ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಕಿಲ್ಲವಂತೆ !!!

ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಕಿಲ್ಲವಂತೆ !!!

ನಮ್ಮ ಬಹಳ ಹತ್ತಿರವಾಗಿರುವ ಕಾವ್ಯ ಸಂಪ್ರದಾಯವೆಂದರೆ ಗಾದೆಗಳು. ಇಂದಿಗೂ ಗಾದೆ ಹೇಳ್ತಾ ಮಾತಡೋದು ನಮ್ಮಲ್ಲಿ ಹಲವರಲ್ಲಿರುವ ಹವ್ಯಾಸ. ಈ ಮೇಲಿನ ತಲೆಬರಹವೂ ಕೂಡ ಒಂದು ಗಾದೆಯೇ!!!  ಗಾದೆ ಮೇಲೆ ಗಾದೆ. :)

೧) ಅಂಬಲಿ ಕುಡಿಯವ್ನಗೆ ಮೀಸೆ ಹಿಡಿಯೋನೊಬ್ಬ
೨) ಮುಂಡೆ ಮಕ್ಕಳು ಮೂಗದಾರ ಇಲ್ದೇ ಇರೋ ಹೋರಿಯಂಗೆ
೩) ಎತ್ತು ಈಯಿತು ಅಂದ್ರೆ ಕೋಣ ಕೊಟ್ಟಿಗೆಗೆ ಕಟ್ಟು
೪) ಹಾಡ್ತಾ ಹಾಡ್ತಾ ರಾಗ ನರಳ್ತ ನರಳ್ತಾ ರೋಗ
೫) ಪಾಪಿ ಸಮುದ್ರಕ್ಕೋದರೂ ಮೊಣ್ಕಾಲುದ್ದ ನೀರು
೬) ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ(ಎತ್ಕೊಂಡಗಾಕಿಲ್ಲ)
೭) ಈಚಲು ಮರದ ಕೆಳ್ಗೆ ಕೂತು ನೀರು ಕುಡುದ್ರು ಮಂದಿ ಕಣ್ಣಿಗೆ ಅದು ಹೆಂಡಾನೆ

Rating
No votes yet