OLN ರವರ ಪುಸ್ತಕ - ಲೋಕಾಂತ ಏಕಾಂತ

OLN ರವರ ಪುಸ್ತಕ - ಲೋಕಾಂತ ಏಕಾಂತ

ಇತ್ತೀಚೆಗೆ ಬೆಂಗಳೂರ್‍ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .

ಪುಸ್ತಕದ ಹೆಸರು 'ಲೋಕಾಂತ ಏಕಾಂತ' ( ಅಥ್ವಾ ' ಏಕಾಂತ ಲೋಕಾಂತ' ಇರಬಹುದು . ಆ ಪುಸ್ತಕ ಓದಿ ಊರಲ್ಲಿಯೇ ಬಿಟ್ಟು ಬಂದೆ. ಈಗ ನನ್ನ ಹತ್ತಿರ ಇಲ್ಲ) . ಅದು ಒಳ್ಳೆಯ ಪುಸ್ತಕ .

ಮುದ್ರಣ ಮುದ್ದಾಗಿದೆ. ಪತ್ರಿಕೆಯಲ್ಲಿ ಪ್ರಕಟವದ ಅಂಕಣ ಬರಹಗಳ ಸಂಕಲನ ಇದು. ಅನೇಕ ಹೊಸ ವಿಷಯಗಳು ನನಗೆ ತಿಳಿದು ಬಂದವು. ಕೆಲವು ಅಲ್ಲಮನ ವಚನಗಳ ವಿಶ್ಲೇಷಣೆ ಇದೆ. 'ಪುಸ್ತಕಗಳನ್ನು ಓದುವದಕ್ಕಿಂತ , ಜೀವನವನ್ನು ಓದಬೇಕು' ಎಂಬ ಮಾತಿದೆ. ಬೆಚ್ಚಿ ಬೀಳಿಸುವ ಪ್ರಾಮಾಣಿಕತೆಯ ಬಸವಣ್ಣನ ವಚನವೊಂದೂ ಇಲ್ಲಿದೆ. ಆ ವಚನ ನೆನಪು ಇಲ್ಲ . ಆದರೆ ಅದರ ಆಶಯ ನೆನಪಿನಲ್ಲುಳಿಯಿತು. ಹೆಣ್ಣಿಗೆ ಗಂಡು ಮಾಯೆ . ಗಂಡಿಗೆ ಹೆಣ್ಣು ಮಾಯೆ. ತಮ್ಮಲ್ಲಿರುವ ಈ ಮಾಯೆಯ ಆಕರ್ಷಣೆಯ ಕುರಿತಾದ ವಚನ ಇದು.

ಏ.ಕೆ.ರಾಮಾನುಜನ್ ರವರ ಅಂಗುಲ ಹುಳುವಿನ ಕತೆ ಎಲ್ಲೋ ಓದಿದ್ದೆ . ಹೆಚ್ಚಿನ ವಿವರಣೆಯೊಂದಿಗೆ ಇಲ್ಲಿ ಸಿಕ್ಕಿತು. ಅಂಗುಲ ಅಳತೆಯ ಹುಳು ತನ್ನ ಮಾನದಂಡದಿಂದ ಎಲ್ಲವನ್ನೂ ಅಳೆಯಹೋಗುತ್ತದೆ. ಕೋಗಿಲೆಯ ಹಾಡನ್ನಳೆಯಲು ಹೋಗಿ ಅಳೆಯುತ್ತ ಹೋಗಿ ಗುಡ್ಡ ಬೆಟ್ಟ ಗಳನ್ನು ಹತ್ತಿಳಿದು ಕಾಣೆಯಾಗುತ್ತದೆ. ನಾವೂ ಹಾಗೆಯೇ . ಎಲ್ಲವನ್ನು ಅಳೆಯಬಯಸುತ್ತೇವೆ. ಅಳೆಯಲಾಗದ್ದು ಮಹತ್ವದ್ದಲ್ಲ ಎಂದು ತಪ್ಪು ತಿಳಿದಿದ್ದೇವೆ.

ಓ ಎಲ್ ನಾಗಭೂಷಣಸ್ವಾಮಿ ಅವರಿಗೆ ಧನ್ಯವಾದಗಳು . ಅವರ ಬೇರೆ ಏನು ಪುಸ್ತಕಗಳಿವೆ ನೋಡಬೇಕು.

Rating
No votes yet