ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಳೆಕಾಯಿ ಬೆಂದಿ

Image

ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು, ಬೆಲ್ಲ, ಉಪ್ಪು, ಖಾರದ ಪುಡಿ, ಹುಣಸೆ ಹಣ್ಣು ಸೇರಿಸಿ ಬೇಯಿಸಿ. ತೆಂಗಿನ ತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಬೇಯಿಸಿದ ಬಾಳೆಕಾಯಿಗೆ ಹಾಕಿ ಬೆರೆಸಿ ಕುದಿಸಿ. ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಇದು ಸಾಂಬಾರಿಗಿಂತ ಸ್ವಲ್ಪ ದಪ್ಪವಾಗಿರಬೇಕು. ಅನ್ನ, ದೋಸೆ, ರೊಟ್ಟಿ ಜೊತೆ ಸವಿಯಿರಿ.

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಬಾಳೆಕಾಯಿ ೨ ಕಪ್, ಜೀರಿಗೆ ೧ ಚಮಚ, ಅಚ್ಚ ಖಾರದ ಪುಡಿ ೧ ಚಮಚ, ಬೆಲ್ಲ ೧ ಚಮಚ, ಹುಳಿ ಹುಣಸೆ ಬೀಜ ಗಾತ್ರ, ತೆಂಗಿನ ತುರಿ ೨ ಕಪ್, ಹಸಿಮೆಣಸು ೧, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ ೧ ಚಮಚ, ಸಾಸಿವೆ ೧ ಚಮಚ, ಕರಿಬೇವಿನ ಎಲೆ ೧ ಎಸಳು.

ಸ್ಟೇಟಸ್ ಕತೆಗಳು (ಭಾಗ ೧೨೨೭) - ಕಂಡ ಬದುಕು

ಸೈಕಲ್ ನ ಚಕ್ರ ತಿರುಗುತ್ತಾ ಇದೆ, ಆತನ ದೇಹದಲ್ಲಿ ಬೆವರು ಎದ್ದುನಿಂತು ನೆಲವನ್ನ ಸ್ಪರ್ಶಿಸ್ತಾ ಇದೆ, ಆತನ ಮುಖದಲ್ಲಿ ಆಯಾಸ ಕಾಣುತ್ತಿಲ್ಲ, ಕಣ್ಣುಗಳು ಮಿನುಗುತ್ತಿವೆ, ತುಟಿ ನಗುವನ್ನು ಕಳೆದುಕೊಂಡಿಲ್ಲ, ಯಾವುದೋ ಸಂಭ್ರಮದ ಹಾಡನ್ನು ಗುನುಗುತ್ತಾ ಚಲಿಸುತ್ತಿದ್ದಾನೆ.

Image

ಉತ್ಕಟ ಸಾಹಿತ್ಯ ಪ್ರೇಮಿಯಾಗಿದ್ದರು ಜಿ. ಕೃಷ್ಣಪ್ಪ

ಹಿರಿಯರಾದ ಬೇಂದ್ರೆ ಕೃಷ್ಣಪ್ಪನವರ ಸಾವಿನ ಸುದ್ದಿ ನಿಜಕ್ಕೂ ಬರಸಿಡಿಲಿನಂತೆ ಎರಗಿದೆ. ಕಳೆದ ವಾರವಷ್ಟೇ ಅವರ ಜೊತೆ ಮಾತನಾಡಿ ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಅಷ್ಟರಲ್ಲಿ ಅವರು ನಿಜದ ಮನೆಗೆ ತರಳಿದ್ದಾರೆ. ನನಗೆ ಅವರ ಜೊತೆಗೆ ಮೂವತ್ತು ವರ್ಷಗಳ ಒಡನಾಟ. ನನ್ನ ಮಾವನ ಮಿತ್ರರೊಬ್ಬರು ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೂಲಕ ನನಗೆ ಕೃಷ್ಣಪ್ಪನವರ ಪರಿಚಯವಾಯಿತು.

Image

ಶಿಲಾಯುಗದತ್ತ ಅಮೇರಿಕದ ಆಳುಗರು?

ಇದು ಗೆಲುವಿನ ಅಮಲು ತಂದಿತ್ತ ಧಾರ್ಷ್ಟ್ಯವೇ ಅಥವಾ ಅಸಹಿಷ್ಣುತೆಯ ಪರಮಾವಧಿಯೇ? ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು.

Image

ಉನ್ನತ ಶಿಕ್ಷಣದಲ್ಲಿ ಜಾತಿ ಮತ್ತು ಭ್ರಷ್ಟಾಚಾರ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಕ್ಕಿಳಿದ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯಗಳು.

Image

ಸ್ಟೇಟಸ್ ಕತೆಗಳು (ಭಾಗ ೧೨೨೬) - ಮಾರಾಟ

ಆಸೆಗಳು ಮಾರಾಟವಾಗಲೇಬೇಕು. ಕಣ್ಣು ಬಯಸುತ್ತಿದೆ. ಹೊಸ ಹೊಸ ವಸ್ತುಗಳನ್ನ, ಸಿಹಿಗಳನ್ನ, ವಿಷಯಗಳನ್ನ, ಆದರೆ ಕಿಸೆಯೊಳಗೆ ಕೈ ಹಾಕಿದಾಗ ಕೈಗೆ ಮೌನವೊಂದೇ ಉತ್ತರ ಸಿಗುತ್ತಿದೆ. ಇಲ್ಲಿ ಆಸೆಗಳನ್ನ ಮಾರಾಟ ಮಾಡಿ ಮುಂದೆ ಹೆಜ್ಜೆ ಇಡ್ಲೇಬೇಕು. ಇಲ್ಲವಾದರೆ ನೋವೊಂದೇ ಬದುಕಿನ ದಾರಿಯಾಗುತ್ತದೆ. ಜಾತ್ರೆಯಲ್ಲಿ ಎಲ್ರೂ ಮಾರಾಟಕ್ಕೆಂದೇ ಬಂದವರು.

Image

ಭಾರತದ ‘ನಯಾಗರ’ ಖ್ಯಾತಿಯ ಹೊಗೆನಕಲ್ ಜಲಪಾತ

ಭಾರತದ "ನಯಾಗರ ಜಲಪಾತ" ವೆಂದೇ ಸುಪ್ರಸಿದ್ಧವಾಗಿರುವ ಈ ಜಲಪಾತವು, ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಮೇಲಗಿರಿ ಬೆಟ್ಟದ ಕಾಡು ಪ್ರದೇಶದಲ್ಲಿರುವ ಸ್ಥಳ. ಇಲ್ಲಿ ಕಾವೇರಿ ನದಿಯು ಬೆಟ್ಟಗಳಿಂದ ಇಳಿದು ಮೈದಾನ ಪ್ರವೇಶಿಸುವುದರಿಂದ.

Image