ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!
ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು. ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು ಮಾಡುತ್ತಿದ್ದೀಯ" ಎಂದೆ. ಅಲ್ಲಿ ನಾನು ಭೇಟಿ ಮಾಡಿದ ಕಲಾವಿದರ ಹೆಸರುಗಳನ್ನೆಲ್ಲ ಆಕೆಗೆ ದಿನನಿತ್ಯ ಹೇಳುತ್ತಿದ್ದೆ. "ಎಸ್ಕೊ ಮನಕ್ಕೊ ಗೊತ್ತೆ? ಯಾರ್ಮ ಪುರಾನನ್ನ ಭೇಟಿ ಮಾಡಿದೆ, ಯಾನ್ ಕಾಯ್ಲಾ ಸಿಕ್ಕಿದ್ದ" ಎಂದೆಲ್ಲ ಹೇಳುತ್ತಿದ್ದಾಗ ಆಕೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. ನೆನಪಿರಲಿ ಫಿನ್ನಿಶ್ ಜನ ನಗುವುದಿಲ್ಲ, ನಗದವರ ಮುಖಭಾವ ಓದುವುದು ಸುಲಭವಲ್ಲ. "ಹೇಗೆ ನೀನು ಹೆಸರುಗಳನ್ನು ಜ್ಞಾಪಕವಿರಿಸಿಕೊಳ್ಳುವೆ?" ಎಂದು ಕೇಳಿದಳು.
- Read more about ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!
- 2 comments
- Log in or register to post comments