ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೨೪) - ಅಂತರಾಳ

ಅವಳ ನಗು ಒಂದೇ ಅವಳನ್ನ ಇಂದಿನವರೆಗೂ ಬದುಕಿಸಿದೆ. ಮುಖದ ತುಂಬಾ ನಗುವ ತುಂಬಿಕೊಂಡು ಎಲ್ಲರನ್ನೂ ಎದುರುಗೊಳ್ಳುತ್ತಾಳೆ, ಆ ನಗುವಿನ ಹಿಂದೆ ಕಣ್ಣಿನ ಒಳಗೆ ಒಂದಷ್ಟು ನೋವಿನ ಹನಿಗಳು ತಡೆಗಟ್ಟಿ ನಿಂತಿವೆ. ಪ್ರೀತಿಸಿದ ಜೀವ ಒಂದು ನೆನಪಿನ ಶಕ್ತಿ ಕಳೆದುಕೊಂಡು ಪುಟ್ಟ ಮಗುವಿನಂತೆ ಕಣ್ಣ ಮುಂದೆ ಮಲಗಿರುವಾಗ ಆಕೆ ಅದನ್ನು ಸಹಿಸಿಕೊಂಡು ನಗುತ್ತಿರುವ ಶಕ್ತಿ ಎಂತಹದು. ಈ ನೋವು ಯಾರಿಗೂ ಅರ್ಥವಾಗುತ್ತಿಲ್ಲ.

Image

ಅಂತರಿಕ್ಷ ನಡಿಗೆಯಲ್ಲೂ ದಾಖಲೆ ನಿರ್ಮಿಸಿದ ಸುನೀತಾ ವಿಲಿಯಮ್ಸ್!

"ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!" ಎಂದು ಖ್ಯಾತ ಉರ್ದು ಕವಿ ಅಲ್ಲಾಮ ಇಕ್ಬಾಲ್ ಅವರು ಹಾಡಿದ್ದರು. ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿವಿಧ ದಾಖಲೆಗಳನ್ನು ನಿರ್ಮಿಸುತ್ತಾರೆ; ಹಾಗೆಯೇ, ಅವರ ದಾಖಲೆಗಳನ್ನು ಸರಿಗಟ್ಟಲು ಹೊಸಬರು ಬರುತ್ತಾರೆ. ಆದರೆ, ಸುನೀತಾ ವಿಲಿಯಮ್ಸ್ ಅವರು ತಮ್ಮ ಹೆಸರನ್ನು ಬಾಹ್ಯಾಕಾಶದಲ್ಲಿ ಮಿನುಗುತ್ತಿರುವ ಅಗಣಿತ ತಾರೆಗಳೊಂದಿಗೆ ಬರೆದಿದ್ದಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೮೬) - ನೆಲ ಸೇವಂತಿಗೆ ಸಸ್ಯ

ಇಂದು ನಾವು  ವಿಟ್ಲದ ಸಮೀಪ ವಾಸ್ತವ್ಯ ಇರುವ ಶ್ರೀಕಾಂತ ಮತ್ತು ಮಂಜುಳರವರ ಅಡಿಕೆ ತೋಟಕ್ಕೆ ಹೋಗೋಣ. ನೀವಲ್ಲಿ ಬಳ್ಳಿಯೊಂದು ಏಕಾಂತದಲ್ಲಿ ಹಾಡುತ್ತಿರುವುದನ್ನು ಕೇಳಬಹುದು. ಆದರೆ ಅದು ತುಂಬಾ ಸೂಕ್ಷ್ಮ ವಾಗಿ ಆಲಿಸಿದರೆ ಮಾತ್ರ ಕೇಳಿಸುವುದು. 

Image

ಬಿಡುಗಡೆಯ ಹಾಡುಗಳು (ಭಾಗ ೨೦) - ಬಿಷ್ಟಪ್ಪ ಕುಬೇರಪ್ಪ ಮಂಡೇದ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ಬಿಷ್ಟಪ್ಪ ಕುಬೇರಪ್ಪ ಮಂಡೇದ ಎನ್ನುವ ಕವಿಯ ಒಂದು ಕವನವನ್ನು ಆಯ್ದು ಪ್ರಕಟ ಮಾಡಲಿದ್ದೇವೆ. ಈ ಕವನವು ಹಸ್ತಪ್ರತಿಯಲ್ಲಿದ್ದು ನಂತರ ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿದೆ. ಕುಬೇರಪ್ಪ ಅವರ ಬಗ್ಗೆ ಯಾವುದೇ ಮಾಹಿತಿಗಳು ದೊರಕುತ್ತಿಲ್ಲ.

