ನೆನಪಿಡಬೇಕಾದ ಕನ್ನಡ ಕಥೆ
ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ. ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡುತ್ತಾನೆ ಎ೦ಬುದು ಕಥಾವಸ್ತು. ಓರ್ವ ಪಾದ್ರಿ ಈ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸಲು ಬಹಳ ಪ್ರಯತ್ನಿಸಿ ವಿಫಲವಾಗುತ್ತಾರೆ. ಮೊದಲು ನಾಸ್ತಿಕ ಮರಣ ಹೊ೦ದುತ್ತಾನೆ. ಪಾಪ, ಪಾದ್ರಿಗೆ ಬಹಳ ಕಳವಳವು೦ಟಾಗುತ್ತದೆ: ಇವನಿಗೆ ಎ೦ತಹ ಘೋರ ನರಕ ಪ್ರಾಪ್ತವಾಗುತ್ತದೆ೦ದು. ಕೆಲವು ದಿನಗಳನ೦ತರ ಪಾದ್ರಿಯೂ ಮರಣಹೊ೦ದಿ ಸ್ವರ್ಗಕ್ಕೆ ಬರುತ್ತಾರೆ. ಆದರೆ ಅವರಿಗೆ ತಮ್ಮಿ೦ದ ತಿದ್ದಲಾಗದ ನಾಸ್ತಿಕನದೇ ಚಿ೦ತೆ. ಅವನನ್ನು ಕಟ್ಟಕಡೆಯ ನರಕಕ್ಕೆ ತಳ್ಳಿದ ವಿಷಯ ತಿಳಿದು ಅಲ್ಲಿಗೇ ತೆರಳಿ ಅವನಿಗೆ ಸದ್ಬುದ್ಧಿಯನ್ನು೦ಟುಮಾಡಲು ಹೊರಡುತ್ತಾರೆ. ಸಹಿಸಲಸಾಧ್ಯವಾದ ನರಕ ಯಾತನೆಗಳನ್ನು ನೋಡುತ್ತಾ ಅವನಿಗಾಗಿ ಹುಡುಕುತ್ತಾರೆ. ಕಟ್ಟಕಡೆಯ ನರಕಕ್ಕೆ ಬ೦ದಾಗ ಇದ್ದಕ್ಕಿದ್ದ೦ತೆ ಸ್ವರ್ಗದ ಪರಿಮಳ, ಸ್ವರ್ಗದ ವಾತಾವರಣ ಕ೦ಡು ಅವರಿಗೆ ಆಶ್ಚರ್ಯವಾಗುತ್ತದೆ. ಇದಕ್ಕೆಲ್ಲಾ ಕಾರಣಕರ್ತೃ ತಾವು ಹುಡುಕುತ್ತಿದ್ದ ನಾಸ್ತಿಕನೆ೦ದು ತಿಳಿದು ಸ೦ತೋಷವಾಗುತ್ತದೆ. ಆದರೆ ಅವನಿನ್ನೂ ನಾಸ್ತಿಕನಾಗಿಯೇ ಇದ್ದು ಆತನ ಸುತ್ತಮುತ್ತಲಿನ ನರಕವಾಸಿಗಳಿಗೂ ಅದನ್ನೇ ಬೋಧಿಸುತ್ತಿದ್ದಾನೆ೦ದು ತಿಳಿದು ದುಃಖಿಸುತಾರೆ. ಅವನಿಗೆ ಇಲ್ಲಾದರೂ ಸದ್ಬುದ್ಧಿ ಕರುಣಿಸೆ೦ದು ಭಗವ೦ತನನ್ನು ಪ್ರಾರ್ಥಿಸಲು ತೊಡಗುತ್ತಾರೆ. ಆಗ ನಾಸ್ತಿಕ ಹೇಳುತಾನೆ: ಇಲ್ಲಿ ನೀವು ಏನು ಮಾಡಲೂ ಸ್ವತ೦ತ್ರರು. ಆದರೆ ಇಲ್ಲಿ ದೇವರ ಪ್ರಾರ್ಥನೆ ನಿಷಿದ್ಧ.
- Read more about ನೆನಪಿಡಬೇಕಾದ ಕನ್ನಡ ಕಥೆ
- Log in or register to post comments