ಬಾಳೆಕಾಯಿ ಬೆಂದಿ

ಬಾಳೆಕಾಯಿ ಬೆಂದಿ

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಬಾಳೆಕಾಯಿ ೨ ಕಪ್, ಜೀರಿಗೆ ೧ ಚಮಚ, ಅಚ್ಚ ಖಾರದ ಪುಡಿ ೧ ಚಮಚ, ಬೆಲ್ಲ ೧ ಚಮಚ, ಹುಳಿ ಹುಣಸೆ ಬೀಜ ಗಾತ್ರ, ತೆಂಗಿನ ತುರಿ ೨ ಕಪ್, ಹಸಿಮೆಣಸು ೧, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ ೧ ಚಮಚ, ಸಾಸಿವೆ ೧ ಚಮಚ, ಕರಿಬೇವಿನ ಎಲೆ ೧ ಎಸಳು.

ತಯಾರಿಸುವ ವಿಧಾನ

ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು, ಬೆಲ್ಲ, ಉಪ್ಪು, ಖಾರದ ಪುಡಿ, ಹುಣಸೆ ಹಣ್ಣು ಸೇರಿಸಿ ಬೇಯಿಸಿ. ತೆಂಗಿನ ತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಬೇಯಿಸಿದ ಬಾಳೆಕಾಯಿಗೆ ಹಾಕಿ ಬೆರೆಸಿ ಕುದಿಸಿ. ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಇದು ಸಾಂಬಾರಿಗಿಂತ ಸ್ವಲ್ಪ ದಪ್ಪವಾಗಿರಬೇಕು. ಅನ್ನ, ದೋಸೆ, ರೊಟ್ಟಿ ಜೊತೆ ಸವಿಯಿರಿ.

-ಸಹನಾ ಕಾಂತಬೈಲು, ಮಡಿಕೇರಿ