ತ್ಯಾಗ-ಭೋಗದ ನಡುವೆ..

ತ್ಯಾಗ-ಭೋಗದ ನಡುವೆ..

ತ್ಯಾಗದಲ್ಲಿ ಸುಖವಿದೆ ಎಂಬುದು ತಾತ್ವಿಕ ನಿಲವು.
ಅದೇ ಭೋಗದಲ್ಲಿ ಸುಖವಿದೆ ಎಂಬುದಷ್ಟೇ ಸಾತ್ವಿಕ ನಿಲವಾಗಲಾರದು. ಹೇಗೆ ಬರೀ ತ್ಯಾಗವೇ ಜೀವನವಲ್ಲವೋ ಹಾಗೆಯೆ ಬೋಗವೂ ಜೀವನವಲ್ಲ. ಜೀವನದಲ್ಲಿ ತ್ಯಾಗ-ಭೋಗ ಎರಡೂ ಸಮನಾಗಿರಲಾರವು; ಒಂದೇ ತಕ್ಕಡಿಯಲ್ಲಿ ತೂಗಲಾರವು.

 ತ್ಯಾಗಿಯಾದ ಯೋಗಿಗೂ ದೈಹಿಕ ಬಯಕೆಗಳು ಕಾಡುತ್ತವೆ. ಹಾಗೆಂದು ಬಯಕೆಗಳನ್ನು ನಿಗ್ರಹಿಸುದಷ್ಟೇ ಬ್ರಹ್ಮಜ್ಞಾನವೂ ಅಲ್ಲ. ದೇಹವಿರುವುದು ಮೊದಲು ಬದುಕುವುದಕ್ಕಾಗಿ. ಬದುಕು ಸಹ್ಯವೆನಿಸಬೇಕಾದರೆ ಸುಖವೆಂಬುದು ಕೇವಲ ಕಾಲ್ಪನಿಕವಾಗಬಾರದಲ್ಲ.  ಸುಖವೆಂಬದು ಅನುಭವಿಸಿಯೆ ತಿಳಿಯುವಂತದ್ದು.  ಆದರೆ, ಸುಖದ ಪರಿಕಲ್ಪನೆ ಮಾತ್ರ ಮನಸ್ಸಿನಂತೆಯೆ.  ಮಧ್ಯದ ಅಮಲು ಮನಸ್ಸನ್ನು ಕೆಡಿಸುವುದಾದರೆ, ಸುಖದ ಅಮಲೂ ಕೂಡ ಅದನ್ನೇ ಮಾಡುತ್ತದೆ.

ತ್ಯಾಗ-ಭೋಗಗಳ ನಡುವೆಯೆ ಬದುಕೆಂಬುದಿದೆ;ಜೀವನ ಸೌಖ್ಯದ ಕ್ಷಣಗಳಿವೆ;ಸಂದರ್ಭಗಳಿವೆ. ಆದರೆ, ಯಾವುದು “ಸೌಖ್ಯಸುಖ” ಎಂಬ ತಾರ್ಕಿಕ ನಿಲವೂ ಕೂಡ ಮನಸ್ಸಿನಿಂದಲೇ ಆಗಬೇಕಿದೆ.

-ಶಿವರಾಂ. ಎಚ್                 10 ಸೆಪ್ಟೆಂಬರ್,2006

Rating
No votes yet