ಒಂದು ಗಝಲ್
ಕವನ
ಮೋಹವೆನುವ ಮಾಯೆಯೇ ಭ್ರಮೆಯಂತಾಗಿದೆ ಇಂದು
ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಇಂದು
ಸುಳಿಗೆ ಸಿಲುಕಿದ ದೋಣಿಯಲ್ಲಿಹ ಅಂಬಿಗನಂತೇ ಬದುಕು
ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಇಂದು
ಪ್ರೀತಿಯು ಹಿಮಾಲಯದ ಮಂಜಿನಲ್ಲಿ ಬಿದ್ದವರಂತೆ ಆಗಿದೆ
ಪ್ರೇಮದಾಳಕೆ ನಿಜವಾಗಿಯೂ ಕಣ್ಣಿಲ್ಲದಂತಾಗಿದೆ ಇಂದು
ವಾತ್ಸಲ್ಯವೆನ್ನುವ ಪದಗಳಿಗಿಂದು ಅರ್ಥವಾದರೂ ಎಲ್ಲಿದೆ
ಗೋರಿಯೊಳಗೆ ಸೇರಿದಂತ ಮಂದಿಯಂತಾಗಿದೆ ಇಂದು
ಬಾಳಿನ ಪಯಣವು ದುರಂತದಲ್ಲಿ ಮುಗಿಯುವುದೇ ಈಶಾ
ಬಾಳೆನ್ನುವುದು ಚಿತ್ತಾರವಿಲ್ಲದ ಪಯಣದಂತಾಗಿದೆ ಇಂದು
-ಹಾ ಮ ಸತೀಶ ಬೆಂಗಳೂರು
ಚಿತ್ರ್
