ರಿಮೋಟ್ ಕಂಟ್ರೋಲ್

ರಿಮೋಟ್ ಕಂಟ್ರೋಲ್

ರಿಮೋಟ್ ಕಂಟ್ರೋಲ್‌ನ ಸಹ ಅನ್ವೇಷಕರಲ್ಲಿ ಒಬ್ಬರಾದ ರಾಬರ್ಟ್ ಅಡ್ಲರ್ ಅವರು ಇಂದು ನಿಧನ ಹೊಂದಿದರಂತೆ. ನಮ್ಮೆಲರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿರುವ ಇಂತಹ ಸಾಧನವನ್ನು ಕಂಡು ಹಿಡಿದ ಅಡ್ಲರ್‍ರಿಗೆ Hats-off. ತನ್ನ ಅನ್ವೇಷಕನಿಕೆ ಸಂತಾಪ ಸೂಚಿಸಲೋ ಎನೋ ಎಂಬಂತೆ ನಿನ್ನೆಯಿಂದ ನಮ್ಮ ಮನೆಯ ರಿಮೋಟ್ ಕಾರ್ಯನಿರ್ವಹಿಸುವುದು ನಿಲ್ಲಿಸಿಬಿಟ್ಟಿದೆ. ಅರ್ಧ ಗಂಘೆಗೊಮ್ಮೆ ಟಿವಿಯಲ್ಲಿ ಬರುವ ಎಲ್ಲ ೧೦೦ ಚಾನೆಲ್‌ಗಳನ್ನು scan ಮಾಡಿ, ಬರುವ ಎಲ್ಲಾ ಕಾರ್ಯಕ್ರಮಗಳ collage ಅನ್ನೇ ಒಂದು ಮನೋರಂಜನೆಯಾಗಿಸಿ ಕೊಂಡಿದ್ದ ನನಗೆ, ರಿಮೋಟ್ ಇಲ್ಲದ ಕಾರಣ ಕೈ ಮುರಿದಂತಾಗಿದೆ. ಪದೇ ಪದೇ ಟೀವಿಯ ಬಳಿ ಹೋಗಿ channel ಬದಲಾಯಿಸಿಲು ಮನಸಿಲ್ಲದೇ (ಅದಕ್ಕಿಂತಾ ಹೆಚ್ಚಾಗಿ ಸೋಮಾರಿತನದ ಅಡ್ಡಿ) ಇಂದು ಟೀವಿಯಿಂದ ಒಂದು break. ಅದರಿಂದಲೇ ಎನೋ ಸಂಪದದಲ್ಲಿ ಸದಸ್ಯನಾದ ೪೩ ವಾರಗಳ ನಂತರ ಒಂದು ಬ್ಲಾಗನ್ನು ಬರೆಯುತ್ತಿರುವೆ.

Rating
No votes yet