ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೩೦) - ಕಾಯುವಿಕೆ

ಮಣ್ಣನ್ನ ಸಾಲು ಮಾಡಿ ತರಕಾರಿ ಗಿಡವನ್ನು ಬೆಳೆಸಬೇಕು ಅನ್ನುವ ಯೋಚನೆ ಇಟ್ಟುಕೊಂಡು ಬೇರೆ ಬೇರೆ ತರಕಾರಿ ಬೀಜಗಳನ್ನ ಹಾಕಿದ್ದೆ. ಬೀಜಗಳು ಮೇಲೆ ಬಂದು ದೊಡ್ಡ ಗಿಡಗಳಾಗಿ ಬೆಳೆದು ವಿವಿಧ ತರಕಾರಿಗಳನ್ನ ನೋಡುವ ಖುಷಿಯನ್ನ ಅನುಭವಿಸಬೇಕು ಅನ್ನೋದು ನನ್ನ ಆಸೆ. ಪ್ರತಿದಿನ ಬೆಳಗ್ಗೆ ಅದಕ್ಕೆ ನೀರುಣಿಸುವ ಕೆಲಸವನ್ನು ಮಾಡ್ತಾ ಇದ್ದೆ.

Image

ಕೃತಿ ವಿಮರ್ಶೆಯ ನಿವೇದನೆಯಲ್ಲಿ…

‘ನಿವೇದನೆ' ಯೆಂಬುದು ಕವನ ಸಂಕಲನವೊಂದರ ಹೆಸರು. ಬಂಟ್ವಾಳ ತಾಲೂಕು ಹದಿನೆಂಟನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಹಳ ಯಶಸ್ವಿಯಾಗಿ ಸಂಘಟಿಸಿದ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಯರಾಮ ಡಿ. ಪಡ್ರೆಯವರು ಬರೆದ ಚೊಚ್ಚಲ ಕವನ ಸಂಕಲನವಿದು.

Image

ಆಯುರ್ವೇದ ದರ್ಶನ

ಪುಸ್ತಕದ ಲೇಖಕ/ಕವಿಯ ಹೆಸರು
ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.85/-

ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಸೂರ್ಯಾಸ್ತದ ಬಳಿಕ ಮಹಿಳಾ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಸಂಜೆಯ ಬಳಿಕ ಮಹಿಳೆಯರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತೇ ವಿನಃ ಯಾವುದೇ ಆದೇಶ ನೀಡಿರಲಿಲ್ಲ.

Image

ಈ ಭೂಮಿಗೆ ಎಲ್ಲರೂ ವಲಸಿಗರೇ...

ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ ಬೇರೆ ದೇಶದ ಜನರನ್ನು ಆಚೆಗೆ ಅಟ್ಟುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಭಾರತದ 104 ಜನರನ್ನು ಬಂಧಿಸಿ ಕೈಗೆ ಕೋಳ ತೊಡಿಸಿ ಅವರದೇ ಸೈನಿಕ ವಿಮಾನದಲ್ಲಿ  ಕರೆತಂದು ಭಾರತಕ್ಕೆ ಬಿಡಲಾಯಿತು. ಇದನ್ನು ನೋಡಿದಾಗ ಒಮ್ಮೆ ಕರುಳು ಚುರ್ ಎಂದಿತು.

Image

ಆರೋಗ್ಯಕರ ಸ್ಯಾಂಡ್ ವಿಚ್

Image

ಒಂದು ಬ್ರೆಡ್ ಸ್ಲೈಸ್ ಮೇಲೆ ಬೀಟೂರೂಟ್ ತುಂಡು, ಅದರ ಮೇಲೆ ಬಟಾಟೆ ತುಂಡು, ಅದರ ಮೇಲೆ ಟೊಮೆಟೊ ಮತ್ತು ಮುಳ್ಳು ಸೌತೆ ಇಡಿ. ಮೇಲಿನಿಂದ ಕ್ಯಾರೆಟ್ ತುರಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್ ಮೇಲೆ ಖಾರವಾದ ಹಸಿರು ಚಟ್ನಿ ಹರಡಿ. ತರಕಾರಿ ಹರಡಿದ ಬ್ರೆಡ್ ಸ್ಲೈಸ್ ಮೇಲೆ ಚಟ್ನಿ ಹರಡಿದ ಬ್ರೆಡ್ ಸ್ಲೈಸ್ ಇಟ್ಟು ತಿನ್ನಿರಿ. ಇದು ಬಹಳ ಆರೋಗ್ಯಕರ.

ಬೇಕಿರುವ ಸಾಮಗ್ರಿ

ಬ್ರೆಡ್ ಸ್ಲೈಸ್ ೨, ಬೇಯಿಸಿ ಹಾಳೆಯಾಕಾರದಲ್ಲಿ ಕತ್ತರಿಸಿದ ಬೀಟ್ ರೂಟ್ ೧, ಬೇಯಿಸಿ ಹಾಳೆಯಾಕಾರದಲ್ಲಿ ಕತ್ತರಿಸಿದ ಬಟಾಟೆ ೧, ಹೆಚ್ಚಿದ ಟೊಮೆಟೊ ೧, ಮುಳ್ಳು ಸೌತೆ ವೃತ್ತಾಕಾರದ ತುಂಡುಗಳು ೮, ಕ್ಯಾರೆಟ್ ತುರಿ ೩ ಚಮಚ, ಹಸಿರು ಚಟ್ನಿ ೩ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೧೨೨೯) - ನಡತೆ-ನಡಿಗೆ

ಮರಳಿನ ಮೇಲೆ ಮತ್ತೆ ಮತ್ತೆ ನಡೆಯುತ್ತಿದ್ದ. ಆತನಿಗೆ ಅದೊಂದು ತುಂಬಾ ಆಸೆ. ತನ್ನ ಹೆಜ್ಜೆಗಳನ್ನ ನೋಡುಗರೆಲ್ಲರಿಗೆ ಕಾಣುವ ಹಾಗೆ ಉಳಿಸಿ ಹೋಗಬೇಕು ಅಂತ. ಆತ ಬೆಳಗಿನಿಂದ ಸಂಜೆಯವರೆಗೆ ದಿನವೂ ನಡೆದು ನಡೆದು ಸುಸ್ತಾದನೇ ವಿನಃ ಆತನ ಹೆಜ್ಜೆಗಳ ಗುರುತು ಯಾರಿಗೂ ಸಿಗಲೇ ಇಲ್ಲ.

Image

ಖುಷಿ

ಖುಷಿ 4 ವರ್ಷ ಪ್ರಾಯದ ಹುಡುಗಿ. ಬಹಳ ಪ್ರಬುದ್ಧಳು ಹಾಗೂ ಚೂಟಿ. ಆಕೆಗೆ ತಂದೆ ಎಂದರೆ ಪಂಚಪ್ರಾಣ ಸಂಜೆಯಾದರೆ ಸಾಕು ತನ್ನರಮನೆಯ ಮರದ ಗೇಟಿನ ಮುಂದೆ ರಾಮನ ಭೇಟಿಗೆ ಶಬರಿ ಕಾಯುವಂತೆ ಕಾಯುತ್ತಿದ್ದಳು.

Image