ರಿಲಯನ್ಸ್‌ನಲ್ಲಿ ಕನ್ನಡ
ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ.
ರಿಲಯನ್ಸಿನಲ್ಲಿ ಕನ್ನಡ
ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ರಿಲಯನ್ಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಹಾಗೆಂದು ಹೇಳಿ ನಾನು ರಿಲಯನ್ಸ್ ಪರ ಇದ್ದೇನೆ ಎಂದು ತಿಳಿದುಕೊಳ್ಳಬೇಡಿ. ಅವರ ಸೇವೆ ಬಗ್ಗೆ ನನಗೆ ಹಲವು ಅಸಮಾಧಾನಗಳಿವೆ. ಅವುಗಳ ಬಗ್ಗೆ ಈಗ ಬೇಡ. ಇನ್ನೂ ಒಂದು ವಿಷಯ. ರಿಲಯನ್ಸ್ ಅವರ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿ ಕೇಳಿ. ಅಪ್ಪಟ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ!
- Read more about ರಿಲಯನ್ಸ್‌ನಲ್ಲಿ ಕನ್ನಡ
- 4 comments
- Log in or register to post comments