ಕರಪತ್ರಗಳು ಖೈದಾಗಿರುವ ಕಾಲದಲ್ಲಿ ...
ಕವನ
ಸೂರ್ಯನು ಸೆರೆಯಲ್ಲಿರುವ ಲೋಕದಲಿ
ಚಂದಿರನು ಪ್ರತಿಫಲಿಸುವುದು
ಬೆಳಕನ್ನಲ್ಲ,
ಕಾರ್ಗತ್ತಲ ವೈಭವವನ್ನು...
ಕರಪತ್ರಗಳು ಖೈದಾಗಿರುವ ಕಾಲದಲ್ಲಿ
ಸುಮ್ಮಾನದ ಕವಿಗಳು ಬರೆವುದು
ಕವನವನ್ನಲ್ಲ,
ತಮ್ಮ ತಮ್ಮ ಖಾಯಿಲೆಯ ವಿವರಗಳನ್ನು ..
ಘೋಷಣೆಗಳು ನಿಷೇಧವಾಗಿರುವ ದೇಶದಲ್ಲಿ
ಸುಭಗರು ಪಲುಕುವುದು
ಸಂಗೀತವನ್ನಲ್ಲ,
ಸಂಗಾತವಿಲ್ಲದ ಸಂಗತಿಗಳನ್ನು ..
ನ್ಯಾಯವಿಲ್ಲದ ಕಾನೂನನ್ನು
ಮಾನ್ಯಮಾಡುವ ಮೆರವಣಿಗೆಗಳು
ಪ್ರತಿರೋಧವಲ್ಲ,
ಸುಂದರವಾದ ಆತ್ಮವಂಚನೆ ..
-ಶಿವಸುಂದರ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