Image

ಹರಟೆ ಕಷಾಯ

ಪುಸ್ತಕದ ಲೇಖಕ/ಕವಿಯ ಹೆಸರು
ರಾಜು ಅಡಕಳ್ಳಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೪

ಲೇಖಕರಾದ ರಾಜು ಅಡಕಳ್ಳಿಯವರ ನೂತನ ಕೃತಿ ಹರಟೆ ಕಷಾಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದು ಲೇಖಕರ ಬೆನ್ನು ತಟ್ಟಿದ್ದಾರೆ ಬಿಎಂಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ. ಈ ಕೃತಿಯ ಬಗ್ಗೆ ಲೇಖಕರಾದ ರಾಜು ಅಡಕಳ್ಳಿ ಇವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ…

ಸದಾ ನೆನಪಾಗುತ್ತಾರೆ ಇವರು...

ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ. ಎಲ್ಲಾ ಪಕ್ಷಗಳ ಅಧಿಕಾರದಾಹದ ಈ ಭಿನ್ನಮತೀಯ ಚಟುವಟಿಕೆಗಳ ದಿನನಿತ್ಯದ ನಿರಂತರ ಸುದ್ದಿಗಳನ್ನು ಕೇಳುತ್ತಾ ಮನಸ್ಸು ಏನೇನೋ ಯೋಚಿಸುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೨೨೩) - ಗಾಳಿಯ ತಪ್ಪೇ?

ನಮ್ಮ ಮನೆಯ ಮಕ್ಕಳನ್ನು ಹಾಳು ಮಾಡುವುದಕ್ಕೆ ಸುತ್ತ ಹಲವಾರು ಜನ ಕಾಯುತ್ತಿದ್ದಾರೆ. ನಮ್ಮೂರಿನಲ್ಲಿ ಒಂದಷ್ಟು ಮಧ್ಯದ ಅಂಗಡಿಗಳು ತೆರೆದುಕೊಂಡಿವೆ. ಇನ್ಯಾರೋ ಡ್ರಗ್ಸ್ ಗಾಂಜಾಗಳನ್ನು ಜನರಿಗೆ ಹಂಚುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಿದೆ, ಸಿಗರೇಟ್ ಗುಟ್ಕಾಗಳು ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುತ್ತಿವೆ. ಇದು ನನಗೆ ಭಯವಾಗ್ತಾ ಇರೋದು.

Image

ಉಚಿತಗಳ ಆವಾಂತರ (ಭಾಗ 3)

ಓದಿದ ನೆನಪಿದು. ಹೊಸದಾಗಿ ಬಿಡುಗಡೆಯಾದ, ಬಹಳ ಪ್ರಚಾರ ಪಡೆದ ಸಿನಿಮಾದ ಕಾರಣದಿಂದಾದ ಸಿನಿಮೀಯ ಘಟನೆಯೊಂದನ್ನು ತಿಳಿದರೆ ನೀವು ನಗುವಿರಾ! ಅಳುವಿರಾ! ನಾನರಿಯೆ. ಆತನೋ ಬಹಳ ಶ್ರೀಮಂತ. ಅವನ ಬಳಿಗೆ ಬಹಳ ಗಂಭೀರ ಆಕರ್ಷಕ ವ್ಯಕ್ತಿಯೊಬ್ಬ ಬಂದ. ಶ್ರೀಮಂತನೊಡನೆ, “ವಿದೇಶದಲ್ಲಿರುವ ನಿಮ್ಮ ಮಿತ್ರ ಹೇಳಿದ, ನೀವು ಬಹಳ ಒಳ್ಳೆಯವರು, ಕಲಾ ಪೋಷಕರು, ಕಳೆದ ವಾರ ಬಿಡುಗಡೆಯಾದ ಸಿನೇಮಾಕ್ಕೆ ಭಾರೀ ರಶ್.

Image