಳಿಗಳು ಇದರಿಂದ ನಾಟಕಗಳನ್ನು ಮತ್ತೆ ಕಾಣುವಂತಾಗಬಹುದು. ಇದಕ್ಕೆ ಸ್ವಲ್ಪ ಸಮಯ ತಗಲಬಹುದು ಮತ್ತು ಅಂತಹ ಮನಸ್ಸು ಬೇಕಾಗಬಹುದು. ಇಂಥ ಬದಲಾವಣೆ ಸುರುವಾಗಬೇಕಾದದ್ದು ಮೊದಲು ಪಠ್ಯದ ಮೂಲಕ. ಈಗ ರಂಗಪ್ರಯೋಗಗಳಿಗಾಗಿ ಆಯ್ಕೆಯಾಗುತ್ತಿರುವ ಪಠ್ಯ ಮನರಂಜನಾಪ್ರಧಾನವದದ್ದು. ಹೆಚ್ಚು ವೆಚ್ಚವನ್ನು ಬೇಡುವಂಥದ್ದು. ಸರಳವಾಗಿ ನಾಟಕವನ್ನಾಡಬೇಕೆಂದಾಗ ಪಠ್ಯವೂ ಅಂತೆಯೇ ಇರಬೇಕಾಗುತ್ತದೆ. ಇಂಧ ಬದಲಾವಣೆ ಸುಲಭವಾದದ್ದಲ್ಲ. ಥಟ್ಟನೆ ಆಗುವಂತಹದ್ದೂ ಅಲ್ಲ. ಇದು ನಿಧಾನವಾಗಿ ಆಗಬೇಕಾದ ಬದಲಾವಣೆ. ಬರಿಯ ಮನರಂಜನೆಗೆ ಒಗ್ಗಿಹೋಗಿರುವ ಹಳ್ಳಿಯ ಸಹೃದಯ ಪ್ರೇಕ್ಷಕರನ್ನು ಕೂಡ ಇಂಥ ಬದಲಾವಣೆಗೆ ಒಳಪಡಿಸಬೇಕಾಗುತ್ತದೆ. ಇದು ಅಭಿರುಚಿಯ ಬದಲಾವಣೆ ಕೂಡ. ವಿಚಾರಗಳ ಮೂಟೆ ಹೊತ್ತ ನಾಟಕಗಳನ್ನಯ್ದು ಮನರಂಜನೆಯನ್ನು ಗೌಣವಗಿಸಿ ನಾಟಕವಾಡಬೇಕೆಂದು ನಾನು ಹೇಳುತ್ತಿಲ್ಲ. ಈ ಎರಡೂ ಅತಿಗಳ ನಡುವೆ ಸೇತುವೆ ಎನಿಸಿಕೊಳ್ಳಬಹುದಾದ ಹಲವು ನಾಟಕಗಳಿವೆ. ಕಂಪನಿ ನಾಟಕಗಳಲ್ಲೂ ತುಸು ಗಂಭೀರವಾದ ಸದಾಶಯದ ಸರಳವಾಗಿ ಆಡಬಲ್ಲ ನಾಟಕಗಳಿವೆ, ವಿಡಂಬನೆಗಳಿವೆ. ರಾಜಕೀಯ ನಾಟಕಗಳಿವೆ. ಪ್ರದರ್ಶನದ ಅವಧಿಯನ್ನು ಗಣನೆಯಲ್ಲಿಟ್ಟುಕೊಂಡು ಇಂಥ ನಾಟಕಗಳನ್ನು ಹೆಕ್ಕಿ ಆಡುವಂತಾಗಬೇಕು. ನಮ್ಮ ಸುತ್ತಲ ರಂಗಭೂಮಿ ಹಲವಾರು ಬೇರೆ ಬೇರೆ ಸಾಧ್ಯತೆಗಳನ್ನು ಅವಿಷ್ಕರಿಸುತ್ತ, ಬದಲಾವಣೆಗಳಿಗೆ ತನ್ನನ್ನು ಒಡ್ಡೀಕೊಳ್ಳುತ್ತಲೇ ಬಂದಿದೆ. ಕೆಲವು ಹವ್ಯಾಸಿ ನಿರ್ದೇಶಕರಂತೂ ನೇರವಾಗಿ ಜಾನಪದ ಶೈಲಿಯಲ್ಲಿ ನಾಟಕಗಳನ್ನಾಡಿದ್ದಾರೆ. ಆಡುತ್ತಿದ್ದಾರೆ. ಇದು ಹಳ್ಳಿಯ ಹವ್ಯಾಸಿಗಳಿಗೂ ಸಾಧ್ಯವಾಗಬೇಕಿದೆ. ಇದು ಬದಲಾವಣೆಗೆ ಸಕಾಲ. ಇಂದು ಹಳ್ಳಿಗರು ಜಾನಪದ ರಂಗಭೂಮಿಯತ್ತ ನೋಡಬೇಕಿದೆ. ಯಕ್ಷಗಾನ, ಸಣ್ಣಾಟ, ದೊಡ್ಡಾಟದಂತಹ ಕಲಾಪ್ರಕಾರಗಳು ನಮ್ಮೆದುರಿಗಿವೆ. ಅವುಗಳ ರಂಗಶ್ರೀಮಂತಿಕೆ ನಮಗೆ ಮಾದರಿಯಾಗಬೇಕು. ಪಠ್ಯ, ಹಾಡು, ಕುಣಿತ, ಅಭಿನಯಗಳನ್ನೇ ಮೂಲದ್ರವ್ಯವಾಗುಳ್ಳ ಸರಳ ರಂಗಪ್ರಯೋಗಗಳ ಕುರಿತು ಯೋಚಿಸಬೇಕಾಗಿದೆ. ದಿನ ದಿನಕ್ಕೆ ರೈತರ , ಕೂಲಿಕಾರರ ಸಂಕಷ್ಟಗಳು ಹೆಚ್ಚುತ್ತಿರುವ ಇಂದಿನ ದಿನಮಾನದಲ್ಲಿ ವೆಚ್ಚವನ್ನು ತಗ್ಗಿಸುವದರ ಜೊತೆಗೆ ಗ್ರಾಮೀಣ ರಂಗಭೂಮಿಯನ್ನೂ ಉಳಿಸಿಕೊಳ್ಳಬೇಕಾಗಿದೆ. ಒಂದು ನೀಲಿ ಪರದೆ ಸರಳವಾದ ದೀಪಗಳು ಒಂದು ರಂಗಪ್ರಯೋಗಕ್ಕೆ ಸಾಕು ಎಂಬುದು ಮನವರಿಕೆಯಗಬೇಕು. ಈ ಮಧ್ಯೆ ಕಳೆದು ಹೋಗುವ ಝಗಮಗ ಸೀನರಿಗಳು, ಪರದೆಗಳು, ಪೋಷಾಕುಗಳನ್ನು ನಟರ ಕಸುವು ತುಂಬಬೇಕು. ಇಂಥ ಪ್ರಯತ್ನಗಳು ಅಲ್ಲಲ್ಲಾದರೂ ಸುರುವಾಗಬೇಕು. ಅವುಗಳನ್ನು ನೆಚ್ಚಿಕೊಂಡಾಗ ಮಾತ್ರ ಒಂದು ಪರ್ಯಾಯ ಹಳ್ಳಿ ರಂಗಭೂಮಿಯ ಕುರಿತು ಯೋಚಿಸಬಹುದು - ಕಿರಣ ಭಟ್

ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?

ಮೊನ್ನೆ ಪತ್ರಿಕೆಯಲ್ಲಿ ಹೆಲ್ಮೆಟ್‌ ಕಡ್ಡಾಯದ ಬಗ್ಗೆ ವರದಿಗಳನ್ನ ಓದುತ್ತಿದ್ದೆ. ಈ ಹೆಲ್ಮೆಟ್ ಕಡ್ಡಾಯ ಎನ್ನುವುದು ಒಂದು ರೀತಿಯ ಕಣ್ಣಾಮುಚ್ಚಾಲೆ. ಪ್ರತೀ ವರ್ಷವೂ ತಪ್ಪದೆ ನಡೆಯುವ, ಪ್ರತೀ ಹೊಸ ಸರ್ಕಾರ ಬಂದಾಗಲೂ ಜೀವ ಪಡೆಯುವ ಹೆಲ್ಮೆಟ್ ಆಟ ಸ್ವಲ ದಿನ ಪತ್ರಿಕೆಗಳಿಗೆ ಆಹಾರವಾಗಿ, ಹರಟುವ ಬಾಯಿಗಳಿಗೆ ಸ್ನ್ಯಾಕ್‌ ಆಗಿ ನಿಧಾನವಾಗಿ ಮೊದಲ ಪುಟದಿಂದ ಮೂರನೆ ಪುಟಕ್ಕೆ, ನಂತರ ಸಣ್ಣ ಸುದ್ದಿಯಾಗಿ ಕಾಣಿಸಿಕೊಂಡು ಕ್ರಮೇಣ ಕಣ್ಮರೆಯಾಗುತ್ತದೆ. ಹೆಲ್ಮೆಟ್ ಕಡ್ಡಾಯ ಬೇಕೇ ಬೇಡವೇ ಎಂಬ ತೀರ್ಮಾನ ಒತ್ತಟ್ಟಿಗಿರಲಿ. ಸಂಬಂಧಪಟ್ಟವರು ಅದರ ಬಗ್ಗೆ ಹೊಡೆದಾಡಲಿ. ನಾನೀಗ ಚರ್ಚಿಸಹೊರಟದ್ದು "ನಮ್ಮ ಜೀವ ರಕ್ಷಣೆ ನಮ್ಮ ಜವಾಬ್ಧಾರಿ, ಅದರ ಉಸಾಬರಿ ಸರ್ಕಾರಕ್ಕೆ ಬೇಡ" ಎನ್ನುವ ಹೆಲ್ಮೆಟ್ ವಿರೋಧಿಗಳ ಒಂದು ವಾದದ ಬಗ್ಗೆ.

ಅಕ್ಷರ ದಾಸೋಹ ಮತ್ತು ಬಿಸಿಯೂಟ ಕವನಗಳು

೧)
 ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು
 ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು?
 ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ
 ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು