ಸಂಗಾತಿ . . .

ಸಂಗಾತಿ . . .

ಹೃದಯಕ್ಕೆ ಹತ್ತಾರು ಪ್ರಶ್ನೆಗಳ ಹಾಕಿ ಒಂಟಿಯಾಗಿ ಅಳುವ
ತನ್ನನ್ನೇ ತಡಕಾಡಿಕೊಳ್ಳುವ ನಿನ್ನ ಮನಸು -
ನನ್ನ ಒಂಟಿತನ - ಯಾಂತ್ರಿಕ ಜೀವನಕ್ಕೆ
ಹೊಸ ಚಿಲುಮೆಯಾಗಿ ಬಂದವನು ನೀನು !

ಮರುಭೂಮಿಯಲ್ಲಿ ಜಲ ಸಿಕ್ಕಂತೆನಿಸಿ
ಜೀವನ ಉತ್ಸಾಹವನ್ನು ಮತ್ತೆ ಪಡೆಯುತ್ತಿರುವೆ ನಾನು !
ತನಗಾಗಿ ಬದುಕಿ ಇತರರನ್ನೂ ಬದುಕಿಸುವ
ನಿನ್ನ ಜೀವನ ಮೌಲ್ಯ ,ಪ್ರತಿಪಾದನೆ . . .
ತಾನು ನಂಬುವ ಧ್ಯೇಯಗಳಿಗೆ
ಪ್ರಾಮಾಣಿಕನಾಗಿರುವ ನಿಲುವು . . .
ನಂಟು - ಆದರ, ಪ್ರೀತಿ - ವಿಶ್ವಾಸಕ್ಕೆ
ಅರ್ಥ ಬಂದದ್ದು ನಿನ್ನನ್ನು ಕಂಡಂದಿನಿಂದ . . .

ಅಪ್ಪನಿಂದ ಸಿಗಬೇಕಾಗಿದ್ದ ರಕ್ಷಕ ಭಾವ
ಅಮ್ಮನಿಂದ ಬೇಕಾಗಿದ್ದ ಅಂತಃಕರಣ ವಾತ್ಸಲ್ಯ
ಗೆಳೆಯನಲ್ಲಿ ಸಾಧ್ಯವಾಗುವ ಸಖ್ಯ -
ಈ ಮೂರೂ ಮೇಳವಿಸಿರುವ ಸಂಗಾತಿ - ನೀನು !

ಬದುಕಿನ ಲಯಗಳಲ್ಲಿ ಆತ್ಮೀಯತೆಯ ತಂತು ಮೀಟುತ್ತಲೇ ಇರುವ ನಿನ್ನ ಮೌನ ಪ್ರೀತಿ !

ಈ ಬಂಧನದಲ್ಲಿ ಸ್ವತಂತ್ರ ಸ್ಥಿತಿಯಿದೆ . . .
ವಾಸ್ತವತೆಯ ಅರಿವು . . . ಕಲ್ಪನೆಯ ಗರಿಗೆ
ಮತ್ತಷ್ಟು ಪುಕ್ಕ ನೀಡುತ್ತದೆ . . .

ಹೀಗೇ . . .
ಒಂದೊಂದೇ
ಹೆಜ್ಜೆ ಹತ್ತಿರವಾಗುವ ಹುಡುಗಾ . . .

Rating
No votes yet