ರಾಜಸ್ಥಾನದಲ್ಲಿ ಕನ್ನಡದ ಕಂಪು
ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ವಿಕಿಪಿಡಿಯಾದಲ್ಲಿ ನೋಡಿ ...
ಚಿತ್ತೋಡಗಡ ರಾಜ ಮಹಾರಾಜರ ನಾಡು, ವೀರಾಗ್ರಣಿಗಳ ತವರೂರು. ಈ ಊರಿನ ಅರ್ಧ ಭಾಗ ಗುಡ್ಡದ ಮೇಲಿರುವ ಕೋಟೆ ಆಕ್ರಮಿಸಿಕೊಂಡಿದೆ. ಈ ಊರಿಗೆ ಆಗಮಿಸಿತ್ತಿದ್ದಂತೆ ಇದೊಂದು ಐತಿಹಾಸಿಕ ಊರೆಂದು ನಿಮ್ಮ ಗಮನಕ್ಕೆ ಬಂದರೆ ಆಶ್ಚರ್ಯವೇನಿಲ್ಲ (ಇದು ಒಂದು ದೃಷ್ಟಿಯಲ್ಲಿ ನಮ್ಮ ಚಿತ್ರದುರ್ಗದಂತೆ). ಇಡೀ ಕೋಟೆಯನ್ನು ವಿವರವಾಗಿ ಸುತ್ತಿಕೊಂಡು ಬರಲು ೩-೪ ದಿನಗಳೇ ಬೇಕು.
ಇನ್ನು ವಿಷಯಕ್ಕೆ ಬರೋಣ. ಕೋಟೆಯ ಒಳಗಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು "ಗೋಮುಖ ಕುಂಡ". ಅದರ ಪಕ್ಕದಲ್ಲೆ ಪಾರ್ಶ್ವನಾಥ ಜೈನ ಮಂದಿರವಿದೆ. ಮಂದಿರದಲ್ಲಿರುವ ಪವಿತ್ರವಾದ ಜೈನ ಮೂರ್ತಿಯ ಮೇಲೆ "ಕನ್ನಡ"ದ ಲಿಪಿಯುಳ್ಳ ಕೆತ್ತನೆಯಿದೆ. ಪ್ರವಾಸಿ ಕಿರುಹೊತ್ತಿಗೆಯ(tourist guide) ಪ್ರಕಾರ ಇತಿಹಾಸಕಾರರು ಈ ಮೂರ್ತಿಯನ್ನು ಕರ್ನಾಟಕದಿಂದ ತಂದಿರ(ತರಿಸಿರ)ಬಹುದೆಂದು ಅಭಿಪ್ರಾಯಪಡುತ್ತಾರೆ.
ಅಂದರೆ ಕರ್ನಾಟಕದ ಶಿಲ್ಪಕಲೆಯ ವೈಭವ, ಖ್ಯಾತಿ ದೂರದ ರಾಜಸ್ಥಾನದ ವರೆಗೆ ಹಬ್ಬಿತ್ತೆಂದು ತಿಳಿದು ನನಗೆ ಇನ್ನಿಲ್ಲದಷ್ಟು ಆಶ್ಚರ್ಯ ಸಂತೋಷಗಳೆರಡೂ ಆಯಿತು. ಈ ಹಿಂದೆ ಕರ್ನಾಟಕದ ಶಿಲ್ಪಕಲೆ ಶೈಲಿಯ, ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆದಿತ್ತು.
-ಜೈ ಕರ್ನಾಟಕ.