ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪರೀಕ್ಷೆಯ ಸಿದ್ಧತೆಗಳು

ಪ್ರತೀ ವರ್ಷದಂತೆಯೇ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆಯ ಸೀಜನ್ ಬಂತು. ಶೈಕ್ಷಣಿಕ ವರುಷದ ಕೊನೆಗೆ ಬರುವ ಪರೀಕ್ಷೆಗೆ ಶಿಕ್ಷಕರು ಅಥವಾ ಉಪನ್ಯಾಸಕರು ಆ ವರ್ಷದ ಮೊದಲ ದಿನದಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುತ್ತಾರೆ. ಆದರೂ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ, ಆತಂಕ ಮತ್ತು ಮಾನಸಿಕ ಒತ್ತಡ ಇರುವುದು ಸಹಜ.

Image

ಮಹಾಕುಂಭವೆಂಬ ಅದ್ಭುತ !

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಒಂದೂವರೆ ತಿಂಗಳ ಹಿಂದೆ ಪ್ರಾರಂಭವಾದ ಮಹಾ ಕುಂಭಮೆಳವು ಸಂಪನ್ನಗೊಂಡಿದೆ. ಕೋಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ. ವಿಶೇಷ ಗ್ರಹಗತಿಯಿಂದಾಗಿ ಈ ಬಾರಿಯ ಕುಂಭಮೇಳವು ೧೪೪ ವರ್ಷಗಳಿಗೊಮ್ಮೆ ಬರುವ ಅಪರೂಪದ ಮಹಾಕುಂಭವಾದ ಕಾರಣ ಹೆಚ್ಚು ಮಹತ್ವದ್ದೆನಿಸಿತು.

Image

ಸ್ಟೇಟಸ್ ಕತೆಗಳು (ಭಾಗ ೧೨೪೫) - ಕೇಳು

ಇನ್ನಾದರೂ ಅರ್ಥ ಮಾಡಿಕೋ, ಜಗತ್ತಿನಲ್ಲಿ ಹೇಳದೆ ಕೊಡುವವನು ಭಗವಂತ ಮಾತ್ರ ನಾವು ನಮಗೆ ಅಗತ್ಯ ಇರುವುದನ್ನ ಕೇಳಿ ಪಡೆದುಕೊಳ್ಳಲೇಬೇಕು, ನೀನು ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದೀಯ ಕೇಳುವ ಸಾಮರ್ಥ್ಯವು ನಿನ್ನಲ್ಲಿದೆ ಅಂದಾಗ ಕೇಳದೆ ಇರುವುದು ನಿನ್ನ ತಪ್ಪು.

Image

ಪುಸ್ತಕನಿಧಿ : ಮಾರ್ಚ್ 2025ರ ಮಯೂರ ಮಾಸಿಕ ಸಂಚಿಕೆ

ಚಿತ್ರ

ಇದೀಗ ಮಯೂರ ಮಾಸಿಕದ ಮಾರ್ಚ್ 2025ರ ಸಂಚಿಕೆಯನ್ನು ತಿರುವಿ ಹಾಕಿದೆ. ಕೆಲವು ಕಥೆಗಳನ್ನು ಓದಿದೆ. ಕಥೆಗಳನ್ನು ಓದುವುದರ ಲಾಭ ಎಂದರೆ  ಬೇರೆಯವರ ಜೀವನದ ಪರಿಸ್ಥಿತಿಯನ್ನು ಅದರ ನೋವಿಲ್ಲದೆ ನಾವು  ತಿಳಿದಂತಾಗುತ್ತದೆ.

ಪದ್ದಮ್ಮನ ಮೂಗುತಿ ಎಂಬ ಕತೆಯಲ್ಲಿ ಒಂದು ಸಾವಿನ ಸಂಪೂರ್ಣ ಸಂಗತಿ ಇದೆ. ಹಾಗೆಯೇ ಅಪ್ಪಂದಿರ ದಿನಾಚರಣೆ ಎಂಬ ಕತೆಯಲ್ಲಿ ಟಿವಿ ಕಾರ್ಯಕ್ರಮವೆಂದರೆ ಹಿನ್ನೆಲೆಯಲ್ಲಿ ಒಬ್ಬ ಅಂದುಕೊಳ್ಳುವುದು ಏನೆಂದರೆ 'ಇವರೆಲ್ಲ ನನ್ನಪ್ಪ ಹಾಗೆ ಹೀಗೆ ಎಂದು ಹೋಗಳುತ್ತಿದ್ದಾರೆ. ನನಗೋ ನನ್ನಪ್ಪನು ಹೇಗೆ ಇರಬಾರದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾನೆ!'. ಈ ಕತೆಯಲ್ಲೂ ನಮಗೆ ತುಂಬಾ ಅನುಭವ ದಕ್ಕುವುದು.

ನಿಷ್ಪಾಪಿ ಸಸ್ಯಗಳು (ಭಾಗ ೮೯) - ಮಾರ್ನಿಂಗ್ ಗ್ಲೋರಿಯಾ

ಕಳೆದ ವಾರ ನೀವು ಕಾಡು ಉತ್ತರಾಣಿಯ ಪರಿಚಯ ಮಾಡಿಕೊಂಡಿರುವಿರಿ. ಇಂದು ನಾವು ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿರುವ ಬೊಳಿಯೇಲ ಮಲೆ ಎಂಬ ಗುಡ್ಡಕ್ಕೆ ಹೋಗೋಣ. ಈ ಗುಡ್ಡದಲ್ಲಿ ನಮ್ಮ ಹಿರಿಯರ ಕಾಲದಲ್ಲಿ ಹುಲಿಗಳಿದ್ದುವಂತೆ! ಈಗ ಹುಲಿಗಳಿಲ್ಲ. ಹಾಗಾಗಿ ಕಾಡೂ ಇಲ್ಲ. ಗುಡ್ಡದ ಕೆಳಭಾಗಗಳು ಬೋಳಾಗಿವೆ. ಒಂದಿಷ್ಟು ಕುರುಚಲು ಗಿಡಗಳನ್ನು ಮಾತ್ರ ಕಾಣುವಿರಿ. ಬನ್ನಿ...

Image

ನಾವೆಲ್ಲ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆಯೆ ?

ಪ್ರಸಂಗ 1 : ನಮ್ಮ ಭಾಗದ ಒಂದು ಊರಿನಲ್ಲಿ ಕಾರ್ ನಲ್ಲಿ ಹೊರಟಿದ್ದೆ. ಇಬ್ಬರು ಬೈಕ್ ಚಾಲಕರು ಅಕ್ಷರಶ: ಮಧ್ಯ ರಸ್ತೆಯಲ್ಲಿಯೇ ಮಾತನಾಡುತ್ತಾ ಅಕ್ಕಪಕ್ಕ ಹೊರಟಿದ್ದರು. ಕಾರು ಮುಂದೆ ಹೋಗಲು ಜಾಗವೂ ಇರಲಿಲ್ಲವಾದ್ದರಿಂದ ಅವರನ್ನು ಎಚ್ಚರಿಸಲು ಹಾರ್ನ್ ಹಾಕಿದೆ. ಅದರಲ್ಲಿಯೇ ಒಬ್ಬ ತಿರುಗಿ ನೋಡಿ ಬಾಯಿಗೆ ಸಿಕ್ಕಂತೆ ಮಾತನಾಡಿ "ಪಕ್ಕಕ್ಕ ಜಾಗ ಐತಲ್ ಹೋಗ್" ಎಂದ.

Image