ಮುಂಗಾರು ಮಳೆ
ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ತುಂಬಾ ಹಿಡಿಸಿದ ಚಿತ್ರ ಮುಂಗಾರು ಮಳೆ. ಒಂದು ಸಣ್ಣ ಪ್ರೀತಿಯ ಎಳೆಯನ್ನು ಹಿಡಿದು ಎಂಥ ಸೊಗಸಾದ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದಾರೆ ನಮ್ಮ ಯೋಗರಾಜಭಟ್ಟರು.
- Read more about ಮುಂಗಾರು ಮಳೆ
- 2 comments
- Log in or register to post comments
ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ತುಂಬಾ ಹಿಡಿಸಿದ ಚಿತ್ರ ಮುಂಗಾರು ಮಳೆ. ಒಂದು ಸಣ್ಣ ಪ್ರೀತಿಯ ಎಳೆಯನ್ನು ಹಿಡಿದು ಎಂಥ ಸೊಗಸಾದ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದಾರೆ ನಮ್ಮ ಯೋಗರಾಜಭಟ್ಟರು.
ಆತ್ಮೀಯ ಸಂಪದಿಗರೇ,
ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲೇ, ನಮ್ಮದೇ ನೆಲದ ಕಂಪನಿಯೊಂದು, ರಜೆ ಘೋಷಿಸಿಲ್ಲವಂತೆ. ಪೂರ್ತಿ ಸುದ್ದಿ ಓದಿ ನೋಡಿ: ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು! ಅದಕ್ಕೆ ಬದಲಾಗಿ ಓಣಂ ಹಬ್ಬಕ್ಕೆ ರಜೆಯಂತೆ.
ಇತ್ತೀಚಿಗೆ "ದಟ್ಸ್‌ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್‌ಕನ್ನಡ"ದಲ್ಲಿ "ತೆರೆದ್ ಬಾಗಿಲು" ಅನ್ನುವ ಹೆಸರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಒಂದು ಅಂಕಣ "ಓದುವ ಸುಖ, ಬರೆಯುವ ಸುಖ ಮತ್ತು ಆತ್ಮೀಯರೊಂದಿಗಿನ ಹರಟೆಯ ಸುಖದ" ಬಗ್ಗೆ ಇದೆ. ಅದರಲ್ಲಿ ಬರೆದಿರುವ ವಿಚಾರ ನನಗೆ ಇವತ್ತಿಗೆ ಎಷ್ಟು ಪ್ರಸ್ತುತ ಅನ್ನಿಸಿತು ಅಂದರೆ, ನಿಮ್ಮೊಂದಿಗೂ ಹಂಚಿಕೊಳ್ಳುವಷ್ಟು!
ನಾನು ಅಸಾಧಾರಣ ಪ್ರತಿಭಾವಂತನೇನಲ್ಲ. ಆದರೆ ಸಮಸ್ಯೆಗಳ ಜತೆ ಇತರರಿಗಿಂತ ಹೆಚ್ಚು ಕಾಲ ಕಳೆಯುತ್ತೇನೆ ಅಷ್ಟೇ!
ನಾವೇನು ಮಾಡುತ್ತಿದ್ದೇವೆ ಎಂದು ನಮಗೆ ಸಂಪೂರ್ಣವಾಗಿ ತಿಳಿದಿದ್ದಲ್ಲಿ ಅದನ್ನು ಸಂಶೋಧನೆ ಎನ್ನುವುದಿಲ್ಲ!
ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು
ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್ಲಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಟೊಯೊಟಾ ಕಂಪೆನಿಯು ಇಂತಹ ಕಾರು ತಯಾರಿಸಿದೆ. ಈ ಕಾರಿನ ಸ್ಟಿಯರಿಂಗ್ ವೀಲಿನಲ್ಲಿ ಬೆವರಿನಲ್ಲಿ ಬೆರೆತಿರುವ ಮದ್ಯದ ವಾಸನೆ ಪತ್ತೆ ಹಚ್ಚುವ ಸಂವೇದಕಗಳಿವೆ. ಕುಡಿದ ಚಾಲಕ ಕಾರು ಚಲಾಯಿಸಿದರೆ, ಕಾರಿನ ಸಂವೇದಕಗಳು ಕಾರಿನ ಇಂಜಿನನ್ನು ಸ್ಥಗಿತಗೊಳಿಸಲು ಸೂಚನೆ ನೀಡುವ ಕಾರಣ, ಕಾರು ಚಾಲೂ ಆಗುವುದೇ ಇಲ್ಲ.
