ಸಾವಿರ ಪಾಯಿಂಟ್ ಸರದಾರ ! (- ಇದು Vote of thanks ಅಲ್ಲ!)

ಸಾವಿರ ಪಾಯಿಂಟ್ ಸರದಾರ ! (- ಇದು Vote of thanks ಅಲ್ಲ!)

ನಾನು ಜನವರಿ ೨೦೦೬ ರ ಹೊತ್ತಿಗೆ ಸಂಪದದಲ್ಲಿ ಸದಸ್ಯನಾದೆ. ಈವರೆಗೆ ಓದಿದ ಒಳ್ಳೆಯ ವಿಷಯಗಳನ್ನು 'ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ' ಎಂಬಂತೆ ಓದುವವರಿಗೆ ತಿಳಿಸೋಣವೆಂದು ಬರೆಯಲಾರಂಭಿಸಿದೆ. ಬರವಣಿಗೆಗೆ ಇಲ್ಲಿ ಪಾಯಿಂಟ್ ನೀಡುವ ವ್ಯವಸ್ಥೆ ಇದೆ. ಬ್ಲಾಗ್ ಗಳಿಗೆ ಕಡಿಮೆ , ಲೇಖನಗಳಿಗೆ ಹೆಚ್ಚು ಎಂತೆಲ್ಲ ಇದೆ. ಹೆಚ್ಚಿನ ಪಾಯಿಂಟ್ ಪಡೆದವರ ಪಟ್ಟಿಯೂ ಲಭ್ಯವಿತ್ತು . ಅದನ್ನೇಕೋ ವ್ಯವಸ್ಥಾಪಕರು ತೆಗೆದು ಹಾಕಿದ್ದಾರೆ ಇರಲಿ. ಅಂದಿನಿಂದ ಈವರೆಗೆ ಆಗಾಗ ಚಿಕ್ಕ ಪುಟ್ಟ ಲೇಖನ , ಅದು-ಇದು ಬರೆದಿದ್ದೇನೆ. ಎರಡು ಮೂರು ಬಾರಿ( ಅಪರೋಕ್ಷವಾಗಿ) ಭಾಷಾಚರ್ಚೆಗೂ ಕಾರಣವಾಗಿದ್ದೇನೆ ಅದರಿಂದ ಎಷ್ಟೋ ನಾನರಿಯದ ವಿಷಯಗಳೂ ತಿಳಿದು ಬಂದಿವೆ. ( ಶ್ರೀಯುತರುಗಳಾದ ಸಂಗನಗೌದರು , ಮಹೇಶ್ ಭೋಗಾದಿ , ಇಸ್ಮಾಯಿಲ್ , ಬೆನಕ , ಪವನಜ ಮುಂತಾದವರಿಂದ . ಶ್ರೀ ತಳಕಿನ ಶ್ರೀನಿವಾಸ್ ಅವರಿಂದ ಸದಾ ಪ್ರೋತ್ಸಾಹವು ಸತತವಾಗಿತ್ತು)

ಅಯ್ಯೋ , ಇದು ಖಂಡಿತಕ್ಕೂ ಇದು Vote of thanks ಅಲ್ಲ! ಬರೆಯುವುದನ್ನು ನಿಲ್ಲಿಸ್ತಿದೇನೆ ಅಂತ ತಿಳಿದ್ರಾ? ಹಾಗೇನಿಲ್ಲ . ಮತ್ತೇನು ಎನ್ನುತ್ತೀರಾ ? ಪಾಯಿಂಟ್ ವಿಷಯ ಹೇಳುತ್ತಿದ್ದೆ . ಪಾಯಿಂಟ್ ಗಳ ಲೆಕ್ಕದಲ್ಲಿ ಸಾವಿರ ಸಮೀಪಿಸಿದ್ದು , ಬಹುಶ: ನಾನೇ ಹೆಚ್ಚು ಪಾಯಿಂಟ್ ಗಳಿಸಿದ್ದೇನೆ. ೯೯೭ ಆಗಿದ್ದು ಬಹುಶ: ಈ ಬ್ಲಾಗಿನೊಂದಿಗೆ ಸಾವಿರ ಆಗುತ್ತದೆ. ಸಾವಿರ ಮಾಡುವದಕ್ಕೆಂದೇ ಬರೆದ ಬ್ಲಾಗ್ ಲೇಖನ ಇದು! .

ಪಾಯಿಂಟ್ ಗೇನೂ ಬೆಲೆ ಇಲ್ಲ ಅಂದ್ರಾ ? ಸ್ವಲ್ಪ ತಡೆಯಿರಿ , ನಾಳೆಯ ಬ್ಲಾಗ್ ನಲ್ಲಿ ಒಂದು ಒಳ್ಳೆ ಕಥೆ ಹೇಳುವೆ. ತಪ್ಪದೇ ಓದಿ. ಅದು ಅರಾಸೇ ಅವರ ಹಾಸ್ಯ ಲೇಖನದು . - "ನನಗೆ ಎಂಥದೋ ಒಂದು ಪ್ರಶಸ್ತಿ ಬಂದಿದೆ . ನಿಮಗೆ ?" ನಿಜಕ್ಕೂ ಚೆನ್ನಾಗಿದೆ . ನಿರೀಕ್ಷಿಸಿ.

ಈ ಪಾಯಿಂಟ್ ಗಳಿಕೆಗೆ ಕಾರಣರಾದ ಓದುಗರಾದ ನಿಮಗೂ ಧನ್ಯವಾದಗಳು .

Rating
No votes yet

Comments