ಅಡುಗೆ ಮಾಡಿ ಕಲಿ... ಉಡುಗೆ ನೋಡಿ ಕಲಿ ...

ಅಡುಗೆ ಮಾಡಿ ಕಲಿ... ಉಡುಗೆ ನೋಡಿ ಕಲಿ ...

ಎಂಥ ಅಂದ ಎಂಥ ಚೆಂದ ಶಾರದಮ್ಮ

ನಿನ್ನ ನೋಡಲಿಕ್ಕೆ ಎರಡು ಕಣ್ಣು ಸಾಲದಮ್ಮ ...

ನಮ್ಮ ನಗರದಲ್ಲಿ ಯಾವ ಶಾರದಮ್ಮ ಸ್ವಾಮಿ? ಅದು ಹೆಸರಿನಲ್ಲಿ ಮಾತ್ರ. ಈಗೇನಿದ್ದರೂ ಕುಂಕುಮವಿಲ್ಲದ ಬೋಳು ಹಣೆ, ಬಳೆಯಿಇಲ್ಲದ ಬಡ ಕೈ, ಗೆಜ್ಜೆಯಿಲ್ಲದ ಬರಡು ಕಾಲು; ಇದೆಲ್ಲ ಸಾಲದೇನೋ ಎಂಬಂತೆ ಮೈಗೆ ಸಲ್ಲದ ಬಟ್ಟೆ. ಅಷ್ಟಿಲ್ಲದೆ ನಮ್ಮ ಹಿರಿಯರು "ಅಡುಗೆ ಮಾಡಿ ಕಲಿ... ಉಡುಗೆ ನೋಡಿ ಕಲಿ ... " ಎಂಬ ಗಾದೆ ಕೊಡುತ್ತಿದ್ದರೆ? ನಾವು ತೊಡುವ ಬಟ್ಟೆಯನ್ನು ನೂರಾರು ಜನರು ಗಮನಿಸುತ್ತಿರುತ್ತಾರೆಂಬ, ಇನ್ನೊಬ್ಬರು ಯಾರೋ ಕೆಟ್ಟದಾಗಿ ತೊಟ್ಟರೆ ಅದನ್ನು ಅರಿತಾದರೂ ನಾವು ತಿದ್ದಿಕೊಳ್ಳಬೇಕೆಂಬ ಸೂಕ್ಶ್ಮತೆ ಹುಡುಗಿಯರಲ್ಲಿಲ್ಲದಾಯಿತೇ? ಹಾಗಂತ ಹುಡುಗರು ಸರಿಯಿದ್ದಾರೆ ಅಂತೇನಲ್ಲ. ಅವರಲ್ಲೂ ಇದರ ಸೂಕ್ಶ್ಮತೆಯ ಕೊರತೆ ಇದೆ. ತೊಡುವ ಬಟ್ಟೆ ಹೇಗಿರಬೇಕು ಎಂಬ ವಿವೇಚನೆ ಬೇಡವೇ? ಹೆಣ್ತನ ಕೇವಲ ದೈಹಿಕ ಲಕ್ಶಣವಲ್ಲ. ನಡೆ, ನುಡಿ, ಉಡುಗೆ, ತೊಡುಗೆ ಎಲ್ಲದರಲ್ಲೂ ಅದರ ಲಕ್ಶಣ ಇರಬೇಕು.

ನಾವು ತೊಡುವ ಬಟ್ಟೆ ನಮ್ಮ ಮನೋವ್ರುತ್ತಿಯನ್ನು ಸೂಚಿಸುತ್ತದೆ. "When we wear a dress, we wear our attitude". ಬಟ್ಟೆ ತೊಟ್ಟರೆ ಮೊಟ್ಟಮೊದಲು ಸಭ್ಯವಾಗಿರಬೇಕು. ಆನಂತರ ಬಣ್ಣ, ಡಿಸೈನು ಇತ್ಯಾದಿ. ಈಗಲೂ ನಮ್ಮ ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ನೋಡಿದರೆ ಜನರಿಗೆ ಉಡುಗೆ-ತೊಡುಗೆಯ ತಿಳುವಳಿಕೆಯಿದೆ ಎಂಬುದು ಖಾತ್ರಿಯಾಗುತ್ತದೆ. ಬಟ್ಟೆ ಶೋಕಿಗಲ್ಲ ಎಂಬ ನಾಣ್ಣುಡಿ ಅವರಿಗೆ ಗೊತ್ತು. ಹಾಗಾಗಿ ಅವರು ಎಡವುದಕ್ಕೆ ಸಾಧ್ಯವೇ ಇಲ್ಲ. ನಾವು ನಗರ ವಾಸಿಗಳಷ್ತೇ. ಹಳ್ಳಿಜನರ ಮುಂದೆ ಅವರ ಆಚಾರ, ವಿಚಾರಗಳಲ್ಲಿ ನಾವು ತೃಣಕ್ಕೂ ಸಮಾನರಲ್ಲ.

ಹಾಗಾದರೆ ನಗರದಲ್ಲೇಕೆ ಹೀಗೆ? ನಗರದಲ್ಲಿದ್ದೊಡೆ ಸಂಸ್ಕ್ರುತಿ, ಸಂಪ್ರದಾಯ ಬೇಡವೇ? ಮನೆಗಳಲ್ಲಿ ಇರುವ ಶಿಸ್ತಿನ ಸಡಿಲತೆ ಉಡುಗೆಯಲ್ಲಿ, ನಡುಗೆಯಲ್ಲಿ, ಇತ್ಯಾದಿಗಳಲ್ಲಿ ತೋರಿಬರುತ್ತಿದೆ ಅಷ್ಟೆ. ಯಾವ ಸಿನಿಮಾ ನಾಯಕಿ ಏನು ತೊಟ್ಟರೇನು, ಏನು ಬಿಟ್ಟರೇನು. ಮನೆಯಲ್ಲಿ ಶಿಸ್ತು ಇದ್ದರೆ ಆ ತೊಡುಗೆ ಸಿನಿಮಾಗೆ ಮಾತ್ರ ಸೀಮಿತವಾಗಿರುತ್ತದೆ. ಇಲ್ಲದಿದ್ದರೆ ಮನೆಮಗಳು ಆಕೆಯಾದಾಳು ಜೋಕೆ!

ಇಂತೀ,

ಅನುಪ್ ಮಲೆನಾಡು

Rating
No votes yet