ಅಷ್ಟು ಮಾತ್ರವಲ್ಲದೆ ಕುಡಿಯದೆ ಎರ್‍ರಾಬಿರ್‍ರಿ ಕಾರು ಚಲಾಯಿಸಿದರೂ ಕಾರಿನ ಇಂಜಿನ್ ಸ್ಥಗಿತವಾಗುವ ವ್ಯವಸ್ಥೆ ಇದರಲ್ಲಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಲಾರಂಭಿಸಿದರೆ, ಕಾರು ಮುಂದೆ ಹೋಗಲು ನಿರಾಕರಿಸುತ್ತದೆ. ಕಣ್ಣಿನ ಪಾಪೆಗಳನ್ನು ಕ್ಯಾಮೆರಾದ ಮೂಲಕ ಗಮನಿಸಿ, ಚಾಲಕ ಕಾರುಗಳನ್ನು ರಸ್ತೆ ಮೇಲೆ ನೆಡಲು ವಿಫಲನಾದರೂ ಕಾರು ಸ್ಥಗಿತವಾಗುವ ಆಧುನಿಕ ವ್ಯವಸ್ಥೆ ಈ ಕಾರಿನಲ್ಲಿರುವುದರಿಂದ ಟೊಯೊಟಾದ ಈ ಕಾರು ಅಪಘಾತಕ್ಕೊಳಗಾಗುವುದು ಬಹು ಕಠಿನ.
ನಿಮ್ಮ ಆಲೋಚನೆಗಳಲ್ಲಿ ದೌರ್ಬಲ್ಯವಿದ್ದಲ್ಲಿ ಕ್ರಮೇಣ ನಿಮ್ಮ ವ್ಯಕ್ತಿತ್ವವೇ ದುರ್ಬಲವಾಗುತ್ತದೆ.
ವಿಜ್ಞಾನಿಗಳ ದೃಷ್ಟಿಯಲ್ಲಿ ಅಮೀಬಾದಿಂದ ಮನುಷ್ಯನವರೆಗೆ ಜೀವದ ವಿಕಾಸಾವಾಗುತ್ತಾ ಬಂದಿದೆ. ಆದರೆ ಅಮೀಬಾ ಈ ಮಾತನ್ನು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ!
ನಿಮ್ಮ ಅಭಿಪ್ರಾಯಗಳು ಇತರರ ಅಭಿಪ್ರಾಯಗಳಿಗಿಂತ ವಿಭಿನ್ನವಾಗಿದ್ದಲ್ಲಿ ಹೆದರಬೇಡಿ, ಅವನ್ನು ಬದಲಾಯಿಸಲೂ ಬೇಡಿ. ಈಗ ಯಾವ ಅಭಿಪ್ರಾಯಗಳನ್ನು ನಾವು ಒಪ್ಪಿಕೊಂಡಿದ್ದೇವೆಯೋ ಆ ಅಭಿಪ್ರಾಯಗಳು ಮೊದಲು (ಆಗಿನ ಕಾಲಕ್ಕೆ) ವಿಭಿನ್ನವಾಗಿಯೇ ಇದ್ದವು ಅನ್ನುವುದನ್ನು ಮರೆಯದಿರಿ.
ನಾವು ಯಾವುದನ್ನು ಕುರಿತು ಚಿಂತಿಸುತ್ತಿದ್ದೇವೆಯೋ ಅದರ ಪ್ರಾಮುಖ್ಯತೆಯನ್ನು ಸರಿಯಾಗಿ ವಿಚಾರ ಮಾಡಿದಲ್ಲಿ ನಮ್ಮ ಚಿಂತೆ ತಾನಾಗಿಯೇ ಕಡಿಮೆಯಾಗುತ್ತದೆ!