ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾಟ್ ಎಂದರೆ ಏನು?

ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ "ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?". ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್‌ನದು ಎಂದು. "ಸಾರ್, ಇದು 1000 ವಾಟ್, ಇದು 2000 ವಾಟ್,..." ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್‌ನದು ಎಂದು. ಈ ವಾಟ್ ಎಂದರೆ ಏನು?

ಹೀಗೊಂದು ಕರ್ನಾಟಕ.

ಬ್ರಿಟನಿನ ಸಂಗೀತ ಪ್ರಿಯರಿಗೆ ಕರ್ನಾಟಕ ಪರಿಚಿತ ಹೆಸರು. ಯೇಕೆಂದರೆ ಇದು ಒಂದು ರಾಕ್ ಸಂಗೀತಗಾರರ ಗುಂಪು. ೫ ಜನರ ಈ ತಂಡ ತನ್ನ ಹಾಡುವ ಶೈಲಿಯನ್ನು "ಪ್ರೊಗ್ರೆಸಿವ್ ರಾಕ್" ಎಂದು ವರ್ಣಿಸುತ್ತರೆ. ಈ ಗುಂಪಿನ ಬಗ್ಗೆ ಮಾಹಿತಿಗಾಗಿ ಇಲ್ಲಿ ನೋಡಿ

ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ

ಗೂಗಲ್ ನ ಸರ್ಚ್ ಸೌಲಭ್ಯ ಈಗ ಸಂಪೂರ್ಣ ಕನ್ನಡ ಇಂತರ್ಫೇಸಿನಲ್ಲಿ (ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ) ಲಭ್ಯ.

ಝೆನ್ ಕತೆ: ೨೪: ಸಾಯುವ ಸಮಯ

ಝೆನ್ ಗುರು ಇಕ್ಕ್ಯು ತನ್ನ ಚಿಕ್ಕಂದಿನಿಂದಲೇ ಚುರುಕು ಬುದ್ಧಿಗೆ ಪ್ರಸಿದ್ಧನಾಗಿದ್ದ. ಇಕ್ಕ್ಯುನ ಗುರುವಿನ ಬಳಿ ಒಂದು ಪ್ರಾಚೀನವಾದ, ಸುಂದರವಾದ, ಅತ್ಯಂತ ಬಲೆಬಾಳುವ, ಪಿಂಗಾಣಿಯ ಚಹಾ ಕಪ್ಪು ಇತ್ತು. ಇಕ್ಕ್ಯು ಒಮ್ಮೆ ಅದನ್ನು ಒರೆಸುತ್ತಿದ್ದಾಗ ಕೈ ಜಾರಿ ಬಿದ್ದು ಒಡೆದು ಹೋಯಿತು. ಏನುಮಾಡುವುದೆಂದು ತಿಳಿಯದೆ ಗೊಂದಲಗೊಂಡ.

ಮುಲ್ಲಾ ಕತೆ: ೩: ಆಚೆ ಈಚೆ ೪: ಒಂಟೆ ೫: ಕತ್ತೆ ಮನುಷ್ಯ

೩. ಆಚೆ ಈಚೆ

ಮುಲ್ಲಾ ಒಮ್ಮೆ ನದಿಯ ದಡದಲ್ಲಿ ಕೂತಿದ್ದ. ಇನ್ನೊಂದು ದಡದಲ್ಲಿದ್ದ ಒಬ್ಬಾತ “ಆಚೆ ದಡಕ್ಕೆ ಹೋಗುವುದು ಹೇಗೆ?” ಎಂದು ಕೂಗಿ ಕೇಳಿದ. ”ನೀನು ಆಗಲೇ ಆಚೆ ದಡದಲ್ಲಿದ್ದೀಯಲ್ಲ” ಎಂದು ಈ ದಡದಿಂದ ಮುಲ್ಲಾ ಕೂಗಿದ!

Mac OS X ಗೊಂದು ಕನ್ನಡ ಯುನಿಕೋಡ್ ಫಾಂಟು

ಕಳೆದ ಎರಡು ಮೂರು ದಿನಗಳಿಂದ ವೈರಲ್ ಫೀವರ್ ನನಗಂಟಿಕೊಂಡು ಬೇರೇನೂ ಮಾಡದಾಗಿ, ಕೊನೆಗೆ ನನ್ನ ಇಂಗ್ಲಿಷ್ ಸ್ನೇಹಿತ "ಬೋರು ಹೊಡೆದಿದೆ, ಮ್ಯಾಕಿಗೊಂದು (Mac OS X ಗೆ ಒಂದು) ಯುನಿಕೋಡ್ ಫಾಂಟ್ ಮಾಡೋಣವಾ?" ಎಂದಾಗ ಓಗೊಟ್ಟೆ.

ಗೂಗಲ್ ಅರ್ಥ್ನಲ್ಲಿ ಬೆಂಗಳೂರು ಈಗ ಇನ್ನೂ ನಿಖರ

ಗೂಗಲ್ ಅರ್ಥ್ನಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದ ನಮ್ಮ ಬೆಂಗಳೂರು ಈಗ ಇನ್ನೂ ಸ್ಪಷ್ಟ ಹಾಗೂ ನಿಖರವಾಗಿ ಕಾಣ್ತಿದೆ.

ತರಲೆ ಪ್ರಶ್ನೆಗಳು

ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ ಮತ್ತೆ ನನ್ನ ವಿಶ್ವಕನ್ನಡದಲ್ಲೂ ಮುಂದುವರಿಸಿದೆ. ಅವುಗಳನ್ನು ಓದಿದವರಿಗೆ ತರಲೆ ಪ್ರಶ್ನೆಗಳ ಪರಿಚಯವಿರಬಹುದು. ಒಂದು ಉದಾಹರಣೆ-