ಸ್ಟೇಟಸ್ ಕತೆಗಳು (ಭಾಗ ೧೨೪೩) - ಮೌನ ಬೇಡ

ನೀನು ಅರ್ಥಮಾಡಿಕೊಳ್ಳಬೇಕು ಕಾಲ ತುಂಬಾ ಬದಲಾಗಿದೆ. ಮೌನದಿಂದ ಅದ್ಭುತವನ್ನು ಸಾಧಿಸಬಹುದು ಅಂತ ನೀನು ಅಂದುಕೊಳ್ಳುತ್ತಾ ಇರೋದು ತಪ್ಪು ಅಂತ ನಾನಂದುಕೊಂಡಿದ್ದೇನೆ. ಪ್ರಸ್ತುತ ಕಾಲದಲ್ಲಿ ಮನ ಬಿಚ್ಚಿ ಮಾತನಾಡಬೇಕು. ನಿನ್ನ ಮನಸಿನ ಒಳಗಿರೋದನ್ನ ಎದುರುಗಿರುವ ವ್ಯಕ್ತಿಯಲ್ಲಿ ತಿಳಿಸಿ ಹೇಳಿ ಬಿಡಬೇಕು. ಆಗಾಗ ಒಂದಷ್ಟು ಸಮಸ್ಯೆಗಳು ಖಂಡಿತವಾಗಿಯೂ ಪರಿಹಾರವಾಗುತ್ತೆ. ನೀನು ನಿನ್ನೊಳಗೆ ವಿಚಾರಗಳನ್ನು ಇಟ್ಟುಕೊಂಡಾಗ ಎದುರಿದ ವ್ಯಕ್ತಿ ಅವನಿಗೆ ಇಷ್ಟದ ರೀತಿಯಲ್ಲಿ ಆಲೋಚನೆಯನ್ನು ಮಾಡಿಬಿಡಬಹುದು. ನಿನ್ನ ಕಷ್ಟದ ದಿನಗಳು ನೀನು ಅನುಭವಿಸುತ್ತಿರುವ ವೇದನೆ. ನಿನ್ನ ದೈನಂದಿನದ ಸ್ಥಿತಿಗತಿ ಎಲ್ಲವನ್ನು ವಿವರಿಸಿ ಹೇಳಿದಾಗ ಮಾತ್ರ ಆತನಿಗೂ ವಸ್ತು ಸ್ಥಿತಿಯ ಅರ್ಥವಾಗುತ್ತೆ. ಇಲ್ಲದಿದ್ದರೆ ಭ್ರಮಾ ಲೋಕದಲ್ಲಿ ದಿನದೊಡುವ ಪರಿಸ್ಥಿತಿಯೂ ಬರಬಹುದು. ಹಾಗಾಗಿ ಮೌನವಾಗಿದ್ದು ಬಿಟ್ಟು ಸಾಧಿಸುವುದೇನು ಇಲ್ಲ. ನಿನ್ನ ಕನಸುಗಳನ್ನು ಹಂಚಿಕೊಳ್ಳಬೇಡ ಆದರೆ ವಸ್ತು ಸ್ಥಿತಿಯನ್ನು ಮನ ಬಿಚ್ಚಿ ಮಾತನಾಡಿ ಬಿಡು. ಖಂಡಿತ ಒಳ್ಳೆಯದಾಗುತ್ತೆ.
ತುಂಬಾ ಪ್ರೀತಿಸುವ ಅಜ್ಜ ಬೆನ್ನು ತಟ್ಟಿ ಇಷ್ಟು ಮಾತನಾಡಿ ಬಿಟ್ರು. ನಾನು ಯೋಚನೆಯಲ್ಲಿಯೇ ದಿನದೊಡುತ್ತಿದ್ದನ್ನು ಕಂಡು ನೇರವಾಗಿ ಬಂದು ಮಾತನಾಡಿದರು. ಅವರ ಈ ಮಾತು ಒಂದಷ್ಟು ಬದಲಾವಣೆಯನ್ನು ತರಬಹುದು ಅನ್ನುವ ಯೋಚನೆಯನ್ನು ಇಟ್ಟುಕೊಂಡು ಹೆಜ್ಜೆ ಮುಂದೆ ಇರಿಸಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