ಶುಭಂ

ಶುಭಂ

ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು.
ನಿನ್ನೆ ಕೋರಮಂಗಳದ ಫೋರಮ್‍ನಲ್ಲಿ 'ಶುಭಂ' ನೋಡಿದೆ.
ತಾಂತ್ರಿಕವಾಗಿ ಇದು ಭಾರತದ ಯಾವುದೇ ಭಾಷೆಯ ಸಿನೆಮಾದ ಜೊತೆ ಸ್ಪರ್ಧಿಸಬಹುದು.ಗುರುಕಿರಣರ ಉತ್ತಮ ಸಂಗೀತವಿದೆ, ಆದರೆ ಸಂಗೀತವನ್ನು ಮೀರಿಸೋದು ಗಿರಿಯವರ ಛಾಯಾಗ್ರಹಣ.ಸಿನೆಮಾದ ಕತೆ ಮುಂದುವರೆಯೋದು ಪ್ರಕೃತಿಯ ನಡುವೆ, ಹಾಡುಗಳ ಸಹಾಯದಿಂದ.ಇದನ್ನು ನೋಡಿಯೆ ಅನುಭವಿಸಬೇಕು.
ಸಿನೆಮಾದ ತುಂಬ ಘಟನೆಗಳು ಮತ್ತು ತಿರುವುಗಳು.ಮುಂದೆ ಎನಾಗಬಹುದು ಅಂತ ಯೋಚಿಸುವ ಅಗತ್ಯವಿಲ್ಲ, ಯೋಚಿಸಿದಂತೆ ಏನೂ ನಡೆಯೋದು ಇಲ್ಲ.

ಸಿನೆಮಾ ಚೆನ್ನಾಗಿದೆಯ??
ಹ್‍ಮ್.....ಸಿನೆಮಾದ ತಾಂತ್ರಿಕತೆಗೆ ಕೊಟ್ಟಷ್ಟೆ ಗಮನ ,'ಸ್ಕ್ರಿಪ್ಟ್'ಗೆ ಕೊಟ್ಟಿದ್ರೆ ....!
ಚೆನ್ನಾಗಿಲ್ಲ ಅಂತ ಹೇಳಲು, ಯಾವುದೇ ಕಾರಣಗಳಿಲ್ಲ...ಋಣಾತ್ಮಕ ಅಂಶಗಳಿಗಿಂತ , ಧನಾತ್ಮಕ ಅಂಶಗಳು ಜಾಸ್ತಿ ಇದೆ.

'ಶುಭಂ'- ಒಂದು ಕತೆ,ಎರಡು ನಿರೂಪಣೆ ಎಂದು ಪ್ರಚಾರ ಗಿಟ್ಟಿಸಿಕೊಂಡಿತ್ತು.ಒಂದು 'ಕ್ಲಾಸ್'ಗಾಗಿ, ಮತ್ತೊಂದು 'ಮಾಸ್'ಗಾಗಿ.
ಈಗ ನೋಡಿದ್ದು ಕ್ಲಾಸ್‍ಗಾಗಿ ಮಾಡಿದ ಸಿನೆಮಾವಾ ಅಥವಾ ಮಾಸ್‍ಗಾಗಿ ಮಾಡಿದ ಸಿನೆಮಾವಾ?

ಇದೊಂದು ಉತ್ತಮ ಪ್ರಯತ್ನ.ಪ್ರೋತ್ಸಾಹಿಸುವ ಅಗತ್ಯವಿದೆ.ನಿರ್ದೇಶಕ ರವಿ ಗರಣಿಯವರಿಗೆ 'ಶುಭಂ'..

Rating
No votes yet

Comments