ನಿಮ್ಮ ಭಾವನೆಗಳ ಕನ್ನಡಿ ಹಿಡಿಯಿರಿ!
ಬರಹ
ಬ್ಲಾಗುಗಳು ಬರುವ ಮುನ್ನ ಹಲವು ಸಂವಹನ ಸವಲತ್ತುಗಳು ನಮಗೆಲ್ಲ ತಿಳಿದೇ ಇರಲಿಲ್ಲವೇನೊ. ಈಗ ಬರೆಯುತ್ತಿರುವಂತೆಯೇ ನೀವು ವ್ಯಕ್ತಪಡಿಸುತ್ತಿರುವ ಸಂತಸ, ಅಥವ ತಮಾಷೆ, ಅಥವ ಇನ್ನೂ ಹಲವು ಭಾವನೆಗಳನ್ನು ಒಂದು ಪುಟ್ಟ ಚಿತ್ರದಿಂದಲೇ ತಿಳಿಸಿಬಿಡಬಹುದು. ಯಾಹೂ ಐ ಎಮ್ (instant messenger) ಬಳಸಿ ರೂಢಿಯಿರುವ ಬಹಳಷ್ಟು ಜನರಿಗೆ ಇವನ್ನು "emoticons" ಎಂದು ಬಳಸಿರುವ ಅನುಭವವಿರಬಹುದು. ಡೀವಿಯೆಂಟ್ ಆರ್ಟ್ ಮುಂತಾದ ಸೈಟುಗಳಲ್ಲಿ ಇಂತಹ smiley ಅಥವ emoticonಉಗಳ ದಂಡೇ ಸದಸ್ಯರಿಗೆ ಬಳಸಲು ಲಭ್ಯ ಇವೆ.
ಸದ್ಯಕ್ಕೆ ಸಂಪದ ಸದಸ್ಯರ ಬಳೆಕೆಗೆಂದು ಕೆಳಗಿನ ಕೆಲವು smileyಗಳು:
(ನೀವು ಕಾಮೆಂಟ್ ಅಥವ ಲೇಖನದೊಂದಿಗೆ ಕೆಳಗಿನ ಅಡ್ಡ ಹೆಸರುಗಳನ್ನು ಸೇರಿಸಿದರೆ ಚಿತ್ರ ತಂತಾನಾಗಿಯೇ ಪ್ರಕಟವಾಗುತ್ತದೆ. ಪ್ರಯತ್ನಿಸಿ ನೋಡಿ :) )