ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೪೪) - ಕನಸಿನ ದುಡಿಮೆ

ದುಡಿಮೆಗೋಸ್ಕರ ತೆಂಗಿನ ಮರ ಏರುತ್ತಾನೆ. ಪ್ರತಿದಿನವೂ ಅವಿರತವಾಗಿ ದೇಹವನ್ನ ದಂಡಿಸಿ ದುಡಿಯುತ್ತಾನೆ. ಮನೆ ತನ್ನ ನಂಬಿದವರ ಜೀವನ ಕಷ್ಟದಲ್ಲಿ ಬೀಳಬಾರದು ಅನ್ನುವ ಕಾರಣಕ್ಕೆ ಬೆವರು ಹರಿಸುತ್ತಾನೆ. ಆದರೆ ಆತನ ಆಸೆಗಳು ದೊಡ್ಡದು. ವೇದಿಕೆಯ ಮೇಲೆ ಮೈಕ್ ಹಿಡಿದರೆ ಸುಲಲಿತವಾಗಿ ಪದಗಳು ಒಂದರ ಹಿಂದೆಂದರಂತೆ ಕೇಳುಗರ ಮನಸೂರೆ ಗೊಳ್ಳುವಂತೆ ಮಾತನಾಡುತ್ತಾನೆ.

Image

ಬೇಸನ್ ಲಾಡು

Image

ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ ಪಾಕ ಹಾಕಿ ಚೆನ್ನಾಗಿ ಮಗುಚಿ. ಅದು ಮುದ್ದೆಯಾಗುತ್ತದೆ. ತಣಿದ ನಂತರ ಉಂಡೆ ಕಟ್ಟಿ.

ಬೇಕಿರುವ ಸಾಮಗ್ರಿ

ಕಡಲೆ ಹಿಟ್ಟು ೧ ಕಪ್, ಸಕ್ಕರೆ ೧ ಕಪ್, ತುಪ್ಪ ೧/೨ ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಚೂರು ಸ್ವಲ್ಪ.

ಶಿವರಾತ್ರಿಯ ಮಹತ್ವ ಹಾಗೂ ಶಿವತತ್ವ (ಭಾಗ 1)

ಏನಿದು ಶಿವರಾತ್ರಿ ಏತಕ್ಕಾಗಿ ಆಚರಿಸಬೇಕು ಶಿವರಾತ್ರಿ ಆಚರಣೆಯಿಂದ ಏನು ಲಾಭ ಎಲ್ಲವನ್ನು ಸೂಕ್ಷ್ಮವಾಗಿ ನೋಡೋಣ ಬನ್ನಿ, 

Image

ಚಾಲಕ

ಮಾನವನ ಬದುಕು ಕೊಡು ಕೊಳ್ಳುಗೆಯ ಓಟ. ಪರಾವಲಂಬನೆಯಿಲ್ಲದೆ ಮಾನವನು ಜೀವನದಲ್ಲಿ ಸಫಲನಾಗಲಾರ. ಪ್ರಕೃತಿಯ ಅನುಕೂಲವಿದ್ದರೆ, ಪರರ ಸಹಕಾರ ಒದಗಿದರೆ ಬಾಳು ಬಂಗಾರವಾಗುತ್ತದೆ. ”ಇವರಿರಬೇಕು” ಈ ಲೇಖನ ಮಾಲಿಕೆಯಲ್ಲಿ ಮಾನವನ ಬದುಕಿಗೆ ಯಾರೆಲ್ಲ ಪೂರಕರಾಗುತ್ತಾರೆ, ಅವರೆಲ್ಲರ ನೆರವಿನ ಭುಜ ನಮಗೆ ಹೇಗೆ ಕೂಡಿ ಬರುತ್ತದೆ ಎಂಬದನ್ನು ಚಿಂತನೆ ಮಾಡಲು ಒಂದು ಕಿರು ಪ್ರಯತ್ನ.

Image

ಖರ್ಜೂರ ಉಂಡೆ

Image

ಸಣ್ಣಗೆ ಹೆಚ್ಚಿದ ಖರ್ಜೂರ, ಗೋಡಂಬಿ ತುಂಡು, ಬಾದಾಮಿ ತುಂಡುಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಸಕ್ಕರೆ ಹಾಕಿ ಕದಡಿ ನಂತರ ಮಿಶ್ರಣ ಮಾಡಿರಿಸಿದ ಸಾಮಗ್ರಿ ಸೇರಿಸಿ ತಿರುವಿ ಒಲೆಯಿಂದ ಕೆಳಗಿರಿಸಿ ಉಂಡೆ ಕಟ್ಟಿ. ಇದು ಬಹಳ ಪೌಷ್ಟಿಕಾಂಶಗಳಿಂದ ಕೂಡಿದ ಉಂಡೆ.

