ಕನ್ನಡ ಪತ್ರಿಕಾ ಲೋಕ (ಭಾಗ ೧೯೫) - ವಿಶ್ವವಾರಿಧಿ

ವಿಶ್ವನಾಥ ಬಿ. ಸಂಪಾದಕತ್ವದ ‘ವಿಶ್ವವಾರಿಧಿ’ ದಿನಪತ್ರಿಕೆ
ಕಳೆದ ಐದು ವರ್ಷಗಳಿಂದ ತುಮಕೂರು ಜಿಲ್ಲೆಯಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆ ‘ವಿಶ್ವವಾರಿಧಿ’ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿ ೮ ಪುಟಗಳನ್ನು ಹೊಂದಿದ್ದು, ೨ ಪುಟಗಳು ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗುತ್ತಿದೆ. ಪತ್ರಿಕೆಯು ಕರ್ನಾಟಕ ರಾಜ್ಯಾದ್ಯಂತ ಪ್ರಸಾರ ಹೊಂದಿದ್ದು, ತುಮಕೂರು ಜಿಲ್ಲೆಯಲ್ಲಿ ಕಚೇರಿ ಹೊಂದಿದೆ.
ಮುರಳಿ ಪ್ರಸಾದ್ ಅವರು ಪತ್ರಿಕೆಯ ಮುದ್ರಕರು ಮತ್ತು ಪ್ರಕಾಶಕರಾಗಿದ್ದಾರೆ. ಪತ್ರಿಕೆಯನ್ನು ಬೆಂಗಳೂರಿನ ಸ್ವರ್ಣ ಗ್ರಾಫಿಕ್ಸ್ ನಲ್ಲಿ ಮುದ್ರಿಸಲಾಗುತ್ತಿದೆ. ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ವಿಶೇಷ ಸುದ್ದಿಗಳು ಕಂಡು ಬರುತ್ತಿವೆ. ಪತ್ರಿಕೆಯಲ್ಲಿ ಸಂಪಾದಕೀಯ ಬರಹ ಇದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೫.೦೦ ಆಗಿದ್ದು, ಚಂದಾ ದರದ ಬಗ್ಗೆ ಯಾವುದೇ ಮಾಹಿತಿ ಇಲ್ಲ.