ಆರೋಗ್ಯಕರ ಸ್ಯಾಂಡ್ ವಿಚ್

ಬೇಕಿರುವ ಸಾಮಗ್ರಿ
ಬ್ರೆಡ್ ಸ್ಲೈಸ್ ೨, ಬೇಯಿಸಿ ಹಾಳೆಯಾಕಾರದಲ್ಲಿ ಕತ್ತರಿಸಿದ ಬೀಟ್ ರೂಟ್ ೧, ಬೇಯಿಸಿ ಹಾಳೆಯಾಕಾರದಲ್ಲಿ ಕತ್ತರಿಸಿದ ಬಟಾಟೆ ೧, ಹೆಚ್ಚಿದ ಟೊಮೆಟೊ ೧, ಮುಳ್ಳು ಸೌತೆ ವೃತ್ತಾಕಾರದ ತುಂಡುಗಳು ೮, ಕ್ಯಾರೆಟ್ ತುರಿ ೩ ಚಮಚ, ಹಸಿರು ಚಟ್ನಿ ೩ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಒಂದು ಬ್ರೆಡ್ ಸ್ಲೈಸ್ ಮೇಲೆ ಬೀಟೂರೂಟ್ ತುಂಡು, ಅದರ ಮೇಲೆ ಬಟಾಟೆ ತುಂಡು, ಅದರ ಮೇಲೆ ಟೊಮೆಟೊ ಮತ್ತು ಮುಳ್ಳು ಸೌತೆ ಇಡಿ. ಮೇಲಿನಿಂದ ಕ್ಯಾರೆಟ್ ತುರಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್ ಮೇಲೆ ಖಾರವಾದ ಹಸಿರು ಚಟ್ನಿ ಹರಡಿ. ತರಕಾರಿ ಹರಡಿದ ಬ್ರೆಡ್ ಸ್ಲೈಸ್ ಮೇಲೆ ಚಟ್ನಿ ಹರಡಿದ ಬ್ರೆಡ್ ಸ್ಲೈಸ್ ಇಟ್ಟು ತಿನ್ನಿರಿ. ಇದು ಬಹಳ ಆರೋಗ್ಯಕರ.