SMS ಎಂಬ ನವ ಜಾನಪದ
ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್ ಮಿ' ಎಂದು ಎಸ್‌ಎಂಎಸ್ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್ ಹೊಡೆಸುವ ಲೆಕ್ಚರರ್ ಇನ್ನಷ್ಟು ಬೋರ್ ಹೊಡೆಸುವ ಲೆಕ್ಚರ್ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.
- Read more about SMS ಎಂಬ ನವ ಜಾನಪದ
- 1 comment
- Log in or register to post comments