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಖರ್ಜೂರ ೨ ಕಪ್, ಗೋಡಂಬಿ ತುಂಡು ೧/೨ ಕಪ್, ಒಣ ಕೊಬ್ಬರಿ ತುರಿ ೧/೨ ಕಪ್, ಬಾದಾಮಿ ತುಂಡು ೧/೨ ಕಪ್, ಸಕ್ಕರೆ ಪುಡಿ ೧/೨ ಕಪ್, ತುಪ್ಪ ೧/೪ ಕಪ್, ಏಲಕ್ಕಿ ಪುಡಿ ೧ ಚಮಚ.

ಭ್ರಷ್ಟಾಚಾರ ನಿಗ್ರಹದತ್ತ ಸುಪ್ರೀಂ ಸ್ವಾಗತಾರ್ಹ ತೀರ್ಪು

ಸರಕಾರಿ ನೌಕರರು ಭ್ರಷ್ಟಾಚಾರ ಎಸಗಿದ ಎಲ್ಲ ಪ್ರಸಂಗಗಳಲ್ಲಿಯೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಪ್ರಾಥಮಿಕ ತನಿಖೆ ಕಡ್ಡಾಯವಲ್ಲ, ಸರಕಾರಿ ಉದ್ಯೋಗಿ ಭ್ರಷ್ಟಾಚಾರ ನಡೆಸಿರುವುದಕ್ಕೆ ಬಲವಾದ ಸಾಕ್ಷ್ಯಗಳಿದ್ದರೆ, ಆತ ಎಸಗಿರುವ ಅಪರಾಧದ ಕುರಿತು ಮೇಲಧಿಕಾರಿಗೆ ವಿವರ, ಸ್ಪಷ್ಟ ಮಾಹಿತಿ ಲಭ್ಯವಿದ್ದು, ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದರೆ ಪ್ರಾಥಮಿಕ ತನಿಖೆಯ ಅಗತ್ಯವಿಲ್ಲದೆ ಕ್ರಿಮಿನಲ್ ಪ್ರ

Image

ಮುಂಬಯಿಯ ತಂಗಿಯೊಬ್ಬರ ಬದುಕಿನ ಒಂದು ದಿನದ ದಿನಚರಿ

ಇವು ಅಕ್ಷರಗಳು ಭಾವನೆಗಳು ಮಾತ್ರವಲ್ಲ. ಇದು ನಮ್ಮ ಆತ್ಮಾವಲೋಕನ ಮತ್ತು ಮುಂದಿನ ನಮ್ಮ ನಡವಳಿಕೆಯ ಪರಿವರ್ತನೆಗಾಗಿ ಮತ್ತು ಸಮಾಜದಲ್ಲಿ ನಮ್ಮ ಕನಿಷ್ಠ ಕರ್ತವ್ಯದ ನಿರ್ವಹಣೆಗಾಗಿ...

Image

ಸ್ಟೇಟಸ್ ಕತೆಗಳು (ಭಾಗ ೧೨೪೩) - ಮೌನ ಬೇಡ

ನೀನು ಅರ್ಥಮಾಡಿಕೊಳ್ಳಬೇಕು ಕಾಲ ತುಂಬಾ ಬದಲಾಗಿದೆ. ಮೌನದಿಂದ ಅದ್ಭುತವನ್ನು ಸಾಧಿಸಬಹುದು ಅಂತ ನೀನು ಅಂದುಕೊಳ್ಳುತ್ತಾ ಇರೋದು ತಪ್ಪು ಅಂತ ನಾನಂದುಕೊಂಡಿದ್ದೇನೆ. ಪ್ರಸ್ತುತ ಕಾಲದಲ್ಲಿ ಮನ ಬಿಚ್ಚಿ ಮಾತನಾಡಬೇಕು. ನಿನ್ನ ಮನಸಿನ ಒಳಗಿರೋದನ್ನ ಎದುರುಗಿರುವ ವ್ಯಕ್ತಿಯಲ್ಲಿ ತಿಳಿಸಿ ಹೇಳಿ ಬಿಡಬೇಕು. ಆಗಾಗ ಒಂದಷ್ಟು ಸಮಸ್ಯೆಗಳು ಖಂಡಿತವಾಗಿಯೂ ಪರಿಹಾರವಾಗುತ್ತೆ.

Image