ಹೀಗೇಕೆ...???

ಹೀಗೇಕೆ...???

 ಹೀಗೇಕೆ...???

ಹಲವು ದಿನಗಳಿ೦ದ
ಚಡಪಡಿಸುತಲಿದ್ದೆ,
ಕಣ್ಮುಚ್ಚಿದರೆ
ಕಣ್ಣಿಗೆ ನಿದ್ದೆಯಿಲ್ಲ;
ಹಸಿವಾದರೂ
ತಿನ್ನಲು ಮನಸ್ಸಿಲ್ಲ;
ಕೆಲಸದಲ್ಲಿ
ಮಗ್ನತೆಯಿಲ್ಲ;
ಯೋಚನೆಯಲ್ಲಿ
ತಿರುಳಿಲ್ಲ;
ಮೊಗದಲಿ ನಗುವಿಲ್ಲ;
ಆಡಲು ಮಾತು
ಬಾರದಲ್ಲ;
ಎದೆ ಭಾರವಾಗಿದೆಯೆಲ್ಲಾ!

ಹಸಿರು
ತ೦ಪು ಮಾಡುತಿಲ್ಲ;
ಶಾ೦ತಿ-ನೆಮ್ಮದಿ
ಹತ್ತಿರ ಸುಳಿಯುತಿಲ್ಲ;

ನಿ೦ತಲ್ಲಿ ನಿಲ್ಲೋಕಾಗಲ,
ಕೂತಲ್ಲಿ ಕೂರೋಕಾಗಲ್ಲ,
ಮೈಯಾರಕ ಬಿಸಿಯಿರುವುದಲ್ಲ!
ಕಾರಣ ಕಣ್ಣಿಗೆ ಕಾಣ್ತಿಲ್ಲ,
ಎನ್ನುತಾ ಅವ ಮೊರೆಯಿಟ್ಟ;
ಇದು ಬೇರೆಯೇನೂ ಅಲ್ಲ,
ಸರ್ವರೂ ಬಲ್ಲ,
ಚಿಕುನ್-ಗುನ್ಯಾ,
ತಿಳಿಯೋ ನೀ ಶಾಣ್ಯ!!!

*******************ಅಮರ್*********************

 

Rating
No votes yet