ಸಪ್ತಗಿರಿ ಸಂಪದ (ಪುರಾಣ ಕಥಾನಕ)

ಸಪ್ತಗಿರಿ ಸಂಪದ (ಪುರಾಣ ಕಥಾನಕ)

"ಸಪ್ತಗಿರಿ ಸಂದ"-  ಶ್ರೀವೆಂಕಟೇಶ ಪುರಾಣ ಕಥೆ. ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ.  ಅವನು ಸಾತ್ವಿಕ ಸಂಪನ್ನ.   ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ-ಸಂದೇಶ ಸಾರಲೆಂದೇ ಭೂಮಿಗಿಳಿದು ಬಂದ ಭಗವಂತನವನು ಎಂಬ ಸತ್ಯ ತಿಳಿದವರೂ ಕಡಿಮೆಯೆ .  ಭಕ್ತಿ ಭಾವದಿಂದ ಅವನಿಗೆ ಹರಕೆ ಕಾಣಿಕಗಳನ್ನೊಪ್ಪಿಸಿದರೆ ಸಾಕು, ತಮ್ಮ ಇಷ್ಟಾರ್ಥಗಳು ಸಿದ್ಧಿಸುವುವೆಂದು  ನಂಬಿರುವ ಸಮುದಾಯ ಬಹಳ ದೊಡ್ಡದು. ಸಾಮಾನ್ಯವಾಗಿ  ರಾಮಾಯಣ ,ಮಹಾ  ಭಾರತ  ಈ  ಎರಡು ಮಹಾ ಪುರಾಣ ಕಥೆಗಳು ಎಲ್ಲಕಾಲಕ್ಕೂ  ಸಮಕಾಲೀನ ಜೀವನ  ಮೌಲ್ಯಗಳನ್ನು ಒದಗಿಸುತ್ತವೆ  ಎಂಬ ಭಾವನೆಯೆ ಪ್ರಚಲಿತದಲ್ಲಿದೆ..   ಇವುಗಳನ್ನು ಹೊರತು ಪಡಿಸಿ ಬೇರೆ  ಯಾವುದಾದರೂ  ಪುರಾಣ ಕಥೆ   ನಮ್ಮ ಬದುಕಿಗೆ ಮೌಲಿಕ ವೆನಿಸೀತೇ.... ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ತೆರೆದಿಡಬಲ್ಲದೇ ಎಂಬ ಶೋಧನೆಯಲ್ಲಿ  ನಾನಿದ್ದಾಗ  ಮೂಡಿ ಬಂದ  ಕೃತಿ  “ಸಪ್ತಗಿರಿ  ಸಂಪದ”.
1997ರಲ್ಲಿ  ಪ್ರಕಟವಾಗಿ  ಸಾಕಷ್ಟು  ಜನ ಮನ್ನಣೆ ಗಳಿಸಿದ  ಈ ಕೃತಿ  ನನ್ನ ಬದುಕು-ಬರಹದಲ್ಲಿ  ನನಗೆ ಆತ್ಮಸಂತೋಷವನ್ನು ತಂದು ಕೊಟ್ಟಂಥ  ಪೌರಾಣಿಕ ಕೃತಿ.

-ಶಿವರಾಂ ಎಚ್.

 ಇ ದರ ಅನುಕ್ರಮ ಸಂಚಿಕೆಗಳಿಗೆ ಇಲ್ಲಿ ಕ್ಲಿಕ್ ಮಾಡಿ ನೋಡಿ -

[http://sapthagirisampada.blogspot.com|ಸಪ್ತಗಿರಿ ಸಂಪದ-ಪೌರಾಣಿಕ ಕಥಾನಕ]

Rating
No votes yet

Comments